ನವದೆಹಲಿ : ರೂಪಾಂತರಿತ ಕರೋನಾ (coronavirus new strain) ಭಾರತದಲ್ಲಿ ದಾಳಿ ಇಡುತ್ತಿದೆ. ಪ್ರತಿದಿನ ಸರಿಸುಮಾರು 2 ಲಕ್ಷ ಜನರಿಗೆ ವೈರಸ್ (Virus) ಅಂಟುತ್ತಿದೆ. ಈ ವರ್ಷ ದಾಳಿ ಇಡುತ್ತಿರುವ ಕರೋನಾ ವೈರಸ್ ಅತ್ಯಂತ ಖತರ್ನಾಕ್ ದುಷ್ಪರಿಣಾಮಗಳನ್ನು ಉಂಟುಮಾಡುತ್ತಿದೆ.
ಕಣ್ಣು, ಕಿವಿಗೆ ನೇರ ದಾಳಿ..!
ತಜ್ಞರ ಪ್ರಕಾರ ರೂಪಾಂತರಿತ ಕರೋನಾ (CoronaVirus) ನೇರವಾಗಿ ಕಿವಿ ಮತ್ತು ಕಣ್ಣಿನ ಮೇಲೆ ಅಟ್ಯಾಕ್ ಮಾಡುತ್ತಿದೆ. ಈಗ ದಾಳಿ ಇಡುತ್ತಿರುವ ಕರೋನಾ (Coronavirus)ಮಹಾಮಾರಿಯ ಪ್ರಮುಖ ಲಕ್ಷಣಗಳು ಹೀಗಿವೆ.
1. ವೈರಲ್ ಜ್ವರ (Fever)
2. ಹೊಟ್ಟೆ ನೋವು
3. ಭೇದಿ
4. ಅಜೀರ್ಣ
5. ಹೊಟ್ಟೆಯಲ್ಲಿ ಗ್ಯಾಸ್
6. ಹಸಿವು ಆಗದಿರುವುದು
7. ಶರೀರದಲ್ಲಿ ನೋವು
8. ಆಸಿಡಿಟಿ (Acidity)
ಇದನ್ನೂ ಓದಿ : ದೆಹಲಿಯಲ್ಲಿ ಒಂದೇ ದಿನದಲ್ಲಿ 17 ಸಾವಿರಕ್ಕೂ ಅಧಿಕ ಕೊರೊನಾ ಪ್ರಕರಣಗಳ ದಾಖಲು
ಇವು ಎಂಟು ಲಕ್ಷಣಗಳು ತೋರುತ್ತಿದ್ದರೆ ಕರೋನಾ (COVID-19) ಸೋಂಕು ತಗುಲಿದೆ ಎಂದು ಊಹಿಸಬಹುದು. ಇಷ್ಟೇ ಅಲ್ಲ. ಇನ್ನೂ ಶಾಕಿಂಗ್ ನ್ಯೂಸ್ ಬರುತ್ತಿದೆ. ವೈರಸ್ ಸೋಂಕು ಹೆಚ್ಚುತ್ತಿರುವಂತೆ, ವೈರಸ್ನ ಬೇರೆ ಇತರ ಲಕ್ಷಣಗಳೂ ನಿಮ್ಮಲ್ಲಿ ಕಂಡು ಬರಬಹುದು.
ಕಿವಿ ಕೇಳಲ್ಲ, ಕಣ್ಣು ಕಾಣಿಸಲ್ಲ..!
ಕೆಲವೊಂದು ಪ್ರತಿಷ್ಠಿತ ಕರೋನಾ ಆಸ್ಪತ್ರೆಗಳ (Hospital) ವರದಿಗಳನ್ನು ಅವಲೋಕಿಸಿದರೆ, ಹೊಸತಾಗಿ ಅಡ್ಮಿಟ್ ಆಗುತ್ತಿರುವ ಕರೋನಾ ರೋಗಿಗಳಲ್ಲಿ ಕಿವಿ ಮತ್ತು ಕಣ್ಣಿನ ಸಮಸ್ಯೆ ಹೆಚ್ಚಾಗಿ ಬಾಧಿಸುತ್ತಿವೆ. ಡಾಕ್ಟರ್ಸ್ ಹೇಳುವ ಪ್ರಕಾರ ಹಲವು ಕರೋನಾ ರೋಗಿಗಳಿಗೆ ಕಿವಿ ಕೇಳಿಸುವುದೇ ಇಲ್ಲವಂತೆ. ಇನ್ನು ಕೆಲವರಿಗೆ ದೃಷ್ಟಿದೋಷ ಆವರಿಸಿಬಿಟ್ಟಿದೆ. ಕರೋನಾ ಈಗ ಶರೀರದ ಇತರ ಬೇರೆ ಅಂಗಾಂಗಗಳಿಗೆ ದಾಳಿ ಮಾಡುತ್ತಿರುವುದು ಸಾಮಾನ್ಯವಾಗಿ ಬಿಟ್ಟಿದೆ.
ಇದನ್ನೂ ಓದಿ : ಸರ್ಕಾರಿ ಆಸ್ಪತ್ರೆಯಿಂದ 320 ಡೋಸ್ ಕರೋನಾ ಲಸಿಕೆ ಕದ್ದ ಖದೀಮರು!
ಇಲ್ಲೊಂದು ಖುಷಿಯ ಸುದ್ದಿಯಿದೆ :
ಕರೋನಾದಿಂದ ಬಚಾವಾಗಬೇಕಾದರೆ ಮಾರ್ಗದರ್ಶಿ ಸೂತ್ರ ಪಾಲಿಸುವುದು ಬಿಟ್ಟು ಈಗ ನಮ್ಮಲ್ಲಿ ಬೇರೆ ಮಾರ್ಗ ಇಲ್ಲವಾಗಿದೆ. ಕರೋನಾ ದಿಂದ ದೂರ ಉಳಿಯಬೇಕಾದರೆ, ಕರೋನಾ ಮಾರ್ಗದರ್ಶಿ ಸೂತ್ರ ಪಾಲಿಸಲೇ ಬೇಕು. ಹೊಸ ಕರೋನಾದ ಮತ್ತೊಂದು ವಿಶೇಷತೆಯನ್ನು ವೈದ್ಯರು ಪತ್ತೆ ಹಚ್ಚಿದ್ದಾರೆ. ಅದೇನು ಅಂದರೆ, ನಿಮ್ಮಲ್ಲಿ ಇಮ್ಯೂನಿಟಿ (Immunity) ಬಲವಾಗಿದ್ದರೆ, ಹೊಸ ರೂಪಾಂತರಿತ ಕರೋನಾ ನಿಮ್ಮನ್ನು ಹೆಚ್ಚು ಕಾಡುವುದಿಲ್ಲ. ಗರಿಷ್ಠ ಒಂದು ವಾರದಲ್ಲಿ ರೋಗಿ ಗುಣವಾಗುತ್ತಾನೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.