Non-vegetarian food: ಭಾರತದಲ್ಲಿ ಎಷ್ಟು ಜನರು ಮಾಂಸ, ಮೀನು & ಮೊಟ್ಟೆಗಳನ್ನು ಸೇವಿಸುತ್ತಾರೆ?

Non-vegetarian food in India: ಭಾರತದ ಜನಸಂಖ್ಯೆಯಲ್ಲಿ ಎಷ್ಟು ಸಸ್ಯಾಹಾರಿಗಳಿದ್ದಾರೆ? ಭಾರತವು ನಿಜವಾಗಿಯೂ ಸಸ್ಯಾಹಾರಿಗಳ ದೇಶವೇ ಅಥವಾ ಇದು ಕೇವಲ ಜನಪ್ರಿಯ ಪುರಾಣವೇ? ಬನ್ನಿ ರಾಷ್ಟ್ರೀಯ ಕುಟುಂಬ & ಆರೋಗ್ಯ ಸಮೀಕ್ಷೆಯ (NFHS) ದತ್ತಾಂಶ ಏನು ಹೇಳುತ್ತದೆ ಎಂದು ತಿಳಿಯಿರಿ...

Written by - Puttaraj K Alur | Last Updated : Sep 10, 2024, 08:46 PM IST
  • 145 ಕೋಟಿ ಜನಸಂಖ್ಯೆಯ ಭಾರತದಲ್ಲಿ ಎಷ್ಟು ಸಸ್ಯಾಹಾರಿಗಳಿದ್ದಾರೆ?
  • ಜನಸಂಖ್ಯೆಯ ಪ್ರಕಾರ ದೇಶದಲ್ಲಿ ಎಷ್ಟು ಪ್ರಮಾಣದ ಮಾಂಸಹಾರಿಗಳಿದ್ದಾರೆ?
  • ರಾಷ್ಟ್ರೀಯ ಕುಟುಂಬ ಮತ್ತು ಆರೋಗ್ಯ ಸಮೀಕ್ಷೆಯ ದತ್ತಾಂಶ ಏನು ಹೇಳುತ್ತದೆ?
Non-vegetarian food: ಭಾರತದಲ್ಲಿ ಎಷ್ಟು ಜನರು ಮಾಂಸ, ಮೀನು & ಮೊಟ್ಟೆಗಳನ್ನು ಸೇವಿಸುತ್ತಾರೆ? title=
ಭಾರತದಲ್ಲಿ ಮಾಂಸಹಾರ ಸೇವನೆ

Non-vegetarian food in India: ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ೭ ವರ್ಷದ ಬಾಲಕ ತನ್ನ ಊಟದ ಡಬ್ಬದಲ್ಲಿ ಚಿಕನ್ ಬಿರಿಯಾನಿ ತಂದು ತನ್ನ ಸಹಪಾಠಿಗಳಿಗೆ ಬಡಿಸಿದ ಆರೋಪದ ಮೇಲೆ ಖಾಸಗಿ ಶಾಲೆಯಿಂದ ಹೊರಹಾಕಲಾಗಿದೆ. ಇದರಿಂದ ಕೋಪಗೊಂಡ ಬಾಲಕನ ತಾಯಿ ಹಾಗೂ ಶಾಲೆಯ ಪ್ರಾಂಶುಪಾಲರ ನಡುವಿನ ಸಂಭಾಷಣೆ ಇದೀಗ ವೈರಲ್ ಆಗಿದೆ. ಇದಾದ ಬಳಿಕ ಅಧಿಕಾರಿಗಳು ತನಿಖೆಗೆ ಸಮಿತಿ ರಚಿಸಿದ್ದಾರೆ. ಆದರೆ ಬಾಲಕ ತನ್ನ ಸಹಪಾಠಿಗಳಿಗೆ ಚಿಕನ್ ಬಿರಿಯಾನಿ ಬಡಿಸಿರುವುದು ಆಕ್ಷೇಪಾರ್ಹ ಅಂತಾ ಪ್ರಾಂಶುಪಾಲರು ಸ್ಪಷ್ಟವಾಗಿ ಹೇಳಿದ್ದಾರೆ.

