ನವದೆಹಲಿ: ಟ್ವಿಟರ್ ನಲ್ಲಿಅತಿ ಹೆಚ್ಚು ಫಾಲೋವಸ್ ಗಳನ್ನು ಹೊಂದಿರುವ ಸಕ್ರೀಯ ರಾಜಕಾರಣಿಗಳಲ್ಲಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಮುಂಚೂಣಿಯಲ್ಲಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಟ್ವಿಟ್ಟರ್ ಖಾತೆಯನ್ನು ಅಮಾನತುಗೊಳಿಸಿದ ನಂತರ 2ನೇ ಸ್ಥಾನದಲ್ಲಿದ್ದ ಮೋದಿ ಮೊದಲ ಸ್ಥಾನಕ್ಕೇರಿದ್ದಾರೆ.
ಪಿಎಂ ಮೋದಿ ಹೊಸ ದಾಖಲೆ :
ಕೆಲವು ದಿನಗಳ ಹಿಂದೆ, ಅತಿ ಹೆಚ್ಚು ಫಾಲೋವರ್ಸ್ ಗಳನ್ನು ಹೊಂದಿರುವ ಗರಿ ಡೋನಾಲ್ಡ್ ಟ್ರಂಪ್ (Donald Trump) ಮುಡಿಯಲ್ಲಿತ್ತು. ಆದರೆ, ಇತ್ತೀಚೆಗೆ ಅಮೆರಿಕಾದಲ್ಲಿ(America) ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪ್ರತಿಭಟನಾಕರರನ್ನು ಪ್ರಚೋದಿಸಿರುವ ಆರೋಪ ಡೋನಾಲ್ಡ್ ಟ್ರಂಪ್ ಮೇಲಿತ್ತು. ಈ ಹಿನ್ನೆಲೆಯಲ್ಲಿ ಟ್ರಂಪ್ ಸಾಮಾಜಿಕ ಜಾಲತಾಣಗಳಿಗೆ ನಿರ್ಬಂಧ ಹೇರಲಾಗಿತ್ತು. ಇದಾದ ನಂತರ ಅತಿ ಹೆಚ್ಚು ಫಾಲೋವರ್ಸ್ ಗಳನ್ನು (Followers) ಹೊಂದಿದ ಕೀರ್ತಿ ಈಗ ಪ್ರಧಾನಿ ನರೇಂದ್ರ ಮೋದಿ (Narendra Modi)ಅವರದ್ದಾಗಿದೆ. ಸಕ್ರೀಯ ರಾಜಕಾರಣಿಗಳ ಪೈಕಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ನಂಬರ್ ಒನ್ ನಾಯಕನ ಸ್ಥಾನದಲ್ಲಿ ಈಗ ನರೇಂದ್ರ ಮೋದಿ ಇದ್ದಾರೆ.
ಇದನ್ನೂ ಓದಿ: ಟ್ರಂಪ್ ಅವರ Facebook, Instagram ಖಾತೆ ಮೇಲಿನ ನಿಷೇಧ 2 ವಾರಗಳಿಗೆ ವಿಸ್ತರಣೆ
ಟ್ವಿಟರ್ನಲ್ಲಿ ಎಷ್ಟು ಫಾಲೋವರ್ಸ್ ಇದ್ದಾರೆ :
ಟ್ವಿಟರಲ್ಲಿ (Twitter) ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ 88.7 ಮಿಲಿಯನ್ ಅಂದರೆ 8 ಕೋಟಿ 87 ಲಕ್ಷ ಅನುಯಾಯಿಗಳನ್ನು ಹೊಂದಿದ್ದರು. ಭಾರತದ ಪ್ರಧಾನಿ ನರೇಂದ್ರ ಮೋದಿ 64.7 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ. ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ (Obama) ಅವರು ಟ್ವಿಟರ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಟ್ರಂಪ್ ಅವರಿಗಿಂತ ಹೆಚ್ಚಿನ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ. ಬರಾಕ್ ಒಬಾಮ ಟ್ವಿಟ್ಟರಿನಲ್ಲಿ 127.9 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಆದರೆ ಒಬಾಮಾ ಅವರು ಈಗ ಸಕ್ರಿಯ ರಾಜಕಾರಣಿಯಾಗಿಲ್ಲ. ಹಾಗಾಗಿ ಈ ಪಟ್ಟಿಯಲ್ಲಿ ನರೇಂದ್ರಮೋದಿ ಮುಂದಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.