ಪ್ರಧಾನಿ ಮೋದಿ 'ಮನ್ ಕಿ ಬಾತ್' ಬದಲಿಗೆ 'ಪೆಟ್ರೋಲ್ ಮತ್ತು ಲಸಿಕೆ ಕಿ ಬಾತ್'' ನಡೆಸಬೇಕು "

ಹೆಚ್ಚುತ್ತಿರುವ ಇಂಧನ ಬೆಲೆಗಳ ವಿಚಾರವಾಗಿ ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದಿರುವ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜೀ ಅವರು 'ಮನ್ ಕಿ ಬಾತ್' ಬದಲಿಗೆ 'ಪೆಟ್ರೋಲ್ ಮತ್ತು ಲಸಿಕೆ ಕಿ ಬಾತ್' ನಡೆಸಬೇಕು ಎಂದು ಬುಧವಾರ ಹೇಳಿದ್ದಾರೆ.

Written by - Zee Kannada News Desk | Last Updated : Jul 7, 2021, 06:15 PM IST
  • ಇಡೀ ಆರ್ಥಿಕತೆಯು ಮಂದಗತಿಯಲ್ಲಿದೆ. ಪ್ರತಿದಿನ ಇಂಧನ ಬೆಲೆಗಳು ಹೆಚ್ಚಾಗುತ್ತಿವೆ ಮತ್ತು ಕೇಂದ್ರ ಸರ್ಕಾರ ಸುಮ್ಮನೆ ಕುಳಿತಿದೆ. ನಮ್ಮ ಪ್ರಧಾನಿ ತಮ್ಮ ಮನ್ ಕಿ ಬಾತ್‌ನಲ್ಲಿ ಮಾತ್ರ ನಿರತರಾಗಿದ್ದಾರೆ.
  • ಹೆಚ್ಚುತ್ತಿರುವ ಇಂಧನ ಬೆಲೆಗಳ ವಿಚಾರವಾಗಿ ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದಿರುವ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜೀ ಅವರು 'ಮನ್ ಕಿ ಬಾತ್' ಬದಲಿಗೆ 'ಪೆಟ್ರೋಲ್ ಮತ್ತು ಲಸಿಕೆ ಕಿ ಬಾತ್' ನಡೆಸಬೇಕು ಎಂದು ಬುಧವಾರ ಹೇಳಿದ್ದಾರೆ.
ಪ್ರಧಾನಿ ಮೋದಿ 'ಮನ್ ಕಿ ಬಾತ್' ಬದಲಿಗೆ 'ಪೆಟ್ರೋಲ್ ಮತ್ತು ಲಸಿಕೆ ಕಿ ಬಾತ್'' ನಡೆಸಬೇಕು " title=

ನವದೆಹಲಿ: ಹೆಚ್ಚುತ್ತಿರುವ ಇಂಧನ ಬೆಲೆಗಳ ವಿಚಾರವಾಗಿ ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದಿರುವ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜೀ ಅವರು 'ಮನ್ ಕಿ ಬಾತ್' ಬದಲಿಗೆ 'ಪೆಟ್ರೋಲ್ ಮತ್ತು ಲಸಿಕೆ ಕಿ ಬಾತ್' ನಡೆಸಬೇಕು ಎಂದು ಬುಧವಾರ ಹೇಳಿದ್ದಾರೆ.

ಪ್ರಸ್ತಾವಿತ ಕೇಂದ್ರ ಕ್ಯಾಬಿನೆಟ್ ಪುನರ್ರಚನೆಯನ್ನು ಉಲ್ಲೇಖಿಸಿದ ಮಮತಾ ಬ್ಯಾನರ್ಜೀ (Mamata Banerjee), ಮಂತ್ರಿ ಮಂಡಳಿಯಿಂದ ಬಾಬುಲ್ ಸುಪ್ರಿಯೋ ಅವರನ್ನು ತೆಗೆದುಹಾಕಿರುವುದು' 2024 ರಲ್ಲಿ ತಮ್ಮ ಸರ್ಕಾರದ ಅಂತ್ಯದ ಆಗಮನಕ್ಕೂ ಮುಂಚೆಯೇ ಅದನ್ನು ಕಳೆದುಕೊಂಡಿದ್ದಾರೆ" ಎಂದು ತೋರಿಸುತ್ತದೆ ಎಂದು ಹೇಳಿದರು.