ಧಾರ್ಮಿಕ ನಂಬಿಕೆಗಳು  

ಅನೇಕ ಜನರು ಸಸ್ಯಾಹಾರವನ್ನು "ಶುದ್ಧ" ಮತ್ತು ಮಾಂಸಾಹಾರವನ್ನು "ಕೊಳಕು" ಎಂದು ಪರಿಗಣಿಸುವ ಈ ದೇಶದಲ್ಲಿ ಅನೇಕರು ತಮ್ಮ ತಟ್ಟೆಗಳಲ್ಲಿ ಯಾವ ರೀತಿಯ ಊಟ ಮಾಡಬೇಕೆಂಬ ಆಳವಾದ ಧಾರ್ಮಿಕ ನಂಬಿಕೆಗಳಿಂದ ಪ್ರೇರೇಪಿಸಲ್ಪಡುತ್ತಾರೆ. ಈ ರೀತಿಯ ವಿವಾದವು ಹೊಸದೇನಲ್ಲ. ಭಾರತದ ಜನಸಂಖ್ಯೆಯ ಪ್ರಕಾರ ದೇಶದಲ್ಲಿ ಎಷ್ಟು ಪ್ರಮಾಣದ ಸಸ್ಯಾಹಾರಿಗಳಿದ್ದಾರೆ? ಅಥವಾ ಮಾಂಸಹಾರಿಗಳಿದ್ದಾರೆ? ಭಾರತವು ನಿಜವಾಗಿಯೂ ಸಸ್ಯಾಹಾರಿಗಳ ದೇಶವೇ ಅಥವಾ ಇದು ಕೇವಲ ಜನಪ್ರಿಯ ಪುರಾಣವೇ? ಬನ್ನಿ ಸರ್ಕಾರ ಅಂದರೆ ಅಧಿಕೃತ ಅಂಕಿ-ಅಂಶಗಳು ಈ ಬಗ್ಗೆ ಏನು ಹೇಳುತ್ತದೆ ಎಂದು ತಿಳಿಯೋಣ.

ಭಾರತದಲ್ಲಿ ಎಷ್ಟು ಪ್ರಮಾಣದ ಸಸ್ಯಾಹಾರಿಗಳಿದ್ದಾರೆ?  

ಹೆಚ್ಚಿನ ಭಾರತೀಯರು ಮೊಟ್ಟೆ, ಕೋಳಿ, ಮಾಂಸ ಅಥವಾ ಮೀನುಗಳನ್ನು ಯಾವುದಾದರೂ ರೂಪದಲ್ಲಿ ತಿನ್ನುತ್ತಾರೆ. ದೇಶದ ಅರ್ಧದಷ್ಟು ಮಂದಿ ವಾರಕ್ಕೊಮ್ಮೆಯಾದರೂ ಮಾಂಸಹಾರ ಸೇವಿಸುತ್ತಾರೆ ಎನ್ನಲಾಗಿದೆ. ರಾಷ್ಟ್ರೀಯ ಕುಟುಂಬ ಮತ್ತು ಆರೋಗ್ಯ ಸಮೀಕ್ಷೆ-V (2019-21)ದ ಮಾಹಿತಿಯ ಪ್ರಕಾರ, ದೇಶದ ಶೇ.29.4ರಷ್ಟು ಮಹಿಳೆಯರು ಮತ್ತು ಶೇ.16.6ರಷ್ಟು ಪುರುಷರು ತಾವು ಎಂದಿಗೂ ಮೀನು, ಕೋಳಿ ಅಥವಾ ಮಾಂಸವನ್ನು ಸೇವಿಸುವುದಿಲ್ಲವೆಂದು ಹೇಳಿದ್ದಾರೆ. ಅದೇ ರೀತಿ 45.1% ಮಹಿಳೆಯರು ಮತ್ತು 57.3% ಪುರುಷರು ವಾರಕ್ಕೊಮ್ಮೆಯಾದರೂ ಮೀನು, ಕೋಳಿ ಅಥವಾ ಮಾಂಸವನ್ನು ಸೇವಿಸುತ್ತಾರೆಂದು ಹೇಳಿದ್ದಾರೆ. 

ಇದನ್ನೂ ಓದಿ: ಅತ್ಯಾಚಾರ ಆರೋಪಿ ಪ್ರಜ್ವಲ್‌ಗೆ ದೆಹಲಿಯಲ್ಲೂ ಮುಖಭಂಗ

ಭಾರತದಲ್ಲಿ ಮಾಂಸ ಸೇವನೆ ಹೆಚ್ಚುತ್ತಿದೆ!  

