ನವದೆಹಲಿ : ಕೇಂದ್ರ ಸರ್ಕಾರವು ರೈತ ಸಮುದಾಯಕ್ಕೆ ಮತ್ತೊಂದು ಸಿಹಿಸುದ್ದಿ ನೀಡಿದ್ದು, ಭತ್ತ, ರಾಗಿ, ಜೋಳ ಸೇರಿದಂತೆ 12 ಬೆಳೆಗಳ ಬೆಂಬಲ ಬೆಲೆ ಏರಿಕೆ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿ(PM Narendra Modi) ನೇತೃತ್ವದಲ್ಲಿ ನಿನ್ನೆ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಭತ್ತ, ರಾಗಿ ಜೋಳ ಸೇರಿದಂತೆ 12 ಬೆಳೆಗಳ ಬೆಂಬಲ ಬೆಲೆ ಏರಿಕೆ ಮಾಡಲಾಗಿದೆ.
ಇದನ್ನೂ ಓದಿ : ಉದ್ಯೋಗದಾತರೇ ನಿಮ್ಮ 'PF' ಖಾತೆಗೆ Aadhar ಜೋಡಣೆ ಕಡ್ಡಾಯ : ಇಲ್ಲದಿದ್ದರೆ ಬರಲ್ಲ ಹಣ!
ಈ ಮೂಲಕ ದೇಶದ ಕೋಟ್ಯಾಂತರ ರೈತ(Farmer)ರಿಗೆ ಸಿಹಿಸುದ್ದಿ ನೀಡಿದ್ದಾರೆ. ಭತ್ತಕ್ಕೆ ನೀಡುತ್ತಿದ್ದ ಬೆಂಬಲ ಬೆಲೆಯನ್ನು ಪ್ರತಿ ಕ್ವಿಂಟಾಲ್ ಗೆ 72 ರೂ. ಏರಿಕೆ ಮಾಡಲಾಗಿದೆ. ಹಾಗೆಯೇ ಪ್ರತಿ ಕ್ವಿಂಟಲ್ ರಾಗಿಗೆ 82 ರೂ. ತೊಗರಿ ಹಾಗೂ ಉದ್ದಿನ ಬೆಳೆಗೆ 300 ರೂ. ಏರಿಕೆ ಮಾಡಲಾಗಿದೆ.
ಇದನ್ನೂ ಓದಿ : EPF Medical Advance: ಆಸ್ಪತ್ರೆಗೆ ದಾಖಲಾದರೆ ತಕ್ಷಣ ಸಿಗಲಿದೆ ಒಂದು ಲಕ್ಷ ರೂ.
ಬೆಂಬಲ ಬೆಲೆಯಲ್ಲಿ ಏರಿಕೆ ಮಾಡಿದ 12 ಬೆಳೆಗಳು :
ಭತ್ತ- 72 ರೂ.
ಸಜ್ಜೆ (Bajra)- 72 ರೂ.
ಇದನ್ನೂ ಓದಿ : 7th Pay Commission : ಕೇಂದ್ರ ನೌಕರರ ವೇತನದ ಮೇಲೆ ಪರಿಣಾಮ ಬೀರುವ 'Fitment Factor' ಬಗ್ಗೆ ನಿಮಗೆಷ್ಟು ಗೊತ್ತು?
ರಾಗಿ- 82 ರೂ,
ಮೆಕ್ಕೆಜೋಳ(Popcorn)- 20 ರೂ.
ತೊಗರಿ- 300 ರೂ.
ಹೆಸರು(Mung Bean)- 79 ರೂ.
ಉದ್ದು- 300 ರೂ.
ಇದನ್ನೂ ಓದಿ : PPF Account Inactive: ಈ ತಪ್ಪು ಮಾಡಿದರೆ ಬಂದ್ ಆಗಲಿದೆ ನಿಮ್ಮ ಪಿಪಿಎಫ್ ಖಾತೆ
ಹತ್ತಿ (ಮಧ್ಯಮ)(Cotton Medium)- 211 ರೂ,
ಹತ್ತಿ (ಉದ್ದ)- 200 ರೂ.
ಸೂರ್ಯಕಾಂತಿ- 130 ರೂ.
ನೈಗರ್ ಸೀಡ್- 235 ರೂ.
ಇದನ್ನೂ ಓದಿ : ಈಗ ಮೊದಲಿಗಿಂತಲೂ ಸೇಫ್ ಆಗಿರಲಿದೆ WhatsApp ಚಾಟ್ ಹೇಗೆ ತಿಳಿಯಿರಿ
ಸೋಯಬೀನ್- 70 ರೂ.
ಶೇಂಗಾ- 275 ರೂ. ರೂ. ಏರಿಕೆ ಮಾಡಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.