/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

ನವದೆಹಲಿ: ಕಾಲಕಾಲಕ್ಕೆ ಆಧಾರ್ ಕಾರ್ಡ್‌ನಲ್ಲಿ ನವೀಕರಿಸಲು ಸುಲಭ ವಿಧಾನಗಳನ್ನು ಯುಐಡಿಎಐ ತರುತ್ತಿದೆ. ಇತ್ತೀಚೆಗೆ, ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರವು ಆಧಾರ್‌ನಲ್ಲಿ ಇಮೇಲ್ ಐಡಿಯನ್ನು ನವೀಕರಿಸಲು ಹೊಸ ಮಾರ್ಗವನ್ನು ಪರಿಚಯಿಸಿದೆ, ಇದನ್ನು ಬಳಸಿಕೊಂಡು ನಿಮ್ಮ ಆಧಾರ್‌ನಲ್ಲಿನ ಮೇಲ್ ಐಡಿಯನ್ನು ಸುಲಭವಾಗಿ ಬದಲಾಯಿಸಬಹುದು.

1. UIDAI ಟ್ವೀಟ್:


ಆಧಾರ್ ಕಾರ್ಡ್ ಹೊಂದಿರುವವರಿಗೆ ಇಂದಿನಿಂದ ಇ-ಮೇಲ್ ಐಡಿ ನವೀಕರಣಕ್ಕಾಗಿ ಯಾವುದೇ ದಾಖಲೆಗಳ ಅಗತ್ಯವಿಲ್ಲ ಎಂದು ಯುಐಡಿಎಐ(UIDAI ) ಈ ಬಗ್ಗೆ ಟ್ವೀಟ್ ಮಾಡಿದೆ. ನಿಮ್ಮ ಹತ್ತಿರರ ಆಧಾರ್ ಕೇಂದ್ರಕ್ಕೆ ಭೇಟಿ ನೀಡಿದ್ ನೀವು ನಿಮ್ಮ ಆಧಾರ್ ಕಾರ್ಡಿನಲ್ಲಿ  ಇಮೇಲ್ ಐಡಿ ನವೀಕರಣಕ್ಕಾಗಿ ಅರ್ಜಿ ಸಲ್ಲಿಸಬಹುದು. ಇಲ್ಲಿ ಅರ್ಜಿ ಸಲ್ಲಿಸಿದ ನಂತರ, ಇಲಾಖೆ ಆಧಾರ್‌ನಲ್ಲಿ ನಿಮ್ಮ ಮೇಲ್ ಐಡಿಯನ್ನು ನವೀಕರಿಸುತ್ತದೆ, ಅದರ ನಂತರ ನಿಮ್ಮ ಮೇಲ್‌ನಲ್ಲಿ ಆಧಾರ್‌ಗೆ ಸಂಬಂಧಿಸಿದ ಎಲ್ಲಾ ಎಚ್ಚರಿಕೆಗಳನ್ನು ನೀವು ಪಡೆಯುತ್ತೀರಿ.

2. ಇದಕ್ಕೆ ತಗುಲುವ ಶುಲ್ಕ:


ಆಧಾರ್‌ನಲ್ಲಿ ನಿಮ್ಮ ಮೇಲ್ ಐಡಿಯನ್ನು ನವೀಕರಿಸಲು 50 ರೂಪಾಯಿಗಳನ್ನು ಸಹ ಪಾವತಿಸಬೇಕಾಗುತ್ತದೆ.

