ಮಿಷನ್ 2019: ಮಹಾಮೈತ್ರಿ ಬೇಧಿಸಲು ಬಿಜೆಪಿ ಅಧ್ಯಕ್ಷ ಅಮಿತ್ ಶಾ ರಣತಂತ್ರ!

ಕಳೆದ ಎರಡು ತಿಂಗಳಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಸುಮಾರು 18 ರಾಜ್ಯಗಳಿಗೆ ಭೇಟಿ ನೀಡಿದ್ದಾರೆ. 395 ಲೋಕಸಭೆ ಸ್ಥಾನಗಳಲ್ಲಿ ಸಭೆ ಸಮಾಲೋಚನೆಗಳಲ್ಲಿ ಕಾರ್ಯತಂತ್ರ.  

Last Updated : Jul 3, 2018, 02:19 PM IST
ಮಿಷನ್ 2019: ಮಹಾಮೈತ್ರಿ ಬೇಧಿಸಲು ಬಿಜೆಪಿ ಅಧ್ಯಕ್ಷ ಅಮಿತ್ ಶಾ ರಣತಂತ್ರ! title=

ನವದೆಹಲಿ: ಒಂದೆಡೆ ಕಾಂಗ್ರೆಸ್ ಒಕ್ಕೂಟದ ರಚನೆಯ ಕಾರ್ಯದಲ್ಲಿ ನಿರತವಾಗಿದ್ದರೆ, ಬಿಜೆಪಿ ಮಿಷನ್ 2019 ಕಾರ್ಯವನ್ನು ಪ್ರಾರಂಭಿಸಿದೆ. ಆಗಾಗ್ಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿದೇಶಕ್ಕೆ ತೆರಳುವ ವರದಿ ಬರುವಂತೆಯೇ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ದೇಶದ ವಿಭಿನ್ನ ರಾಜ್ಯಗಳಲ್ಲಿ ಮುಂಬರುವ ಲೋಕಸಭಾ ಚುನಾವಣೆಯ ಕಾರ್ಯತಂತ್ರ ರೂಪಿಸುತ್ತಿದ್ದಾರೆ ಎಂದು ಹೇಳಬಹುದು.

ದೇಶವ್ಯಾಪಿ ಅಭಿಯಾನದಲ್ಲಿ ಅಮಿತ್ ಶಾ
ಈ ಸಂಚಿಕೆಯಲ್ಲಿ ಕಳೆದ ಎರಡು ತಿಂಗಳಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಸುಮಾರು 18 ರಾಜ್ಯಗಳಿಗೆ ಭೇಟಿ ನೀಡಿದ್ದಾರೆ. 395 ಲೋಕಸಭೆ ಸ್ಥಾನಗಳಲ್ಲಿ ಕಾರ್ಯತಂತ್ರ ರೂಪಿಸಿದ್ದಾರೆ. ಈ ಕಾರ್ಯಾಚರಣೆಯ ಅಡಿಯಲ್ಲಿ, ಅಮಿತ್ ಷಾ ಜುಲೈ 22 ರವರೆಗೂ ದೇಶದ ಎಲ್ಲಾ ರಾಜ್ಯಗಳಿಗೆ ಭೇಟಿ ನೀಡಲಿದ್ದಾರೆ. ಈ ಪ್ರವಾಸವು ಜುಲೈ 22 ರಂದು ಮಹಾರಾಷ್ಟ್ರ ಮತ್ತು ಗೋವಾದ ಸಭೆಯೊಂದಿಗೆ ಮುಕ್ತಾಯವಾಗುತ್ತದೆ.

