'ವಾರಕ್ಕೆ ನಾಲ್ಕು ದಿನ ಕೆಲಸದ ಯಾವುದೇ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ'

ವಾರದಲ್ಲಿ 4 ದಿನಗಳು ಮಾತ್ರ ಕೆಲಸ ಎಂಬಂಥ ಯಾವುದೇ ಹೊಸ ನಿಯಮಗಳನ್ನು ಜಾರಿಗೆ ತರಲಾಗುವುದಿಲ್ಲ ಎಂದು ಸಂತೋಷ್ ಗಂಗ್ವಾರ್ ಸಂಸತ್ತಿನಲ್ಲಿ ಹೇಳಿದ್ದಾರೆ.  ಈ ವದಂತಿಗಳನ್ನು ಕಾರ್ಮಿಕ ಸಚಿವರು ಸ್ಪಷ್ಟವಾಗಿ ನಿರಾಕರಿಸಿದ್ದಾರೆ.  

Written by - Ranjitha R K | Last Updated : Mar 26, 2021, 05:52 PM IST
  • 'ವಾರದಲ್ಲಿ 4 ದಿನಗಳು ಮಾತ್ರ ಕೆಲಸದ ನಿಯಮ ಜಾರಿಯಿಲ್ಲ'
  • ಸಂಸತ್ತಿನಲ್ಲಿ ಸ್ಪಷ್ಟನೆ ನೀಡಿದ ಕೇಂದ್ರ ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್
  • ಮಾಧ್ಯಮ ವರದಿಗಳನ್ನು ತಳ್ಳಿ ಹಾಕಿದ ಸಚಿವರು
'ವಾರಕ್ಕೆ ನಾಲ್ಕು ದಿನ ಕೆಲಸದ ಯಾವುದೇ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ'  title=
'ವಾರದಲ್ಲಿ 4 ದಿನಗಳು ಮಾತ್ರ ಕೆಲಸದ ನಿಯಮ ಜಾರಿಯಿಲ್ಲ' (file photo)

ನವದೆಹಲಿ: ಕಚೇರಿಗಳಲ್ಲಿ ವಾರಕ್ಕೆ 4 ದಿನಗಳು  ( 4 Days a week) ಮಾತ್ರ ಕೆಲಸ ಮಾಡಲು ಸರ್ಕಾರ ಅವಕಾಶ ನೀಡಲಿದೆ ಎಂದು ಈ ಹಿಂದೆ ವರದಿಗಳು ಬಂದಿತ್ತು.  ಈಗ ಈ ಸುದ್ದಿಯ ಬಗ್ಗೆ ಸರ್ಕಾರ  ಸ್ಪಷ್ಟೀಕರಣ ನೀಡಿದೆ.  ಸಂಸತ್ತಿನಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೇಂದ್ರ ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ (Santosh Gangwar) ಸರ್ಕಾರದ ಕಾರ್ಯಸೂಚಿಯಲ್ಲಿ ಅಂತಹ ಯಾವುದೇ ಪ್ರಸ್ತಾಪವನ್ನು ಸೇರಿಸಿಲ್ಲ ಎಂದು ಹೇಳಿದ್ದಾರೆ.

'ವಾರದಲ್ಲಿ 4 ದಿನಗಳವರೆಗೆ ಯಾವುದೇ ಕೆಲಸದ ಕೊಡುಗೆ ಇಲ್ಲ'
ವಾರದಲ್ಲಿ 4 ದಿನಗಳು ( 4 Days a week) ಮಾತ್ರ ಕೆಲಸ ಎಂಬಂಥ ಯಾವುದೇ ಹೊಸ ನಿಯಮಗಳನ್ನು ಜಾರಿಗೆ ತರಲಾಗುವುದಿಲ್ಲ ಎಂದು ಸಂತೋಷ್ ಗಂಗ್ವಾರ್ (Santosh Gangwar) ಸಂಸತ್ತಿನಲ್ಲಿ ಹೇಳಿದ್ದಾರೆ. . ಈ ವದಂತಿಗಳನ್ನು ಕಾರ್ಮಿಕ ಸಚಿವರು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ವಾರದಲ್ಲಿ 4 ದಿನಗಳ ಕೆಲಸ  ಅಥವಾ ವಾರದಲ್ಲಿ 40 ಗಂಟೆಗಳ ಕಾಲ, ಕೆಲಸದ ಯಾವುದೇ ಪ್ರಸ್ತಾಪವನ್ನು ಸರ್ಕಾರ (Central government) ಪರಿಗಣಿಸುತ್ತಿಲ್ಲ ಎಂದು ಅವರು ಹೇಳಿದ್ದಾರೆ.  ಇದರರ್ಥ ಕೇಂದ್ರ ನೌಕರರು ಮೊದಲಿನಂತೆ ತಮ್ಮ ಕೆಲಸವನ್ನು ಮುಂದುವರಿಸಬೇಕಾಗುತ್ತದೆ. ಅವರ ವಾರದ ರಜೆಗಳು (Weekly Off) ಮತ್ತು ಕೆಲಸದ ಸಮಯಗಳಲ್ಲಿ ಯಾವುದೇ  ಬದಲಾವಣೆಯಾಗುವುದಿಲ್ಲ .

ಇದನ್ನೂ ಓದಿ : Changes from April 1, 2021 - ಏಪ್ರಿಲ್ 1 ರಿಂದ ಹಣದುಬ್ಬರದ ಹೊಡೆತ, Car, Bike, TV, AC ಎಲ್ಲವು ದುಬಾರಿ

ದಿನಕ್ಕೆ ಹನ್ನೆರಡು ಗಂಟೆ ಕೆಲಸ ಮಾಡಿದರೆ ವಾರಕ್ಕೆ ಮೂರೂ ದಿನ ರಜೆ (Weekly Off) ಸಿಗಲಿದೆ. ಅಂದರೆ ವಾರಕ್ಕೆ ೪೮ ಗಂಟೆಗಳ ಕೆಲಸವಾಗಬೇಕು. ದಿನಕ್ಕೆ 8 ಗಂಟೆ ಕೆಲಸ ಅಂದರೆ ವಾರಕ್ಕೆ 6 ದಿನಗಳ ಕೆಲಸ. ಇದೇ  ವೇಳೆ ವಾರಕ್ಕೆ ನಾಲ್ಕು ದಿನ ಕೆಲಸ ಅಂದರೆ ದಿನಕ್ಕೆ ೧೨ ಗಂಟೆ ಕೆಲಸ ಎಂಬ ಬಗ್ಗೆ ಕೆಲ ದಿನಗಳ ಹಿಂದೆ ವರದಿಯಾಗಿತ್ತು. ಈ  ವರದಿಯ  ಬಗ್ಗೆ   ಸರ್ಕಾರ ಇದೀಗ ತನ್ನ ನಿಲುವನ್ನು ಪ್ರಕಟಿಸಿದೆ. 

ಇದನ್ನೂ ಓದಿ : ರಾಷ್ಟ್ರಪತಿ ಕೊವಿಂದ್ ಗೆ ಎದೆ ನೋವು, ಆಸ್ಪತ್ರೆಗೆ ದಾಖಲು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News