ನೋಯ್ಡಾದಲ್ಲಿ ಮಂಗಳ ಮುಖಿಯರಿಗಾಗಿ ಮೆಟ್ರೋ ಸ್ಟೇಶನ್ ಮೀಸಲಿಟ್ಟ ಮೆಟ್ರೋ ನಿಗಮ

ನೋಯ್ಡಾ ಮೆಟ್ರೋ ರೈಲು ನಿಗಮ (ಎನ್‌ಎಂಆರ್‌ಸಿ) ಮಂಗಳವಾರ ಅಧಿಕೃತವಾಗಿ ತನ್ನ ನಿಲ್ದಾಣಗಳಲ್ಲಿ ಒಂದನ್ನು ಪ್ರೈಡ್ ಸ್ಟೇಷನ್ ಎಂದು ಟ್ರಾನ್ಸ್‌ಜೆಂಡರ್ ಸಮುದಾಯಕ್ಕೆ ಮೀಸಲಿಟ್ಟಿದೆ, ಇದು ಉತ್ತರ ಭಾರತದ ಮೆಟ್ರೋ ಸೇವೆಗಳಲ್ಲಿಯೇ ಮೊದಲನೆಯದು ಎನ್ನಲಾಗಿದೆ.

Last Updated : Oct 28, 2020, 10:51 AM IST
 ನೋಯ್ಡಾದಲ್ಲಿ ಮಂಗಳ ಮುಖಿಯರಿಗಾಗಿ ಮೆಟ್ರೋ ಸ್ಟೇಶನ್ ಮೀಸಲಿಟ್ಟ ಮೆಟ್ರೋ ನಿಗಮ title=
ಸಾಂದರ್ಭಿಕ ಚಿತ್ರ

ನವದೆಹಲಿ: ನೋಯ್ಡಾ ಮೆಟ್ರೋ ರೈಲು ನಿಗಮ (ಎನ್‌ಎಂಆರ್‌ಸಿ) ಮಂಗಳವಾರ ಅಧಿಕೃತವಾಗಿ ತನ್ನ ನಿಲ್ದಾಣಗಳಲ್ಲಿ ಒಂದನ್ನು ಪ್ರೈಡ್ ಸ್ಟೇಷನ್ ಎಂದು ಟ್ರಾನ್ಸ್‌ಜೆಂಡರ್ ಸಮುದಾಯಕ್ಕೆ ಮೀಸಲಿಟ್ಟಿದೆ, ಇದು ಉತ್ತರ ಭಾರತದ ಮೆಟ್ರೋ ಸೇವೆಗಳಲ್ಲಿಯೇ ಮೊದಲನೆಯದು ಎನ್ನಲಾಗಿದೆ.

ಗೌತಮ್ ಬುದ್ಧ ನಗರ ಸಂಸದ ಮಹೇಶ್ ಶರ್ಮಾ, ನೋಯ್ಡಾ ಶಾಸಕ ಪಂಕಜ್ ಸಿಂಗ್ ಮತ್ತು ಎನ್‌ಎಂಆರ್‌ಸಿ ವ್ಯವಸ್ಥಾಪಕ ನಿರ್ದೇಶಕ ರಿತು ಮಹೇಶ್ವರಿ ಈ ನಿಲ್ದಾಣದ ಹೊಸ ಹೆಸರನ್ನು ಅನಾವರಣಗೊಳಿಸಿದರು, ಇದನ್ನು ಮೊದಲು ಸೆಕ್ಟರ್ 50 ನಿಲ್ದಾಣ ಎಂದು ಕರೆಯಲಾಗುತ್ತಿತ್ತು. ಮೆಟ್ರೊ ನಿಲ್ದಾಣದಲ್ಲಿ ಸೇವೆಗಳಿಗಾಗಿ ಗುತ್ತಿಗೆದಾರರ ಮೂಲಕ ಎನ್‌ಎಂಆರ್‌ಸಿಯಿಂದ ನೇಮಕಗೊಂಡಿರುವ ಮಂಗಳ ಮುಖಿ ಸಮುದಾಯದ ಆರು ಸದಸ್ಯರು ನಿಲ್ದಾಣದಲ್ಲಿ ಉಪಸ್ಥಿತರಿದ್ದರು.

