Modi Cabinet Reshuffle 2021: ನೂತನ ಕೇಂದ್ರ ಸಚಿವರ ಪಟ್ಟಿ, ಯಾರಿಗೆ ಯಾವ ಖಾತೆ ಸಿಕ್ಕಿದೆ?

Modi Cabinet Reshuffle 2021:  ಮೋದಿ 2.0 ಕ್ಯಾಬಿನೆಟ್ ವಿಸ್ತರಣೆಯೊಂದಿಗೆ, ಇಲಾಖೆಗಳ ವಿಭಜನೆಯೂ ಸಂಭವಿಸಿದೆ. ವಿಶೇಷವೆಂದರೆ, ಹೊಸದಾಗಿ ರಚಿಸಲಾದ ಸಹಕಾರಿ ಸಚಿವಾಲಯವನ್ನು ಸರ್ಕಾರ ಬಹಳ ಮುಖ್ಯವೆಂದು ಪರಿಗಣಿಸಿದೆ. 

Written by - Yashaswini V | Last Updated : Jul 8, 2021, 07:33 AM IST
  • ಮೋದಿ 2.0 ರ ಕ್ಯಾಬಿನೆಟ್ ವಿಸ್ತರಣೆ
  • ಎಲ್ಲಾ ಸಚಿವರಿಗೆ ಇಲಾಖೆ ನಿಗದಿಪಡಿಸಲಾಗಿದೆ
  • ಗೃಹ ಸಚಿವ ಅಮಿತ್ ಶಾ ಹೆಗಲಿಗೆ ಸಹಕಾರಿ ಸಚಿವಾಲಯ
Modi Cabinet Reshuffle 2021: ನೂತನ ಕೇಂದ್ರ ಸಚಿವರ ಪಟ್ಟಿ, ಯಾರಿಗೆ ಯಾವ ಖಾತೆ ಸಿಕ್ಕಿದೆ? title=
ನೂತನ ಕೇಂದ್ರ ಸಚಿವರ ಪಟ್ಟಿ, ಯಾರಿಗೆ ಯಾವ ಖಾತೆ ಸಿಕ್ಕಿದೆ?

ನವದೆಹಲಿ: Modi Cabinet Reshuffle 2021- ಮೋದಿ 2.0 ಕ್ಯಾಬಿನೆಟ್ (Modi Cabinet Reshuffle 2021) ವಿಸ್ತರಿಸಿದ ಬೆನ್ನಲ್ಲೇ ಇಲಾಖೆಗಳನ್ನೂ ವಿಂಗಡಿಸಲಾಗಿದೆ. ವಿಶೇಷವೆಂದರೆ ಪ್ರಧಾನಿ ನರೇಂದ್ರ ಮೋದಿ ಅವರೇ ಈಗ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಮೇಲ್ವಿಚಾರಣೆಯನ್ನು ವಹಿಸಲಿದ್ದಾರೆ. ಗೃಹ ಸಚಿವ ಅಮಿತ್ ಶಾ ಅವರು ಮೊದಲ ಬಾರಿಗೆ ಅಸ್ತಿತ್ವಕ್ಕೆ ಬಂದ ಸಹಕಾರಿ ಸಚಿವಾಲಯವನ್ನು ನೋಡಿಕೊಳ್ಳಲಿದ್ದು, ಧರ್ಮೇಂದ್ರ ಪ್ರಧಾನ್ ಅವರ ಇಲಾಖೆಯನ್ನು ಬದಲಾಯಿಸಲಾಗಿದೆ. ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೂ ಉತ್ತಮ  ಖಾತೆ ನೀಡಲಾಗಿದೆ.

ಯಾವ ಸಚಿವರಿಗೆ ಯಾವ ಇಲಾಖೆ ನೀಡಲಾಗಿದೆ?
1. ಪಿಎಂ ನರೇಂದ್ರ ಮೋದಿ (PM Narendra Modi)- ಪ್ರಧಾನ ಮಂತ್ರಿ ಮತ್ತು ಉಸ್ತುವಾರಿ- ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಸಚಿವಾಲಯ, ಪರಮಾಣು ಇಂಧನ ಇಲಾಖೆ, ಬಾಹ್ಯಾಕಾಶ ಇಲಾಖೆ, ಎಲ್ಲಾ ಪ್ರಮುಖ ನೀತಿ ವಿಷಯಗಳು ಮತ್ತು ಯಾವುದೇ ಸಚಿವರಿಗೆ ಹಂಚಿಕೆಯಾಗದ ಎಲ್ಲಾ ಇತರ ಇಲಾಖೆಗಳು.

