ಸತತ 12 ಬಾರಿಗೆ ಫೋರ್ಬ್ಸ್ ಶ್ರೀಮಂತ ಭಾರತೀಯರಲ್ಲಿ ಮುಖೇಶ್ ಅಂಬಾನಿಗೆ ಅಗ್ರಸ್ಥಾನ!

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರು ಸತತ 12 ಬಾರಿಗೆ  ಫೋರ್ಬ್ಸ್ ನ ಶ್ರೀಮಂತ ಭಾರತೀಯರ ಪಟ್ಟಿಯಲ್ಲಿ ಅಗ್ರಸ್ತಾನವನ್ನು ಕಾಯ್ದುಕೊಂಡಿದ್ದಾರೆ. ಭಾರತದ ಆರ್ಥಿಕತೆ ಸಂಕಷ್ಟದ ನಡುವೆಯೂ ಫೋರ್ಬ್ಸ್ 2019 ರ ಶ್ರೀಮಂತ ಭಾರತೀಯರ ಪಟ್ಟಿಯಲ್ಲಿ  51.4 ಬಿಲಿಯನ್  ಡಾಲರ್ ನಿವ್ವಳ ಮೌಲ್ಯದೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

Last Updated : Oct 11, 2019, 07:19 PM IST
ಸತತ 12 ಬಾರಿಗೆ ಫೋರ್ಬ್ಸ್ ಶ್ರೀಮಂತ ಭಾರತೀಯರಲ್ಲಿ ಮುಖೇಶ್ ಅಂಬಾನಿಗೆ ಅಗ್ರಸ್ಥಾನ!   title=

ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರು ಸತತ 12 ಬಾರಿಗೆ  ಫೋರ್ಬ್ಸ್ ನ ಶ್ರೀಮಂತ ಭಾರತೀಯರ ಪಟ್ಟಿಯಲ್ಲಿ ಅಗ್ರಸ್ತಾನವನ್ನು ಕಾಯ್ದುಕೊಂಡಿದ್ದಾರೆ. ಭಾರತದ ಆರ್ಥಿಕತೆ ಸಂಕಷ್ಟದ ನಡುವೆಯೂ ಫೋರ್ಬ್ಸ್ 2019 ರ ಶ್ರೀಮಂತ ಭಾರತೀಯರ ಪಟ್ಟಿಯಲ್ಲಿ  51.4 ಬಿಲಿಯನ್  ಡಾಲರ್ ನಿವ್ವಳ ಮೌಲ್ಯದೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಏತನ್ಮಧ್ಯೆ, ಕೈಗಾರಿಕೋದ್ಯಮಿ ಗೌತಮ್ ಅದಾನಿ ಎಂಟು ಸ್ಥಾನಗಳನ್ನು ಮೇಲಕ್ಕೆ ಏರಿ ಎರಡನೇ ಸ್ಥಾನಕ್ಕೆ ತಲುಪಿದ್ದು, ಅವರ ಆದಾಯವು 15.7 ಬಿಲಿಯನ್ ಆಗಿದೆ. ಅದಾನಿ ತನ್ನ ಸ್ವಂತ ರಾಜ್ಯವಾದ ಗುಜರಾತ್‌ನಲ್ಲಿ ಭಾರತದ ಅತಿದೊಡ್ಡ ಮುಂಡ್ರಾ ಬಂದರನ್ನು ನಿಯಂತ್ರಿಸುತ್ತಿದ್ದಾರೆ. ಅದಾನಿ ಗ್ರೂಪ್‌ ನ 13 ಬಿಲಿಯನ್ ಡಾಲರ್ ಆದಾಯದಲ್ಲಿ ವಿದ್ಯುತ್ ಉತ್ಪಾದನೆ ಮತ್ತು ಪ್ರಸರಣ, ಖಾದ್ಯ ತೈಲ, ರಿಯಲ್ ಎಸ್ಟೇಟ್ ಮತ್ತು ರಕ್ಷಣಾ, ಎಂದು ಫೋರ್ಬ್ಸ್ ಪಟ್ಟಿ ಮಾಡಿದೆ.

ಮುಖೇಶ್ ಅಂಬಾನಿ ಸತತ 12 ನೇ ವರ್ಷವೂ ಅತ್ಯಂತ ಶ್ರೀಮಂತ ಭಾರತೀಯರಾಗಿ ಉಳಿದಿದ್ದಾರೆ. ಭಾರತದ ಅತಿದೊಡ್ಡ ಮೊಬೈಲ್ ವಾಹಕಗಳಲ್ಲಿ ಒಂದಾದ ಜಿಯೋ ಮೂಲಕ ಕಳೆದ ಮೂರು ವರ್ಷದಲ್ಲಿ ಅವರು ತಮ್ಮ ನಿವ್ವಳ ಮೌಲ್ಯಕ್ಕೆ 4.1 ಬಿಲಿಯನ್ ಡಾಲರ್ ಸೇರಿಸಿದ್ದಾರೆ 'ಎಂದು ಫೋರ್ಬ್ಸ್ ಹೇಳಿದೆ.

ಭಾರತದ ಅಗ್ರ 10 ಶ್ರೀಮಂತರ ಪಟ್ಟಿಯಲ್ಲಿ ಹಿಂದೂಜಾ ಸಹೋದರರು, ಪಲ್ಲೊಂಜಿ ಮಿಸ್ತ್ರಿ, ಉದಯ್ ಕೋಟಕ್, ಶಿವ ನಾಡರ್, ರಾಧಾಕಿಶನ್ ದಮಾನಿ, ಗೋದ್ರೇಜ್ ಕುಟುಂಬ, ಲಕ್ಷ್ಮಿ ಮಿತ್ತಲ್ ಮತ್ತು ಕುಮಾರ್ ಬಿರ್ಲಾ ಅವರ ಹೆಸರನ್ನು ಒಳಗೊಂಡಿದೆ.

Trending News