ದತ್ತಾಂಶ ವಿಶ್ಲೇಷಣೆಯ ಆಧಾರದ ಮೇಲೆ ಪ್ರಕಟವಾದ ವರದಿಗಳ ಪ್ರಕಾರ, ಭಾರತದಲ್ಲಿ ಮಾಂಸ ಸೇವನೆಯು ವಾಸ್ತವದಲ್ಲಿ ಹೆಚ್ಚುತ್ತಿದೆ ಎಂದು ಸ್ಪಷ್ಟವಾಗಿ ತೋರಿಸುತ್ತದೆ. ಏಕೆಂದರೆ ೫ ವರ್ಷಗಳ ಹಿಂದೆ, ರಾಷ್ಟ್ರೀಯ ಕುಟುಂಬ ಮತ್ತು ಆರೋಗ್ಯ ಸಮೀಕ್ಷೆ (NFHS)-IV (2015-16) ಪ್ರಕಾರ, ದೇಶದಲ್ಲಿ ಶೇ.29.9ರಷ್ಟು ಮಹಿಳೆಯರು ಮತ್ತು ಶೇ.21.6ರಷ್ಟು ಪುರುಷರು ತಾವು ಎಂದಿಗೂ ಮೀನು, ಕೋಳಿ ಅಥವಾ ಮಾಂಸವನ್ನು ಸೇವಿಸುವುದಿಲ್ಲವೆಂದು ಹೇಳಿದ್ದಾರೆ. ಅದೇ ರೀತಿ ಶೇ.42.8ರಷ್ಟು ಮಹಿಳೆಯರು ಮತ್ತು ಶೇ.48.9ರಷ್ಟು ಪುರುಷರು ವಾರಕ್ಕೊಮ್ಮೆಯಾದರೂ ಮೀನು, ಕೋಳಿ ಅಥವಾ ಮಾಂಸವನ್ನು ಸೇವಿಸುತ್ತಾರೆಂದು ಹೇಳಿದ್ದಾರೆ.

NFHS IV ಮತ್ತು NFHS Vನ ಡೇಟಾದ ಹೋಲಿಕೆ

೫ ವರ್ಷಗಳ ಮಧ್ಯಂತರದಲ್ಲಿ ಸಂಗ್ರಹಿಸಿದ NFHS IV ಮತ್ತು NFHS V ಡೇಟಾವನ್ನು ಹೋಲಿಸಿದರೆ, ದೇಶದಲ್ಲಿ ಮೀನು, ಕೋಳಿ ಅಥವಾ ಮಾಂಸವನ್ನು ಎಂದಿಗೂ ತಿನ್ನುವುದಿಲ್ಲವೆಂದು ವರದಿ ಮಾಡಿದ ಮಹಿಳೆಯರ ಸಂಖ್ಯೆಯಲ್ಲಿ ಶೇ.1.67ರಷ್ಟು ಕುಸಿತ ಕಂಡುಬಂದಿದೆ. ಅದೇ ರೀತಿ ಮೀನು, ಕೋಳಿ ಅಥವಾ ಮಾಂಸವನ್ನು ಎಂದಿಗೂ ತಿನ್ನುವುದಿಲ್ಲವೆಂದು ಹೇಳುವ ಪುರುಷರ ಸಂಖ್ಯೆಯಲ್ಲಿ ಶೇ.23ರಷ್ಟು ಕುಸಿತ ಕಂಡುಬಂದಿದೆ. ಇದೇ ವೇಳೆ ದೇಶದಲ್ಲಿ ಮೀನು, ಕೋಳಿ ಅಥವಾ ಮಾಂಸ ಸೇವಿಸುವ ಮಹಿಳೆಯರ ಸಂಖ್ಯೆ ಶೇ.5.37ರಷ್ಟು ಹೆಚ್ಚಿದ್ದು, ಪುರುಷರ ಸಂಖ್ಯೆ ಶೇ.17.18ರಷ್ಟು ಹೆಚ್ಚಾಗಿದೆ.

ಲ್ಯಾಕ್ಟೋ-ಸಸ್ಯಾಹಾರ ಮತ್ತು ಪ್ರಾದೇಶಿಕ ವ್ಯತ್ಯಾಸ   

ವಾಸ್ತವವಾಗಿ ತಮ್ಮನ್ನು ಸಸ್ಯಾಹಾರಿ ಎಂದು ಕರೆದುಕೊಳ್ಳುವ ಜನರು ಬಹುಶಃ ಲ್ಯಾಕ್ಟೋ-ಸಸ್ಯಾಹಾರಿಗಳು, ಅಂದರೆ ಅವರು ಹಸುಗಳು ಮತ್ತು ಎಮ್ಮೆಗಳಿಂದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸೇವಿಸುತ್ತಾರೆ. NFHS-V ಡೇಟಾ ಪ್ರಕಾರ, ಕೇವಲ ಶೇ.5.8ರಷ್ಟು ಮಹಿಳೆಯರು ಮತ್ತು ಶೇ.3.7ರಷ್ಟು ಪುರುಷರು ತಾವು ಹಾಲು ಅಥವಾ ಮೊಸರನ್ನು ಸಹ ಸೇವಿಸಲಿಲ್ಲವೆಂದು ವರದಿ ಮಾಡಿದ್ದಾರೆ. ಶೇ.48.8ರಷ್ಟು ಪುರುಷರು ಮತ್ತು ಮಹಿಳೆಯರು ಪ್ರತಿದಿನ ಹಾಲು ಅಥವಾ ಮೊಸರು ಸೇವಿಸುತ್ತಾರೆಂದು ಹೇಳಿದ್ದಾರೆ. ಅದೇ ರೀತಿ ಶೇ.72.2ರಷ್ಟು ಮಹಿಳೆಯರು ಮತ್ತು ಶೇ.79.8ರಷ್ಟು ಪುರುಷರು ಅವರು ವಾರಕ್ಕೊಮ್ಮೆಯಾದರೂ ಹಾಲು ಅಥವಾ ಮೊಸರು ಸೇವಿಸುತ್ತಾರೆಂದು ಹೇಳಿದ್ದಾರೆ.