2014ರಲ್ಲಿ ಅಧಿಕಾರಕ್ಕೆ ಬಂದ ನಂತರ ಅಮಿತ್ ಶಾ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಇದು ಅವರ ಐದನೇ ದೇಶವ್ಯಾಪಿ ಅಭಿಯಾನವಾಗಿದೆ. ವಿವಿಧ ಕಾರ್ಯಕ್ರಮಗಳಲ್ಲಿ ಈ ಪ್ರವಾಸಗಳು ನಡೆಯುತ್ತಿವೆ. ಆದರೆ ಈ ಕಾರ್ಯಾಚರಣೆಯು ಹಿಂದಿನ ಭೇಟಿಗಳಿಂದ ಭಿನ್ನವಾಗಿದೆ. ಮೊದಲು ಬೂತ್ ಮಟ್ಟದಲ್ಲಿ ಸಂಘಟನೆಯನ್ನು ಬಲಪಡಿಸುವುದು, ಕಾರ್ಯಕರ್ತರ ನೇಮಕಾತಿ, ಚಂದಾದಾರಿಕೆಗಳನ್ನು ಹೆಚ್ಚಿಸುವುದು ಮುಂತಾದ ಕಾರ್ಯಕ್ರಮಗಳನ್ನು ಇದು ಒಳಗೊಂಡಿತ್ತು. ಆದರೆ ಈ ಬಾರಿಯ ಪ್ರವಾಸ ಲೋಕಸಭೆಯ ಸಿದ್ಧತೆಗಳನ್ನು ಸಂಗ್ರಹಿಸಿ, ಪ್ರತಿ ಸೀಟೆಯ ಸಮೀಕ್ಷೆಯನ್ನು ಪರಿಗಣಿಸಲು ಮತ್ತು ರಾಜ್ಯಗಳಲ್ಲಿನ ವಿರೋಧದ ಅಂಚನ್ನು ಮೊಟಕುಗೊಳಿಸುವುದು ಈ ಪ್ರವಾಸದ ಉದ್ದೇಶವಾಗಿದೆ.

ಇದರಲ್ಲಿ ಅವರು ಎಸ್ಸಿ-ಎಸ್ಟಿ ಯೋಜನೆಯೊಂದಿಗೆ ಸಭೆಗಳ ಜೊತೆಗೆ, ಆಯಾ ರಾಜ್ಯಗಳ ಸದಸ್ಯರೊಂದಿಗೆ ಮಾತ್ರವಲ್ಲದೇ ಸಾಮಾಜಿಕ ಮಾಧ್ಯಮದ ತಂಡದೊಂದಿಗೆ ಚರ್ಚೆಗಳು ನಡೆಯಲಿವೆ. ಇದಲ್ಲದೆ ಆ ರಾಜ್ಯದ ಕೋರ್ ಗ್ರೂಪ್ ಜೊತೆಗೆ ಸಹ ಸಭೆಗಳು ನಡೆಯಲಿವೆ.
ಅಮಿತ್ ಶಾರವರು ಪ್ರತಿ ರಾಜ್ಯದಲ್ಲೂ ಆ ರಾಜ್ಯಕ್ಕೆ ತಕ್ಕಂತೆ ಒಂದು ಗುಂಪು ರಚಿಸಿದ್ದಾರೆ. 
ಆ ರಾಜ್ಯದ ಸಂಘಟನೆಯ ಹಿರಿಯ ಅಧಿಕಾರಿಗಳು, ಚುನಾವಣೆಯಲ್ಲಿ ಸ್ಪರ್ಧಿಸುವ ಅನುಭವವಿರುವ ಹಿರಿಯ ಮುಖಂಡರು, ವಿವಿಧ ಪಕ್ಷದ ಸಂಘಗಳ ಹಿರಿಯ ಅಧಿಕಾರಿಗಳು ಇದರಲ್ಲಿ ಸೇರಿದ್ದಾರೆ. ಈ ಸಭೆಗಳಲ್ಲಿ ಪ್ರತಿ ಸೀಟಿನಲ್ಲಿ ತಂತ್ರಗಳನ್ನು ಪರಿಗಣಿಸಲಾಗುತ್ತದೆ. 
ಸಂಸದರು ಮತ್ತು ಶಾಸಕರ ರಿಪೋರ್ಟ್ ಕಾರ್ಡ್ ಬಗ್ಗೆ ಚರ್ಚಿಸಲಾಗಿದೆ. ಪ್ರತಿ ಸೀಟಿನಲ್ಲಿ ಪಕ್ಷದ ಮತ್ತು ಸಹಾಯಕ ಸಂಘಟನೆಗಳು ನಡೆಸಿದ ಸಮೀಕ್ಷೆಗಳನ್ನು ಪರಿಗಣಿಸಲಾಗುವುದು.