ಕ್ಯಾಬಿನೆಟ್ ಮಂತ್ರಿಗಳು (New Cabinet Ministers List):

1. ರಾಜ್ ನಾಥ್ ಸಿಂಗ್- ರಕ್ಷಣಾ ಸಚಿವ

2. ಅಮಿತ್ ಶಾ- ಗೃಹ ಸಚಿವ ಮತ್ತು ಸಹಕಾರ ಸಚಿವ

3. ನಿತಿನ್ ಜೈರಾಮ್ ಗಡ್ಕರಿ- ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ

4. ನಿರ್ಮಲಾ ಸೀತಾರಾಮನ್- ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ

5. ನರೇಂದ್ರ ಸಿಂಗ್ ತೋಮರ್- ಕೃಷಿ ಮತ್ತು ರೈತ ಕಲ್ಯಾಣ ಸಚಿವ

6. ಡಾ.ಸುಬ್ರಹ್ಮಣ್ಯಂ ಜೈಶಂಕರ್- ವಿದೇಶಾಂಗ ಸಚಿವ

7. ಅರ್ಜುನ್ ಮುಂಡಾ- ಬುಡಕಟ್ಟು ವ್ಯವಹಾರಗಳ ಸಚಿವ

8. ಸ್ಮೃತಿ ಜುಬಿನ್ ಇರಾನಿ- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ

ಇದನ್ನೂ ಓದಿ - Cabinet Reshuffle : ಕೇಂದ್ರ ಸಚಿವ ಸದಾನಂದಗೌಡ ಮತ್ತು ರಮೇಶ್ ಪೋಖ್ರಿಯಲ್ ರಾಜೀನಾಮೆ!

9. ಪಿಯೂಷ್ ಗೋಯಲ್ (Piyush Goyal)- ವಾಣಿಜ್ಯ ಮತ್ತು ಕೈಗಾರಿಕಾ ಸಚಿವ, ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವರು ಮತ್ತು ಜವಳಿ ಸಚಿವರು

10. ಧರ್ಮೇಂದ್ರ ಪ್ರಧಾನ್- ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವ

11. ಪ್ರಲ್ಹಾದ್ ಜೋಶಿ- ಸಂಸದೀಯ ವ್ಯವಹಾರಗಳ ಸಚಿವ, ಕಲ್ಲಿದ್ದಲು ಸಚಿವ, ಗಣಿ ಸಚಿವ

12. ನಾರಾಯಣ್ ಟಾಟು ರಾಣೆ- ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವ

13. ಸರ್ಬಾನಂದ ಸೋನೊವಾಲ್- ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವ ಮತ್ತು ಆಯುಷ್ ಮಂತ್ರಿ

14. ಮುಖ್ತಾರ್ ಅಬ್ಬಾಸ್ ನಖ್ವಿ- ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ

15. ಡಾ.ವಿರೇಂದ್ರ ಕುಮಾರ್- ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ

16. ಗಿರಿರಾಜ್ ಸಿಂಗ್- ಗ್ರಾಮೀಣಾಭಿವೃದ್ಧಿ ಸಚಿವ ಮತ್ತು ಪಂಚಾಯತಿ ರಾಜ್

17. ಜ್ಯೋತಿರಾದಿತ್ಯ ಎಂ. ಸಿಂಧಿಯಾ- ನಾಗರಿಕ ವಿಮಾನಯಾನ ಸಚಿವ

18. ರಾಮಚಂದ್ರ ಪ್ರಸಾದ್ ಸಿಂಗ್- ಉಕ್ಕಿನ ಸಚಿವ

19. ಅಶ್ವಿನಿ ವೈಷ್ಣವ್- ರೈಲ್ವೆ ಸಚಿವ, ಸಂವಹನ ಸಚಿವ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರು

20. ಪಶುಪತಿ ಕುಮಾರ್ ಪರಾಸ್- ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವ

21. ಗಜೇಂದ್ರ ಸಿಂಗ್ ಶೇಖಾವತ್ - ಜಲಶಕ್ತಿ ಸಚಿವ

22. ಕಿರೆನ್ ರಿಜಿಜು- ಕಾನೂನು ಮತ್ತು ನ್ಯಾಯ ಮಂತ್ರಿ

23. ರಾಜ್ ಕುಮಾರ್ ಸಿಂಗ್- ವಿದ್ಯುತ್ ಸಚಿವ ಮತ್ತು ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ

24. ಹರ್ದೀಪ್ ಸಿಂಗ್ ಪುರಿ- ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಮತ್ತು ವಸತಿ ಮತ್ತು ನಗರ ವ್ಯವಹಾರಗಳ ಸಚಿವ

25. ಮನ್ಸುಖ್ ಮಾಂಡವಿಯಾ- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಮತ್ತು ರಾಸಾಯನಿಕ ಮತ್ತು ರಸಗೊಬ್ಬರ ಸಚಿವರು

26. ಭೂಪೇಂದ್ರ ಯಾದವ್- ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಮತ್ತು ಕಾರ್ಮಿಕ ಮತ್ತು ಉದ್ಯೋಗ ಸಚಿವ

27. ಡಾ.ಮಹೇಂದ್ರ ನಾಥ್ ಪಾಂಡೆ- ಭಾರಿ ಕೈಗಾರಿಕೆಗಳ ಸಚಿವ

28. ಪುರುಷೋತ್ತಂ ರೂಪಾಲ- ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ

29. ಜಿ. ಕಿಶನ್ ರೆಡ್ಡಿ- ಸಂಸ್ಕೃತಿ ಸಚಿವರು; ಪ್ರವಾಸೋದ್ಯಮ ಸಚಿವರು ಮತ್ತು ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವರು

30. ಅನುರಾಗ್ ಸಿಂಗ್ ಠಾಕೂರ್- ಮಾಹಿತಿ ಮತ್ತು ಪ್ರಸಾರ ಸಚಿವ ಮತ್ತು ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ

ರಾಜ್ಯ ಸಚಿವರು- (MoS Independent Charge List):
1. ರಾವ್ ಇಂದರ್ಜಿತ್ ಸಿಂಗ್-
ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ), ಯೋಜನಾ ಸಚಿವಾಲಯದ ರಾಜ್ಯ ಸಚಿವರು (ಸ್ವತಂತ್ರ ಉಸ್ತುವಾರಿ), ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ರಾಜ್ಯ ಸಚಿವರು

2. ಡಾ.ಜಿತೇಂದ್ರ ಸಿಂಗ್- ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ); ವಿಜ್ಞಾನ ಸಚಿವಾಲಯದ ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ); ಪ್ರಧಾನಿ ಕಚೇರಿಯಲ್ಲಿ ರಾಜ್ಯ ಸಚಿವ; ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಸಚಿವಾಲಯದಲ್ಲಿ ರಾಜ್ಯ ಸಚಿವರು; ಪರಮಾಣು ಇಂಧನ ಇಲಾಖೆಯಲ್ಲಿ ರಾಜ್ಯ ಸಚಿವ; ಬಾಹ್ಯಾಕಾಶ ಇಲಾಖೆಯಲ್ಲಿ ರಾಜ್ಯ ಸಚಿವ

ಇದನ್ನೂ ಓದಿ - ರಾಜ್ಯಕ್ಕೆ ಸಿಗದ ಕ್ಯಾಬಿನೆಟ್ ದರ್ಜೆ ಸ್ಥಾನ, ನಾಲ್ವರಿಗೆ ರಾಜ್ಯ ಖಾತೆ

ರಾಜ್ಯ ಸಚಿವರು- (MoS in Modi Cabinet List) :
1. ಶ್ರೀಪಾದ್ ಯೆಸ್ಸೊ ನಾಯಕ್- ಬಂದರು, ಹಡಗು ಮತ್ತು ಜಲಮಾರ್ಗ ಸಚಿವಾಲಯದಲ್ಲಿ ರಾಜ್ಯ ಸಚಿವ; ಪ್ರವಾಸೋದ್ಯಮ ಸಚಿವಾಲಯದಲ್ಲಿ ರಾಜ್ಯ ಸಚಿವರು

