ಅಮೆರಿಕ ಕಂಪನಿಗಳಿಗೆ ಮೋದಿ ಆಪ್'ನಿಂದ ಮಾಹಿತಿ ಸೋರಿಕೆ: ರಾಹುಲ್ ಗಾಂಧಿ

ಪ್ರಧಾನಿ ನರೇಂದ್ರ ಮೋದಿ ಅವರ ನಮೋ ಆಪ್(NaMo app)ನಿಂದ ಮಾಹಿತಿ ಸೋರಿಕೆ ಆಗಿದೆ ಎಂದು ಆರೋಪಿಸಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

Last Updated : Mar 25, 2018, 06:05 PM IST
ಅಮೆರಿಕ ಕಂಪನಿಗಳಿಗೆ ಮೋದಿ ಆಪ್'ನಿಂದ ಮಾಹಿತಿ ಸೋರಿಕೆ: ರಾಹುಲ್ ಗಾಂಧಿ title=

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ನಮೋ ಆಪ್(NaMo app)ನಿಂದ ಮಾಹಿತಿ ಸೋರಿಕೆ ಆಗಿದೆ ಎಂದು ಆರೋಪಿಸಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಮಾಹಿತಿ ಸೋರಿಕೆ ಕುರಿತು ಕೇಂಬ್ರಿಡ್ಜ್ ಅನಾಲಿಟಿಕಾ ವಿಶ್ಲೇಷಣಾ ವರದಿಯನ್ನು ಆಧರಿಸಿ ಟ್ವೀಟ್ ಮಾಡಿರುವ ರಾಹುಲ್, ಮೋದಿ ಆಪ್ ಮೂಲಕ ಸಂಗ್ರಹಿಸಲಾಗಿರುವ ಮಾಹಿತಿಯನ್ನು ಅಮೆರಿಕನ್ ಕಂಪೆನಿಗಳಿಗೆ ನೀಡಲಾಗಿದೆ ಎಂದು ದೂರಿದ್ದಾರೆ.

“ನನ್ನ ಹೆಸರು ನರೇಂದ್ರ ಮೋದಿ, ನಾನು ಭಾರತದ ಪ್ರಧಾನ ಮಂತ್ರಿಯಾಗಿದ್ದೇನೆ. ಈಗ ನೀವು ನನ್ನ ಅಧಿಕೃತ ಆಪ್ ಗೆ ಸೈನ್ ಅಪ್ ಆದರೆ ನಿಮ್ಮೆಲ್ಲಾ ಮಾಹಿತಿಯನ್ನು ನಾನು ಅಮೆರಿಕ ಕಂಪೆನಿಗಳಲ್ಲಿರುವ ನನ್ನ ಸ್ನೇಹಿತರಿಗೆ ನೀಡುತ್ತೇನೆ” ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.

ತಮ್ಮ ಟ್ವೀಟ್ನಲ್ಲಿ ಪ್ರಮುಖ ಮಾಧ್ಯಮಗಳ ವಿರುದ್ಧ ಕಿಡಿಕಾರಿರುವ ರಾಹುಲ್, ಇಂತಹ ಮುಖ್ಯವಾದ ವಿಚಾರಗಳನ್ನು ಮುಚ್ಚಿಹಾಕುತ್ತಿರುವ ನಿಮಗೆ ಧನ್ಯವಾದಗಳು ಎಂದು ವ್ಯಂಗ್ಯಮಾಡಿದ್ದಾರೆ. 

ರಾಹುಲ್ ತಮ್ಮ ಟ್ವೀಟ್ ನೊಂದಿಗೆ ಮಾಧ್ಯಮವೊಂದರ ವರದಿಯನ್ನು ಲಿಂಕ್ ಮಾಡಿದ್ದಾರೆ. ಈ ವರದಿಯಲ್ಲಿ ಮೋದಿ ಆಪ್ ಬಳಕೆ ಮಾಡುವ ಎಲ್ಲರ ಹೆಸರು, ಫೋಟೋ, ಇ-ಮೇಲ್‍ಗಳ ಮಾಹಿತಿ ಮೂರನೇ ವ್ಯಕ್ತಿಗೆ ಒದಗಿಸಲಾಗುತ್ತಿದೆ ಎಂದು ಆರೋಪಿಸಲಾಗಿದೆ.

Trending News