ಈ ಸಭೆಗಳಲ್ಲಿ ಬಿಜೆಪಿ ಸಂಸದರ ಭವಿಷ್ಯ ಅಡಗಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಎಂಬುದನ್ನು ಈ ಸಭೆಗಳ ಮೇಲೆ ನಿರ್ಧಾರವಾಗಿರುತ್ತದೆ ಎಂಬುದು ಬಹುತೇಕ ಖಚಿತ ಎಂದು ಮೂಲಗಳು ತಿಳಿಸಿವೆ. ನರೇಂದ್ರ ಮೋದಿಯವರನ್ನು ಮತ್ತೆ ಪ್ರಧಾನ ಮಂತ್ರಿಯನ್ನಾಗಿ ಮಾಡಲು ಮತ್ತು ಬಿಜೆಪಿಯನ್ನು ಮರಳಿ ಅಧಿಕಾರಕ್ಕೆ ತರಲು ಒಕ್ಕೂಟವನ್ನು ಪರಿಗಣಿಸಲಾಗಿದೆ. ಉದಾಹರಣೆಗೆ, ಜುಲೈ 11 ರಂದು ಅಮಿತ್ ಶಾ ಬಿಹಾರಕ್ಕೆ ತೆರಳಲಿದ್ದು, ಅಲ್ಲಿ ನಿತೀಶ್ ಕುಮಾರ್ ಅವರನ್ನು ಭೇಟಿಯಾಗಲಿದ್ದಾರೆ. ಅಲ್ಲಿ ಜೆಡಿಯು ನೊಂದಿಗೆ ಸೀಟು ಹಂಚಿಕೆ ಕುರಿತು ಚರ್ಚೆ ನಡೆಯಲಿದೆ ಎಂದು ನಂಬಲಾಗಿದೆ.  ಅಂತೆಯೇ ಜುಲೈ 22 ರಂದು ಮಹಾರಾಷ್ಟ್ರ ಮತ್ತು ಗೋವಾದ ಸಭೆಯಲ್ಲಿ ಶಿವಸೇನೆಯೊಂದಿಗೆ ಸ್ಥಾನಗಳ ಹಂಚಿಕೆ ಬಗ್ಗೆ ಚರ್ಚೆ ನಡೆಯಲಿದೆ.

ಅನೇಕ ಸಂಸದರ ಸೀಟಿಗೆ ಕತ್ತರಿ
ಅಮಿತ್ ಶಾ ಎರಡು ದಿನಗಳ ಕಾಲ ಉತ್ತರ ಪ್ರದೇಶದ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಸಂಬಂಧ ಜುಲೈ 4 ರಂದು ಮಿರ್ಜಾಪುರದಲ್ಲಿ ಮತ್ತು ಜುಲೈ 5 ರಂದು ಆಗ್ರಾದಲ್ಲಿ ಸಭೆ ನಡೆಯಲಿದ್ದು, ಈ ಸಭೆಯಲ್ಲಿ, ಎಸ್ಪಿ-ಬಿಎಸ್ಪಿ ಸಂಭವನೀಯ ಮೈತ್ರಿ ಅಪಾಯಗಳು ಚರ್ಚಿಸಲಾಗುವುದು. 70 ಸಂಸದರ ಭವಿಷ್ಯದ ಮೇಲೆ ಈ ಸಭೆಗಳು ಪ್ರಭಾವ ಬೀರಲಿವೆ. ಇಲ್ಲಿಯವರೆಗೆ, ಹೆಚ್ಚಿನ ಸಂಸದರ ವರದಿ ತುಂಬಾ ಪ್ರೋತ್ಸಾಹದಾಯಕವಾಗಿಲ್ಲ. ಅಂತಹ ಸನ್ನಿವೇಶದಲ್ಲಿ ಅರ್ಧದಷ್ಟು ಸಂಸದರಿಗೆ ಮತ್ತೆ ಟಿಕೆಟ್ ದೊರೆಯುವುದು ಅನುಮಾನ ಎನ್ನಲಾಗಿದೆ.

Trending News