EPF Medical Advance: ಆಸ್ಪತ್ರೆಗೆ ದಾಖಲಾದರೆ ತಕ್ಷಣ ಸಿಗಲಿದೆ ಒಂದು ಲಕ್ಷ ರೂ.

EPF Medical Advance: ಯಾವುದೇ ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ಇಪಿಎಫ್ (EPF)ಸದಸ್ಯರು ತಮ್ಮ ಪಿಎಫ್ ಖಾತೆಯಿಂದ  1 ಲಕ್ಷ ರೂ.ಯನ್ನು ಮುಂಗವಾಗಿ ಪಡೆಯಬಹುದು.  ಇದಕ್ಕಾಗಿ ಅವರು ಯಾವುದೇ ರೀತಿಯ ಬಿಲ್ ನೀಡುವ ಅಗತ್ಯವಿಲ್ಲ.   

Written by - Ranjitha R K | Last Updated : Jun 11, 2021, 12:09 PM IST
  • ನೌಕರರ ಭವಿಷ್ಯ ನಿಧಿ ಸದಸ್ಯರಿಗೆ ಈಗ ಹೊಸ ಸೌಲಭ್ಯವನ್ನು ಪ್ರಾರಂಭಿಸಿದೆ.
  • ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ಸಿಗಲಿದೆ 1 ಲಕ್ಷ ರೂ.
  • ಹಣಕ್ಕಾಗಿ ಅಂದಾಜು ಬಿಲ್ ತೋರಿಸುವ ಅಗತ್ಯವಿಲ್ಲ
EPF Medical Advance: ಆಸ್ಪತ್ರೆಗೆ ದಾಖಲಾದರೆ ತಕ್ಷಣ ಸಿಗಲಿದೆ ಒಂದು ಲಕ್ಷ ರೂ.  title=
ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ಸಿಗಲಿದೆ 1 ಲಕ್ಷ ರೂ. (photo zee news)

ನವದೆಹಲಿ : EPF Medical Advance: ಹಣದ ತುರ್ತು ಯಾವಾಗ ಬೇಕಾದರೂ ಮನುಷ್ಯನಿಗೆ ಎದುರಾಗಬಹುದು. ಅದರಲ್ಲೂ ವೈದ್ಯಕೀಯ ಅವಶ್ಯಕತೆಗಳಿಗಾಗಿ ಹಣದ ತುರ್ತು ಅಗತ್ಯ ಬಿದ್ದರೆ ಏನು ಮಾಡುವುದು? ಸದ್ಯದ ಪರಿಸ್ಥಿತಿಯಲ್ಲಂತೂ ಹಣದ ಅವಶ್ಯಕತೆ ಯಾವಾಗ ಬೇಕಾದರೂ ಬರಬಹುದು. ಇದೀಗ ನೌಕರರ ಭವಿಷ್ಯ ನಿಧಿ (EPF) ಸದಸ್ಯರಿಗೆ ಈಗ ಹೊಸ ಸೌಲಭ್ಯವನ್ನು ಪ್ರಾರಂಭಿಸಿದೆ. ಇದರ ಪ್ರಕಾರ ಆಸ್ಪತ್ರೆಗೆ ದಾಖಲಾದ ಕೂಡಲೇ ನಿಮಗೆ 1 ಲಕ್ಷ ರೂ. ಸಿಗಲಿದೆ. 

ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ಸಿಗಲಿದೆ 1 ಲಕ್ಷ ರೂ
ಯಾವುದೇ ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ಇಪಿಎಫ್ (EPF)ಸದಸ್ಯರು ತಮ್ಮ ಪಿಎಫ್ ಖಾತೆಯಿಂದ  1 ಲಕ್ಷ ರೂ.ಯನ್ನು ಮುಂಗವಾಗಿ ಪಡೆಯಬಹುದು.  ಇದಕ್ಕಾಗಿ ಅವರು ಯಾವುದೇ ರೀತಿಯ ಬಿಲ್ ನೀಡುವ ಅಗತ್ಯವಿಲ್ಲ. ಜೂನ್ 1 ರಂದು ಇಪಿಎಫ್‌ಒ (EPFO) ಈ ಬಗ್ಗೆ ಸುತ್ತೋಲೆ ಹೊರಡಿಸಿದೆ.  ಕರೋನಾ ಸೇರಿದಂತೆ ಯಾವುದೇ ಮಾರಕ ಕಾಯಿಲೆಗೆ ಚಿಕಿತ್ಸೆ ಪಡೆಯುವ ಸಲುವಾಗಿ, ಆಸ್ಪತ್ರೆಗೆ ದಾಖಲಾದ ತಕ್ಷಣ, ವೈದ್ಯಕೀಯ ನೆರವಿಗೆ 1 ಲಕ್ಷ ರೂ.ಗಳನ್ನು ಮುಂಗಡವಾಗಿ ಪಡೆಯಬಹುದು.  