2. ಫಗ್ಗನ್ ಸಿಂಗ್ ಕುಲಾಸ್ಟೆ- ಉಕ್ಕಿನ ಸಚಿವಾಲಯದಲ್ಲಿ ರಾಜ್ಯ ಸಚಿವ; ಗ್ರಾಮೀಣಾಭಿವೃದ್ಧಿ ಸಚಿವಾಲಯದಲ್ಲಿ ರಾಜ್ಯ ಸಚಿವರು

3. ಪ್ರಹ್ಲಾದ್ ಸಿಂಗ್ ಪಟೇಲ್- ಜಲಶಕ್ತಿ ಸಚಿವಾಲಯದಲ್ಲಿ ರಾಜ್ಯ ಸಚಿವ; ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯದಲ್ಲಿ ರಾಜ್ಯ ಸಚಿವರು

4. ಅಶ್ವಿನಿ ಕುಮಾರ್ ಚೌಬೆ- ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ರಾಜ್ಯ ಸಚಿವ; ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಲ್ಲಿ ರಾಜ್ಯ ಸಚಿವರು

5. ಅರ್ಜುನ್ ರಾಮ್ ಮೇಘವಾಲ್- ಸಂಸದೀಯ ವ್ಯವಹಾರಗಳ ಸಚಿವಾಲಯದಲ್ಲಿ ರಾಜ್ಯ ಸಚಿವ; ಸಂಸ್ಕೃತಿ ಸಚಿವಾಲಯದಲ್ಲಿ ರಾಜ್ಯ ಸಚಿವರು

6. ಜನರಲ್ (ನಿವೃತ್ತ) ವಿ.ಕೆ. ಸಿಂಗ್- ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದಲ್ಲಿ ರಾಜ್ಯ ಸಚಿವ; ನಾಗರಿಕ ವಿಮಾನಯಾನ ಸಚಿವಾಲಯದಲ್ಲಿ ರಾಜ್ಯ ಸಚಿವರು

7. ಕೃಷ್ಣ ಪಾಲ್- ವಿದ್ಯುತ್ ಸಚಿವಾಲಯದಲ್ಲಿ ರಾಜ್ಯ ಸಚಿವ; ಭಾರಿ ಕೈಗಾರಿಕಾ ಸಚಿವಾಲಯದಲ್ಲಿ ರಾಜ್ಯ ಸಚಿವರು

8. ದನ್ವೆ ರೌಸಾಹೇಬ್ ದಾದರಾವ್- ರೈಲ್ವೆ ಸಚಿವಾಲಯದಲ್ಲಿ ರಾಜ್ಯ ಸಚಿವ; ಕಲ್ಲಿದ್ದಲು ಸಚಿವಾಲಯದಲ್ಲಿ ರಾಜ್ಯ ಸಚಿವ; ಗಣಿ ಸಚಿವಾಲಯದಲ್ಲಿ ರಾಜ್ಯ ಸಚಿವ

9. ರಾಮದಾಸ್ ಅಥಾವಾಲೆ- ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದಲ್ಲಿ ರಾಜ್ಯ ಸಚಿವ

10. ಸಾಧ್ವಿ ನಿರಂಜನ್ ಜ್ಯೋತಿ- ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ರಾಜ್ಯ ಸಚಿವ; ಗ್ರಾಮೀಣಾಭಿವೃದ್ಧಿ ಸಚಿವಾಲಯದಲ್ಲಿ ರಾಜ್ಯ ಸಚಿವರು

11. ಡಾ. ಸಂಜೀವ್ ಕುಮಾರ್ ಬಾಲ್ಯನ್- ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ರಾಜ್ಯ ಸಚಿವ

12. ನಿತ್ಯಾನಂದ್ ರೈ- ಗೃಹ ಸಚಿವಾಲಯದಲ್ಲಿ ರಾಜ್ಯ ಸಚಿವ

ಇದನ್ನೂ ಓದಿ - "ಚುನಾವಣೆಯನ್ನು ಎದುರಿಟ್ಟುಕೊಂಡು ಸಂಪುಟ ವಿಸ್ತರಿಸಲಾಗಿದೆ ಹೊರತು, ಜನರ ಕಲ್ಯಾಣಕ್ಕಲ್ಲ"