ಹಾಲು & ಹಾಲಿನ ಉತ್ಪನ್ನ ಸೇವಿಸುವ ಜನರು ಕಡಿಮೆ ಅಥವಾ ಮಾಂಸ ಸೇವಿಸುತ್ತಾರೆ

ಗೃಹಬಳಕೆಯ ವೆಚ್ಚ ಸಮೀಕ್ಷೆ 2022-2023ರ ಮಾಹಿತಿಯ ಪ್ರಕಾರ, ಹಾಲಿನ ಸೇವನೆಯು ಸಸ್ಯಾಹಾರದ ಸಂಭವಕ್ಕೆ ನೇರವಾಗಿ ಸಂಬಂಧಿಸಿದೆ. ಹೆಚ್ಚು ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸೇವಿಸುವ ಜನರು ತುಂಬಾ ಕಡಿಮೆ ಅಥವಾ ಮಾಂಸವನ್ನು ತಿನ್ನುತ್ತಾರೆ. ವಾಸ್ತವವಾಗಿ ಭಾರತದಲ್ಲಿ ಹಾಲನ್ನು ಮಾಂಸಕ್ಕೆ ಪೌಷ್ಟಿಕಾಂಶದ ಪರ್ಯಾಯವಾಗಿ ನೋಡಲಾಗುತ್ತಿದೆ. ಒಟ್ಟಾರೆ ದೇಶದಲ್ಲಿ 14 ರಾಜ್ಯಗಳಲ್ಲಿ ಹಾಲಿನ ಮೇಲಿನ ಮಾಸಿಕ ತಲಾ ವೆಚ್ಚವು (MPCE) ಮೀನು, ಮಾಂಸ ಅಥವಾ ಮೊಟ್ಟೆಗಳ ಮೇಲಿನ ವೆಚ್ಚಕ್ಕಿಂತ ಹೆಚ್ಚಾಗಿರುತ್ತದೆ ಮತ್ತು 16 ರಾಜ್ಯಗಳು ಪ್ರತಿಯಾಗಿ ಇದು ಕಡಿಮೆ ಇದೆ.

ಇದನ್ನೂ ಓದಿ: ಭಾರತೀಯ ಇತಿಹಾಸದಲ್ಲಿ ಛಾಪು ಮೂಡಿಸಿದ ಈ ಸುಂದರ ರಾಣಿಯರ ಬಗ್ಗೆ ನಿಮಗೆಷ್ಟು ಗೊತ್ತು?

NFHS-V ದತ್ತಾಂಶದ ಪ್ರಕಾರ, ಒಟ್ಟಾರೆ ಈ ಹಾಲು ಸೇವಿಸುವ ರಾಜ್ಯಗಳಲ್ಲಿ ಕಡಿಮೆ ಪ್ರಮಾಣದ ಜನರು (ರಾಷ್ಟ್ರೀಯ ಸರಾಸರಿಗೆ ಹೋಲಿಸಿದರೆ) ಮೀನು, ಕೋಳಿ ಅಥವಾ ಮಾಂಸವನ್ನು ತಿನ್ನುತ್ತಾರೆಂದು ವರದಿ ತಿಳಿಸಿದೆ. ಈ ಸಂದರ್ಭದಲ್ಲಿ ಸಿಕ್ಕಿಂ, ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳು ಇದಕ್ಕೆ ಹೊರತಾಗಿದ್ದವು, ಅಲ್ಲಿ ಮಾಂಸದ ವೆಚ್ಚಕ್ಕಿಂತ ಹಾಲಿನ ವೆಚ್ಚ ಹೆಚ್ಚಾಗಿದೆ. ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿನ ಜನರು (ಪುರುಷರು ಮತ್ತು ಮಹಿಳೆಯರಿಗಾಗಿ) ಕನಿಷ್ಠ ವಾರಕ್ಕೊಮ್ಮೆ ಮೀನು, ಕೋಳಿ ಅಥವಾ ಮಾಂಸವನ್ನು ತಿನ್ನುತ್ತಾರೆ ಎಂದು ವರದಿ ತಿಳಿಸಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News