ನವದೆಹಲಿ : ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಎರಡನೇ ಅವಧಿಯ ಮೊದಲ ಭಾರೀ ಕೇಂದ್ರ ಸಂಪುಟ ಪುನರ್ರಚನೆ ಮತ್ತು ವಿಸ್ತರಣೆಯ ಮಾತು ಜೋರಾಗಿ ಕೇಳಿ ಬರುತ್ತಿದೆ. ಸಂಪುಟ ಪುನರ್ರಚನೆ ಮತ್ತು ವಿಸ್ತರಣೆಯಲ್ಲಿ ಒಬಿಸಿ ಮತ್ತು ಪರಿಶಿಷ್ಟ ಜಾತಿ ಸಮುದಾಯದ ಸದಸ್ಯರ ದಾಖಲೆಯ ಮಟ್ಟದಲ್ಲಿ ಸಂಪುಟ ಸೇರುವ ಸಾಧ್ಯತೆ ಇದೆ. ಇಂದು ಸಂಜೆ 6 ಗಂಟೆಗೆ ಬೃಹತ್ ಕ್ಯಾಬಿನೆಟ್ ಪುನರ್ರಚನೆ ಮತ್ತು ವಿಸ್ತರಣೆಯ ನಿರೀಕ್ಷೆಯಿದೆ.
ಪುನರ್ರಚನೆ ಮತ್ತು ವಿಸ್ತರಣೆ(Reshuffle and Expansion) ಜುಲೈ 7 ಸಂಜೆ ಅಥವಾ ಜುಲೈ 8 ಬೆಳಿಗ್ಗೆ ನಡೆಯಲಿದೆ. ಹೊಸ ಮಂತ್ರಿಗಳ ಕ್ಯಾಬಿನೆಟ್ ನಲ್ಲಿ ಒಬಿಸಿ ಮತ್ತು ಎಸ್ಸಿ ವ್ಯಕ್ತಿಗಳಿಗೆ ಪ್ರಾತಿನಿಧ್ಯ ನೀಡಲು ಪಿಎಂ ಮೋದಿ ಸಜ್ಜಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ : Ministry of Cooperation: ಸಹಕಾರಿ ಆಂದೋಲನವನ್ನು ಬಲಪಡಿಸಲು ಹೊಸ ಸಚಿವಾಲಯವನ್ನು ರಚಿಸಿದ ಮೋದಿ ಸರ್ಕಾರ
ಸಚಿವರ ಪರಿಷತ್ತು(Cabinet) ಎಸ್ಸಿ ಮತ್ತು ಒಬಿಸಿ ಸಮುದಾಯಗಳಿಂದ 15 ರಿಂದ 20 ಸದಸ್ಯರನ್ನು ಆಯ್ಕೆ ಮಾಡಬಹುದು ಮತ್ತು ಪ್ರಾಬಲ್ಯವಿಲ್ಲದ ಸಣ್ಣ ಸಮುದಾಯಗಳ ಸದಸ್ಯರು ಸಹ ಸ್ಥಾನ ಕಂಡುಕೊಳ್ಳುವ ಸಾಧ್ಯತೆಯಿದೆ. ವರದಿಯ ಪ್ರಕಾರ ಮಹಿಳಾ ಪ್ರತಿನಿಧಿಗಳು ಸಹ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಿದೆ.
ಇದನ್ನೂ ಓದಿ : Covid-19 RT-PCR Testing: ಇನ್ಮುಂದೆ ಕೇವಲ ರೂ.299 ಕ್ಕೆ RT-PCR ಟೆಸ್ಟ್ ಮಾಡಿಸಬಹುದು
ಪಿಎಂ ಮೋದಿ(PM Modi)ಯವರ ಹೊಸ ಮಂತ್ರಿ ಮಂಡಳಿವು ದೇಶದ ಸಣ್ಣ ಪ್ರದೇಶಗಳಿಗೆ ಅಧಿಕಾರ ನೀಡುವ ಉದ್ದೇಶದಿಂದ ರಾಜ್ಯಗಳ ಉಪ-ಪ್ರದೇಶಗಳ ಪ್ರಾತಿನಿಧ್ಯವನ್ನು ನೋಡಲಿದೆ ಎಂದು ವರದಿ ಹೇಳಿದೆ. ಯುವಕರನ್ನು ಕ್ಯಾಬಿನೆಟ್ ಸೇರಿಸಲು ಒತ್ತು ನೀಡಲಾಗಿದೆ, ಮೂಲಗಳು ಎಎನ್ಐಗೆ ತಿಳಿಸಿದೆ.