3. ಈ ಬದಲಾವಣೆಗಳಿಗೂ ಶುಲ್ಕ:


ಆಧಾರ್ ಕೇಂದ್ರಗಳಲ್ಲಿ ಹೊಸ ಆಧಾರ್ ದಾಖಲಾತಿಯ ಹೊರತಾಗಿ, ಹೆಸರು, ವಿಳಾಸ, ಮೊಬೈಲ್ ಸಂಖ್ಯೆ, ಇಮೇಲ್ ಐಡಿ, ಹುಟ್ಟಿದ ದಿನಾಂಕ, ಲಿಂಗ ಮತ್ತು ಬಯೋಮೆಟ್ರಿಕ್ಸ್ ಅನ್ನು ನವೀಕರಿಸುವ ಸೌಲಭ್ಯ ಲಭ್ಯವಿದೆ. ಆಧಾರ್‌ನಲ್ಲಿ ಹೆಸರು, ವಿಳಾಸ, ಲಿಂಗ, ಮೊಬೈಲ್ ಸಂಖ್ಯೆ ಮುಂತಾದ ಯಾವುದೇ ವಿವರಗಳನ್ನು ನೀವು ನವೀಕರಿಸಿದರೆ, ಅದಕ್ಕಾಗಿ ನೀವು ಆಧಾರ್ ಕೇಂದ್ರದಲ್ಲಿ 50 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. 

4. ಅಧಿಕೃತ ವೆಬ್‌ಸೈಟ್ ಪರಿಶೀಲಿಸಿ:


ಆಧಾರ್‌ನಲ್ಲಿನ ಯಾವುದೇ ರೀತಿಯ ನವೀಕರಣಗಳಿಗಾಗಿ, ನೀವು ಯುಐಡಿಎಐನ ಅಧಿಕೃತ ವೆಬ್‌ಸೈಟ್‌ಗೆ ಹೋಗಬೇಕು https://uidai.gov.in/. ಈ ವೆಬ್‌ಸೈಟ್‌ನಲ್ಲಿ, ನೀವು ಆಧಾರ್ ನವೀಕರಿಸುವ ಬಗ್ಗೆ ಎಲ್ಲಾ ಮಾಹಿತಿಯನ್ನು ಪಡೆಯುತ್ತೀರಿ.

5. ಪಟ್ಟಿಯನ್ನು ಬಿಡುಗಡೆ ಮಾಡಿದ ಆಧಾರ್:


ಆಧಾರ್‌ನಲ್ಲಿ ಹೆಸರು, ವಿಳಾಸ ಮತ್ತು ಹುಟ್ಟಿದ ದಿನಾಂಕವನ್ನು ಬದಲಾಯಿಸಲು ಯುಐಡಿಎಐ ದಾಖಲೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಯುಐಡಿಎಐ ಪ್ರಕಾರ, ಹೆಸರು ಬದಲಾವಣೆಗಾಗಿ 32 ದಾಖಲೆಗಳನ್ನು ಸ್ವೀಕರಿಸಲಾಗುವುದು. ಅದೇ ಸಮಯದಲ್ಲಿ, ವಿಳಾಸವನ್ನು ಬದಲಾಯಿಸಲು 45 ಮತ್ತು ಹುಟ್ಟಿದ ದಿನಾಂಕವನ್ನು ಬದಲಾಯಿಸಲು 15 ದಾಖಲೆಗಳನ್ನು ಅನುಮೋದಿಸಲಾಗುತ್ತದೆ.
 

Section: 
English Title: 
Now change e-mail in Aadhaar without document
News Source: 
Home Title: 

ಯಾವುದೇ ದಾಖಲೆ ಇಲ್ಲದೆಯೂ Aadhaarನಲ್ಲಿ ಈ ಬದಲಾವಣೆ ಸಾಧ್ಯ!

ಯಾವುದೇ ದಾಖಲೆ ಇಲ್ಲದೆಯೂ Aadhaarನಲ್ಲಿ ಈ ಬದಲಾವಣೆ ಸಾಧ್ಯ!
Author No use : 
Yashaswini V
Yes
Is Blog?: 
No
Tags: 
Facebook Instant Article: 
Yes
Mobile Title: 
ಯಾವುದೇ ದಾಖಲೆ ಇಲ್ಲದೆಯೂ Aadhaarನಲ್ಲಿ ಈ ಬದಲಾವಣೆ ಸಾಧ್ಯ!
Publish Later: 
No
Publish At: 
Friday, January 24, 2020 - 10:35
Created By: 
Yashaswini V
Updated By: 
Yashaswini V
Published By: 
Yashaswini V