ಇದನ್ನೂ ಓದಿ: Calcutta High Court : ದೀದಿ ಸರ್ಕಾರಕ್ಕೆ ₹5 ಲಕ್ಷ ದಂಡವಿಧಿಸಿದ ಕಲ್ಕತ್ತಾ ಹೈಕೋರ್ಟ್!

ಅವರು ಪ್ರಧಾನಮಂತ್ರಿಗೆ ಬರೆದ ಯಾವುದೇ ಪತ್ರಗಳಿಗೆ ಇದುವರೆಗೆ ಪ್ರತಿಕ್ರಿಯೆ ಬಂದಿಲ್ಲ ಎಂದು ಹೇಳಿದ ದೀದಿ, ಜಗದೀಪ್ ಧಂಕರ್ ಅವರನ್ನು ರಾಜ್ಯಪಾಲರ ಸ್ಥಾನದಿಂದ ತೆಗೆದುಹಾಕುವಂತೆ ಮನವಿ ಮಾಡಿದರೂ, ಈ ಬಗ್ಗೆ ಯಾವುದೇ ಕ್ರಮ ತಗೆದುಕೊಂಡಿಲ್ಲ ಎಂದು ಹೇಳಿದರು.

ಇದನ್ನೂ ಓದಿ: "ನಮಗೆ ಈ ರೀತಿ ಅವಮಾನ ಮಾಡಬೇಡಿ"-ಪ್ರಧಾನಿ ಮೋದಿ ವಿರುದ್ಧ ದೀದಿ ಟೀಕಾ ಪ್ರಹಾರ

"ಇಡೀ ಆರ್ಥಿಕತೆಯು ಮಂದಗತಿಯಲ್ಲಿದೆ. ಪ್ರತಿದಿನ ಇಂಧನ ಬೆಲೆಗಳು ಹೆಚ್ಚಾಗುತ್ತಿವೆ ಮತ್ತು ಕೇಂದ್ರ ಸರ್ಕಾರ ಸುಮ್ಮನೆ ಕುಳಿತಿದೆ. ನಮ್ಮ ಪ್ರಧಾನಿ ತಮ್ಮ ಮನ್ ಕಿ ಬಾತ್‌ನಲ್ಲಿ ಮಾತ್ರ ನಿರತರಾಗಿದ್ದಾರೆ. ಬದಲಿಗೆ ಅವರು ಪೆಟ್ರೋಲ್ ಕಿ ಬಾತ್, ಡೀಸೆಲ್ ಕಿ ಬಾತ್ ಮತ್ತು ಲಸಿಕೆ ಕಿ ಬಾತ್ ಬಗ್ಗೆ ಮಾತನಾಡಲಿ "ಎಂದು ಅವರು ಒತ್ತಾಯಿಸಿದರು.

ಇದನ್ನೂ ಓದಿ: 150 ಬಿಜೆಪಿ ಕಾರ್ಯಕರ್ತರಿಗೆ ಸ್ಯಾನಿಟೈಸರ್ ಸಿಂಪಡಿಸಿ ಸ್ವಾಗತಿಸಿದ ಟಿಎಂಸಿ ನಾಯಕರು

ಬಿಜೆಪಿ ಸಂಸದ ಜಾನ್ ಬಾರ್ಲಾ ಅವರು ಕೇಂದ್ರ ಸಚಿವಾಲಯದಲ್ಲಿ ಸೇರ್ಪಡೆಗೊಳ್ಳುವ ಸಾಧ್ಯತೆಯ ಬಗ್ಗೆ ಕೇಳಿದಾಗ, ಉತ್ತರ ಬಂಗಾಳಕ್ಕೆ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಕ್ಕೆ ಒತ್ತಾಯಿಸಿದ ವಾರಗಳ ನಂತರ, ಇದು ಕೇಸರಿ ಪಕ್ಷದ "ವಿಭಜಕ ಮನಸ್ಥಿತಿಯನ್ನು" ಪ್ರತಿಬಿಂಬಿಸುತ್ತದೆ ಎಂದು ದೀದಿ ಹೇಳಿದರು."ನಾನು ಸಚಿವಾಲಯದ ಪುನರ್ರಚನೆಯ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಪುನರ್ರಚನೆಯು ಜನರ ದುಃಖಗಳನ್ನು ಕೊನೆಗೊಳಿಸುತ್ತದೆ?" ಅವರು ಪ್ರಶ್ನಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News