"ಈ ಸದಸ್ಯರಿಗೆ ನಿಯೋಜನೆಗೆ ಮೊದಲು ಎನ್‌ಎಂಆರ್‌ಸಿಯಿಂದ ಅಗತ್ಯ ತರಬೇತಿ ನೀಡಲಾಗಿದೆ" ಎಂದು ಎನ್‌ಎಂಆರ್‌ಸಿಯ ಕಾರ್ಪೊರೇಟ್ ಸಂವಹನಗಳ ಉಪ ಪ್ರಧಾನ ವ್ಯವಸ್ಥಾಪಕ ಸಂಧ್ಯಾ ಶರ್ಮಾ ಹೇಳಿದ್ದಾರೆ.

ರಾಜಧಾನಿಯಲ್ಲಿ ಮೆಟ್ರೋ ಕಾರ್ಯಾಚರಣೆ ಯಾವಾಗ ಪುನರಾರಂಭ? ಸಿಎಂ ಹೇಳಿದ್ದೇನು?

ಪಶ್ಚಿಮ ಯುಪಿಯ ನೋಯ್ಡಾ ಮತ್ತು ಗ್ರೇಟರ್ ನೋಯ್ಡಾ ಅವಳಿ ನಗರಗಳ ನಡುವೆ ಮೆಟ್ರೊವನ್ನು ನಿರ್ವಹಿಸುವ ಎನ್‌ಎಂಆರ್‌ಸಿ ಪ್ರಕಾರ, ಇದು ಉತ್ತರ ಭಾರತದಲ್ಲಿ ಮೆಟ್ರೋ ನೆಟ್‌ವರ್ಕ್ ಪರಿಚಯಿಸಿದ ಮೊದಲ ರೀತಿಯ ಉಪಕ್ರಮವಾಗಿದೆ.

"ಮಂಗಳ ಮುಖಿ ಸಮುದಾಯದ ಸದಸ್ಯರ ಸೇರ್ಪಡೆ ಮತ್ತು ಅರ್ಥಪೂರ್ಣ ಭಾಗವಹಿಸುವಿಕೆಗಾಗಿ ಈ ಕ್ರಮವನ್ನು ಎನ್‌ಎಂಆರ್‌ಸಿ ತೆಗೆದುಕೊಂಡಿದೆ. 2011 ರ ಜನಗಣತಿಯ ಪ್ರಕಾರ, ಭಾರತದಲ್ಲಿ 4.9 ಲಕ್ಷ ಟ್ರಾನ್ಸ್‌ಜೆಂಡರ್‌ಗಳು ಇದ್ದಾರೆ, ಅವರಲ್ಲಿ ಸುಮಾರು 35,000 ಜನರು ಎನ್‌ಸಿಆರ್‌ನಲ್ಲಿದ್ದಾರೆ. ಈ ಸಂಖ್ಯೆ ಈಗ ಅಧಿಕವಾಗಿರಬಹುದು ಎಂದು ಆಪರೇಟರ್ ಹೇಳಿದರು.

ಮಂಗಳಮುಖಿಯರ ರಕ್ಷಣೆಗಾಗಿ ಮತ್ತು ಅವರ ಕಲ್ಯಾಣಕ್ಕಾಗಿ ಕೆಲಸ ಮಾಡಲು ಕೇಂದ್ರವು ಅಂಗೀಕರಿಸಿದ ಟ್ರಾನ್ಸ್ಜೆಂಡರ್ ವ್ಯಕ್ತಿಗಳ (ಹಕ್ಕುಗಳ ಸಂರಕ್ಷಣೆ) ಕಾಯ್ದೆ 2019 ರಿಂದ ಈ ಉಪಕ್ರಮವು ಪ್ರೇರಿತವಾಗಿದೆ ಎಂದು ಅದು ಹೇಳಿದೆ.ಇದಕ್ಕೂ ಮೊದಲು 2017 ರಲ್ಲಿ ಕೇರಳದ ಕೊಚ್ಚಿ ಮೆಟ್ರೋ ರೈಲು ಲಿಮಿಟೆಡ್ 23 ಮಂಗಳ ಮುಖಿಯರನ್ನು ಮೊದಲ ಬಾರಿಗೆ ನೇಮಿಸಿದ್ದನ್ನು ನಾವು ಇಲ್ಲಿ ಸ್ಮರಿಸಬಹುದು,

