ಲೋಕಸಭಾ ಚುನಾವಣೆ: ಛತ್ತೀಸ್​ಗಢದ ನಾರಾಯಣಪುರದಲ್ಲಿ ನಕ್ಸಲ್ ದಾಳಿ

2019 ರ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಪ್ರಾರಂಭವಾಗಿದೆ. 91 ಕ್ಷೇತ್ರಗಳಲ್ಲಿ ಒಟ್ಟು 1279 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

Last Updated : Apr 11, 2019, 09:19 AM IST
ಲೋಕಸಭಾ ಚುನಾವಣೆ: ಛತ್ತೀಸ್​ಗಢದ ನಾರಾಯಣಪುರದಲ್ಲಿ ನಕ್ಸಲ್ ದಾಳಿ title=
Pic Courtesy: ANI

ನವದೆಹಲಿ: ಪ್ರಸಕ್ತ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಇಂದು(ಎಪ್ರಿಲ್ 11) ನಡೆಯುತ್ತಿದೆ. 20 ರಾಜ್ಯಗಳ 91 ಕ್ಷೇತ್ರಗಳಿಗೆ ನಡೆಯುತ್ತಿರುವ ಮತದಾನದಲ್ಲಿ ಒಟ್ಟು 1279 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಹಳ ಉತ್ಸುಕರಾಗಿ ಮತದಾನದಲ್ಲಿ ಪಾಲ್ಗೊಳ್ಳುತ್ತಿರುವ ಜನತೆ, ಬೆಳಿಗ್ಗೆಯಿಂದ  ಸಾಲುಗಳಲ್ಲಿ ನಿಂತು ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ. 

ಏತನ್ಮಧ್ಯೆ, ಛತ್ತೀಸ್​ಗಢದ ನಾರಾಯಣಪುರದಲ್ಲಿ ನಕ್ಸಲರು ದಾಳಿ ಐಎಡಿ ಬ್ಲಾಸ್ಟ್ ಮಾಡಿದ್ದರೆ. ಫರಾಸ್ಗಾಂವ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಈ ವೇಳೆ ಯಾವುದೇ ಹಾನಿಯಾಗಿಲ್ಲ ಎಂದು ಎಸ್​ಪಿ ದೃಢಪಡಿಸಿದ್ದಾರೆ. 

ಮತ್ತೊಂದೆಡೆ, ಬಿಹಾರದ ಔರಂಗಾಬಾದ್ ಪಾರ್ಲಿಮೆಂಟರಿ ಪ್ರದೇಶದ ಸಿಪ್ಲಾದ ಬೂತ್ ನಂ 9ರ ಬಳಿ ಕೂಡಾ ಐಎಡಿ ಸ್ಫೋಟಕಗಳು ಕಂಡುಬಂದಿವೆ ಎಂದು ಗಯಾ ಎಸ್​ಪಿ ರಾಜೀವ್ ಮಿಶ್ರಾ ಸ್ಪಷ್ಟಪಡಿಸಿದ್ದಾರೆ.
 

Trending News