13. ಪಂಕಜ್ ಚೌಧರಿ- ಹಣಕಾಸು ಸಚಿವಾಲಯದಲ್ಲಿ ರಾಜ್ಯ ಸಚಿವ

14. ಅನುಪ್ರಿಯಾ ಸಿಂಗ್ ಪಟೇಲ್- ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ರಾಜ್ಯ ಸಚಿವ

15. ಪ್ರೊ. ರು. ಪಿ. ಸಿಂಗ್ ಬಾಗೆಲ್- ಕಾನೂನು ಮತ್ತು ನ್ಯಾಯ ಸಚಿವಾಲಯದ ರಾಜ್ಯ ಸಚಿವ

16. ರಾಜೀವ್ ಚಂದ್ರಶೇಖರ್ (Rajiv Chandra Shekhar) - ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದಲ್ಲಿ ರಾಜ್ಯ ಸಚಿವ; ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದಲ್ಲಿ ರಾಜ್ಯ ಸಚಿವರು

17. ಶೋಭಾ ಕರಂದ್ಲಾಜೆ (Shobha Karandlaje)- ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದಲ್ಲಿ ರಾಜ್ಯ ಸಚಿವ

18. ಭಾನು ಪ್ರತಾಪ್ ಸಿಂಗ್ ವರ್ಮಾ- ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದ ರಾಜ್ಯ ಸಚಿವ

19. ದರ್ಶನ ವಿಕ್ರಮ್ ಜರ್ದೋಶ್ - ಜವಳಿ ಸಚಿವಾಲಯದಲ್ಲಿ ರಾಜ್ಯ ಸಚಿವರು ಮತ್ತು ರೈಲ್ವೆ ಸಚಿವಾಲಯದಲ್ಲಿ ರಾಜ್ಯ ಸಚಿವರು

20. ವಿ.ಮುರಳೀಧರನ್- ವಿದೇಶಾಂಗ ಸಚಿವಾಲಯದಲ್ಲಿ ರಾಜ್ಯ ಸಚಿವ; ಸಂಸದೀಯ ವ್ಯವಹಾರಗಳ ಸಚಿವಾಲಯದಲ್ಲಿ ರಾಜ್ಯ ಸಚಿವರು

21. ಮೀನಾಕ್ಷಿ ಲೇಖಿ- ವಿದೇಶಾಂಗ ಸಚಿವಾಲಯದಲ್ಲಿ ರಾಜ್ಯ ಸಚಿವೆ; ಸಂಸ್ಕೃತಿ ಸಚಿವಾಲಯದಲ್ಲಿ ರಾಜ್ಯ ಸಚಿವರು

22. ಸೋಮ ಪ್ರಕಾಶ್- ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದಲ್ಲಿ ರಾಜ್ಯ ಸಚಿವ

23. ರೇಣುಕಾ ಸಿಂಗ್ ಸಾರುಟಾ- ಬುಡಕಟ್ಟು ವ್ಯವಹಾರಗಳ ಸಚಿವಾಲಯದಲ್ಲಿ ರಾಜ್ಯ ಸಚಿವ

24. ರಾಮೇಶ್ವರ ತೆಲಿ- ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದಲ್ಲಿ ರಾಜ್ಯ ಸಚಿವ; ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದಲ್ಲಿ ರಾಜ್ಯ ಸಚಿವರು

25. ಕೈಲಾಶ್ ಚೌಧರಿ- ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದಲ್ಲಿ ರಾಜ್ಯ ಸಚಿವ

26. ಅನ್ನಪೂರ್ಣ ದೇವಿ- ಶಿಕ್ಷಣ ಸಚಿವಾಲಯದಲ್ಲಿ ರಾಜ್ಯ ಸಚಿವರು

27. ಎ. ನಾರಾಯಣಸ್ವಾಮಿ- ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದಲ್ಲಿ ರಾಜ್ಯ ಸಚಿವ

28. ಕೌಶಲ್ ಕಿಶೋರ್- ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದಲ್ಲಿ ರಾಜ್ಯ ಸಚಿವ

29. ಅಜಯ್ ಭಟ್- ರಕ್ಷಣಾ ಸಚಿವಾಲಯದಲ್ಲಿ ರಾಜ್ಯ ಸಚಿವ; ಪ್ರವಾಸೋದ್ಯಮ ಸಚಿವಾಲಯದಲ್ಲಿ ರಾಜ್ಯ ಸಚಿವರು