DELHI METRO : ಮೆಟ್ರೋ ಸೇವೆ ಆರಂಭ, ಆದರೆ ಪ್ರಯಾಣಿಕರಿಗೆ ಸಿಗಲ್ಲ ಈ ಸೌಲಭ್ಯ

ಎನ್‌ಎಂಆರ್‌ಸಿ ಕುಟುಂಬದ ಭಾಗವಾಗಿ ಮಂಗಳ ಮುಖಿ ಸಮುದಾಯದ ಅರ್ಹ ಸದಸ್ಯರನ್ನು ಹೊಂದುವುದನ್ನು ಎನ್‌ಎಂಆರ್‌ಸಿ ಅತ್ಯಂತ ಹೆಮ್ಮೆ ಎಂದು ಭಾವಿಸುತ್ತಿರುವುದರಿಂದ ಈ ನಿಲ್ದಾಣಕ್ಕೆ 'ಪ್ರೈಡ್' ಎಂದು ಹೆಸರಿಸಲಾಗಿದೆ. ಇದು ಸಮುದಾಯದಲ್ಲಿ ಹೆಮ್ಮೆಯ ಭಾವವನ್ನು ಹುಟ್ಟುಹಾಕುತ್ತದೆ.ಮತ್ತು ಅವರ ವರ ಬಗ್ಗೆ  ತಪ್ಪು ಕಲ್ಪನೆ‌ಗಳನ್ನು ಹೊಗಲಾಡಿಸಲು ಸಹಾಯ ಮಾಡುತ್ತದೆ ಇದರಿಂದ ಅವರೂ ಸಹ ಗೌರವಯುತ ಜೀವನವನ್ನು ನಡೆಸಬಹುದು ಎಂದು ಎನ್ಎಂಆರ್ಸಿ ಹೇಳಿಕೆಯಲ್ಲಿ ತಿಳಿಸಿದೆ.

ಸಾಮಾನ್ಯ ಜನರು ಮತ್ತು ವಿವಿಧ ಎನ್‌ಜಿಒಗಳು ಮತ್ತು ಸಮುದಾಯಕ್ಕಾಗಿ ಕೆಲಸ ಮಾಡುವ ಇತರ ಸಂಸ್ಥೆಗಳಿಂದ ಸಲಹೆಗಳನ್ನು ಪಡೆದ ನಂತರ ಈ ಹೆಸರನ್ನು ಆಯ್ಕೆ ಮಾಡಲಾಗಿದೆ.ಎನ್‌ಎಂಆರ್‌ಸಿಯ ವೆಬ್‌ಸೈಟ್‌ನಲ್ಲಿ ಜನರಿಂದ ಸಲಹೆಗಳನ್ನು ಆನ್‌ಲೈನ್‌ನಲ್ಲಿ ಆಹ್ವಾನಿಸಲಾಯಿತು ಮತ್ತು ಗರಿಷ್ಠ ಜನರು ಪ್ರೈಡ್ ಹೆಸರನ್ನು ಸೂಚಿಸಿದರು.

ಪ್ರೈಡ್ ಸ್ಟೇಷನ್, ಟ್ರಾನ್ಸ್ಜೆಂಡರ್ಗಳಿಗೆ ಸಮರ್ಪಿತವಾಗಿದ್ದರೂ, ಎಲ್ಲಾ ಪ್ರಯಾಣಿಕರಿಗೆ ಮುಕ್ತವಾಗಿರುತ್ತದೆ. ಇದು ಮಂಗಳಮುಖಿ ಸಮುದಾಯಕ್ಕೆ ಉದ್ಯೋಗಾವಕಾಶಗಳನ್ನು ಸಹ ಒದಗಿಸುತ್ತದೆ ಎಂದು ಅದು ಹೇಳಿದೆ.ಮಂಗಳ ಮುಖಿ ಸಮುದಾಯದ ಸದಸ್ಯರ ಚೈತನ್ಯವನ್ನು ಸೂಚಿಸಲು ಪ್ರೈಡ್ ಸ್ಟೇಷನ್‌ನ ಕಲಾಕೃತಿಗಳು ಮತ್ತು ನೋಟವನ್ನು ಸಹ ಮಾಡಲಾಗಿದೆ.

 

Trending News