ಇದನ್ನೂ ಓದಿ : Central Government Jobs: 2022ರಿಂದ ಸರ್ಕಾರಿ ನೌಕರಿ ಪಡೆಯಲು CET Exam, ಕೇಂದ್ರ ಸರ್ಕಾರದ ಮಹತ್ವದ ಘೋಷಣೆ
ಕ್ಯಾಬಿನೆಟ್ ಪುನರ್ರಚನೆ(Cabinet Reshuffle)ಯಲ್ಲಿ ವ್ಯಕ್ತಿಗಳ ಅನುಭವ ಮತ್ತು ಶಿಕ್ಷಣಕ್ಕೆ ಒತ್ತು ನೀಡಲಿದೆ, ಅಂದರೆ ಹೆಚ್ಚಿನ ವೃತ್ತಿಪರರು, Phd, ಎಂಬಿಎ ಮತ್ತು ಸ್ನಾತಕೋತ್ತರ ಪದವೀಧರರಿಗೆ ಆದ್ಯತೆ ಸ್ಥಾನ ನೀಡಲಾಗಿದೆ.
ಸಚಿವಾಲಯಗಳನ್ನು ನಡೆಸುತ್ತಿದ್ದ ಮತ್ತು ದೀರ್ಘಕಾಲದವರೆಗೆ ಶಾಸಕರಾಗಿದ್ದ ದೀರ್ಘ ಆಡಳಿತ ಅನುಭವ ಹೊಂದಿರುವ ನಾಯಕರಿಗೆ ಪ್ರಧಾನಿ ಮೋದಿಯವರ ಹೊಸ ಸಂಪುಟ(New Cabinet)ದಲ್ಲಿ ಆದ್ಯತೆ ನೀಡಲಾಗುವುದು ಎಂದು ವರದಿಯಾಗಿದೆ.
ಇದನ್ನೂ ಓದಿ : Corona Effect: ಜೂನ್ನಲ್ಲಿ ಮತ್ತೆ ಭಾರೀ ಕುಸಿತ ಕಂಡ ಜಿಎಸ್ಟಿ ಸಂಗ್ರಹ..!
ಪಿಎಂ ಮೋದಿ ಹೊಸ ಸಂಪುಟ ಸೇರುವ ಸಂಭಾವಿತರ ಪಟ್ಟಿ :
1) ಜ್ಯೋತಿರಾಡಿತ್ಯ ಸಿಂಧಿಯಾ (ಮಧ್ಯಪ್ರದೇಶ)
2) ಸರ್ವಾನಂದ್ ಸೋನೊವಾಲ್ (ಅಸ್ಸಾಂ)
3) ಸುಶೀಲ್ ಮೋದಿ (ಬಿಹಾರ)
4) ಪಶುಪತಿ ನಾಥ್ ಪರಾಸ್ (ಎಲ್ಜೆಪಿ)
5) ಆರ್ಸಿಪಿ ಸಿಂಘ್ / ಲಾಲನ್ ಸಿಂಗ್ (ಜೆಡಿಯು)
6) ಅನುಪ್ರಿಯಾ ಪಟೇಲ್ (ಆಪ್ನಾ ದಳ)
7) ರೀಟಾ ಬಹುಗುಣ ಜೋಶಿ
8) ಅಜಯ್ ಭಟ್
9) ನಾರಾಯಣ್ ರಾಣೆ (ಮಹಾರಾಷ್ಟ್ರ)
10) ಹೀನಾ ಗವಿತ್ (ಮಹಾರಾಷ್ಟ್ರ)
11) ವರುಣ್ ಗಾಂಧಿ (ಉತ್ತರ ಪ್ರದೇಶ)
12) ಪ್ರತಾಪ್ ಸಿಂಹ (ಕರ್ನಾಟಕ)
13) ಬಿಜೇಂದ್ರ ಸಿಂಗ್ (ಹರಿಯಾಣ)
14) ಪ್ರವೀಶ್ ವರ್ಮಾ
15) ಜಾಫರ್ ಇಸ್ಲಾಂ
16) ಅಶ್ವಿನಿ ವೈಷ್ಣವ್ (ಒಡಿಶಾ)
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.