ಇದನ್ನೂ ಓದಿ : PPF Account Inactive: ಈ ತಪ್ಪು ಮಾಡಿದರೆ ಬಂದ್ ಆಗಲಿದೆ ನಿಮ್ಮ ಪಿಪಿಎಫ್ ಖಾತೆ

ಅಂದಾಜು ಬಿಲ್ ತೋರಿಸುವ ಅಗತ್ಯವಿಲ್ಲ :
ಈ ಮೊದಲು, ವೈದ್ಯಕೀಯ ತುರ್ತುಸ್ಥಿತಿಗಾಗಿ ಇಪಿಎಫ್ ಖಾತೆಯಿಂದ ಮುಂಗಡ ತೆಗೆದುಕೊಳ್ಳಲು ಇಪಿಎಫ್‌ಒ ಅನುಮತಿ ನೀಡಿತ್ತು. ಆದರೆ, ಈ ಮೊತ್ತವು ವೆಚ್ಚದ ಅಂದಾಜಿನ ಆಧಾರದ ಮೇಲೆ ಅಥವಾ ವೈದ್ಯಕೀಯ ಬಿಲ್‌ಗಳನ್ನು ಪಾವತಿ ಮಾಡಿದ ನಂತರವೇ ಸಿಗುತ್ತಿತ್ತು. ಆದರೆ ಈ ವೈದ್ಯಕೀಯ ಮುಂಗಡವು ಇದಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ಇದಕ್ಕಾಗಿ, ಇಪಿಎಫ್ ಸದಸ್ಯರಿಗೆ ಯಾವುದೇ ಬಿಲ್ ಅಥವಾ ಅಂದಾಜು ವೆಚ್ಚವನ್ನು (estimated cost) ತೋರಿಸುವ ಅಗತ್ಯವಿಲ್ಲ.  

ವೈದ್ಯಕೀಯ ಮುಂಗಡದ ಅಗತ್ಯತೆಗಳು : 
ತುರ್ತು ಸಂದರ್ಭದಲ್ಲಿ ಇಪಿಎಫ್ ಸದಸ್ಯರು ಈ ಮುಂಗಡವನ್ನು (Medical advance) ಹೇಗೆ ತೆಗೆದುಕೊಳ್ಳಬಹುದು ಎಂಬುದಕ್ಕೆ ಕೆಲವು ನಿಯಮಗಳಿವೆ. ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ಈ ಮುಂಗಡವನ್ನು ಇಪಿಎಫ್ ಸದಸ್ಯ ಅಥವಾ ಅವರ ಕುಟುಂಬಕ್ಕೆ ನೀಡಲಾಗುತ್ತದೆ.

ಇದನ್ನೂ ಓದಿ : Gold-Silver Rate : ಆಭರಣ ಪ್ರಿಯರಿಗೆ ಸಿಹಿ ಸುದ್ದಿ : ಚಿನ್ನದ ಬೆಲೆಯಲ್ಲಿ ₹ 1000 ಇಳಿಕೆ!

1. ರೋಗಿಯನ್ನು ಚಿಕಿತ್ಸೆಗಾಗಿ ಸರ್ಕಾರಿ , ಪಬ್ಲಿಕ್ ಸೆಕ್ಟರ್ ಯೂನಿಟ್,  CGHS ಪ್ಯಾನೆಲ್  ಆಸ್ಪತ್ರೆಗೆ ದಾಖಲಿಸಬೇಕು. ತುರ್ತು ಪರಿಸ್ಥಿತಿಯಲ್ಲಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರೆ, ನಂತರ ಅಧಿಕಾರಿ ಈ ಬಗ್ಗೆ ಪರಿಶೀಲನೆ ನಡೆಸುತ್ತಾರೆ. ನಂತರ ಅವರ ವೈದ್ಯಕೀಯ ಮುಂಗಡವನ್ನು ನೀಡಲಾಗುತ್ತದೆ.

2. ಉದ್ಯೋಗಿ ಅಥವಾ ಯಾವುದೇ ಕುಟುಂಬದ ಸದಸ್ಯರು ಆಸ್ಪತ್ರೆ ಮತ್ತು ರೋಗಿಯ ವಿವರಗಳನ್ನು ನೀಡುವ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಈ ಅರ್ಜಿಯಲ್ಲಿ ಬಿಲ್ ಎಷ್ಟಾಗಲಿದೆ ಎಂಬ ಅಂದಾಜು ಇಲ್ಲ ಎಂಬುವುದನ್ನು ನಮೂದಿಸಿರಬೇಕು. ಅಲ್ಲದೆ, ಮುಂಗಡ ಹಣವನ್ನು ಬಿಡುಗಡೆ ಮಾಡುವಂತೆ ಕೋರಿರಬೇಕು.

3. ಸದಸ್ಯ ಅಥವಾ ಯಾವುದೇ ಕುಟುಂಬದ ಸದಸ್ಯರಿಂದ ಅರ್ಜಿ ಸ್ವೀಕರಿಸಿದ ಒಂದು ಗಂಟೆಯೊಳಗೆ ಈ ಮೊತ್ತವನ್ನು ಬಿಡುಗಡೆ ಮಾಡಲಾಗುತ್ತದೆ

4. ಇದು ಕಳೆದ ತಿಂಗಳು EPFO ಮಂಡಳಿಯು ಜಾರಿ ಮಾಡಿದ ಕೋವಿಡ್ ಅಡ್ವಾನ್ಸ್‌ಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ. ಇದರಲ್ಲಿ, ನೀವು ಒಟ್ಟು ನಿಧಿಯ 75% ಪಡೆಯಬಹುದು, ಮತ್ತು ಅದು ನಾನ್ ರಿಫಂಡೇಬಲ್ ಆಗಿರುತ್ತದೆ. 

ಇದನ್ನೂ ಓದಿ : Home Loan Rates:ಈ ಬ್ಯಾಂಕ್ ನಲ್ಲಿ ಗೃಹ ಸಾಲದ ಮೇಲಿನ ಬಡ್ಡಿದರದಲ್ಲಿ ಕಡಿತ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News