30. ಬಿ.ಎಲ್.ವರ್ಮಾ- ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವಾಲಯದಲ್ಲಿ ರಾಜ್ಯ ಸಚಿವ; ಸಹಕಾರ ಸಚಿವಾಲಯದಲ್ಲಿ ರಾಜ್ಯ ಸಚಿವರು

31. ಅಜಯ್ ಕುಮಾರ್- ಗೃಹ ಸಚಿವಾಲಯದ ರಾಜ್ಯ ಸಚಿವ

32. ದೇವಸಿಂಗ್ ಚೌಹಾನ್- ಸಂವಹನ ಸಚಿವಾಲಯದಲ್ಲಿ ರಾಜ್ಯ ಸಚಿವ

33. ಭಗವಂತ್ ಖುಬಾ- ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದಲ್ಲಿ ರಾಜ್ಯ ಸಚಿವ; ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದಲ್ಲಿ ರಾಜ್ಯ ಸಚಿವರು

34. ಕಪಿಲ್ ಮೊರೆಶ್ವರ್ ಪಾಟೀಲ್ - ಪಂಚಾಯತಿ ರಾಜ್ ಸಚಿವಾಲಯದಲ್ಲಿ ರಾಜ್ಯ ಸಚಿವ

35. ಪ್ರತಿಮಾ ಭೌಮಿಕ್- ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದಲ್ಲಿ ರಾಜ್ಯ ಸಚಿವ

36. ಡಾ. ಸುಭಾಷ್ ಸರ್ಕಾರ್- ಶಿಕ್ಷಣ ಸಚಿವಾಲಯದ ರಾಜ್ಯ ಸಚಿವ

37. ಡಾ. ಭಗವತ್ ಕಿಶನ್ರಾವ್ ಕರಡ್- ಹಣಕಾಸು ಸಚಿವಾಲಯದ ರಾಜ್ಯ ಸಚಿವ

38. ಡಾ.ರಾಜ್‌ಕುಮಾರ್ ರಂಜನ್ ಸಿಂಗ್- ವಿದೇಶಾಂಗ ಸಚಿವಾಲಯದ ರಾಜ್ಯ ಸಚಿವ

39. ಡಾ.ಭಾರ್ತಿ ಪ್ರವೀಣ್ ಪವಾರ್- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ರಾಜ್ಯ ಸಚಿವ

40. ಬಿಶ್ವೇಶ್ವರ ತುಡು- ಬುಡಕಟ್ಟು ವ್ಯವಹಾರಗಳ ಸಚಿವಾಲಯದಲ್ಲಿ ರಾಜ್ಯ ಸಚಿವರು, ಜಲಶಕ್ತಿ ಸಚಿವಾಲಯದಲ್ಲಿ ರಾಜ್ಯ ಸಚಿವರು

41. ಶಾಂತನು ಠಾಕೂರ್- ಬಂದರು, ಹಡಗು ಮತ್ತು ಜಲಮಾರ್ಗ ಸಚಿವಾಲಯದಲ್ಲಿ ರಾಜ್ಯ ಸಚಿವ

42. ಮುಂಜಾಪರ ಮಹೇಂದ್ರಭಾಯಿ- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದಲ್ಲಿ ರಾಜ್ಯ ಸಚಿವ; ಆಯುಷ್ ಸಚಿವಾಲಯದಲ್ಲಿ ರಾಜ್ಯ ಸಚಿವರು

43. ಜಾನ್ ಬಾರ್ಲಾ- ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದಲ್ಲಿ ರಾಜ್ಯ ಸಚಿವ

44. ಡಾ. ಎಲ್. ಮುರುಗನ್- ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ರಾಜ್ಯ ಸಚಿವರು, ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ರಾಜ್ಯ ಸಚಿವರು

45. ನಿಸಿತ್ ಪ್ರಮಾಣಿಕ್- ಗೃಹ ಸಚಿವಾಲಯದಲ್ಲಿ ರಾಜ್ಯ ಸಚಿವ; ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯದಲ್ಲಿ ರಾಜ್ಯ ಸಚಿವರು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News