ಭುವನೇಶ್ವರ: ರಾಜ್ಯದಲ್ಲಿ ಆರೋಗ್ಯ ಕಾರ್ಯಕರ್ತರು ಮತ್ತು ಇತರ ಮುಂಚೂಣಿ ಕಾರ್ಮಿಕರಿಗೆ ಕೋವಿಡ್ -19 ಲಸಿಕೆಯನ್ನು ಉಚಿತವಾಗಿ ನೀಡಲಾಗುವುದು ಎಂದು ಒಡಿಶಾ ಸರ್ಕಾರ ಗುರುವಾರ ತಿಳಿಸಿದೆ.
ಮೊದಲ ಹಂತದಲ್ಲಿ ನಮ್ಮ ಕರೋನಾ ಯೋಧರು ಮತ್ತು ವೈದ್ಯರು, ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್ -19 ಲಸಿಕೆ (Covid 19 Vaccine) ಉಚಿತವಾಗಿ ನೀಡಲಾಗುವುದು. ಎರಡನೇ ಹಂತದಲ್ಲಿ ಪುರಸಭೆ, ವಿದ್ಯುತ್, ಕುಡಿಯುವ ನೀರು ಮತ್ತು ಇತರ ಸಾರ್ವಜನಿಕ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ಲಸಿಕೆ ನೀಡುವಂತೆ ನಾವು ಕೇಂದ್ರವನ್ನು ಕೋರಿದ್ದೇವೆ ಎಂದು ಆರೋಗ್ಯ ಸಚಿವ ನಬಾಕಿಶೋರ್ ದಾಸ್ ಹೇಳಿದರು.
ಮುಂದಿನ ವರ್ಷ ಜನವರಿಯಲ್ಲಿ ವ್ಯಾಕ್ಸಿನೇಷನ್ ಡ್ರೈವ್ ಪ್ರಾರಂಭವಾಗುವ ಸಾಧ್ಯತೆ ಇದೆ ಎಂದು ದಾಸ್ ಹೇಳಿದ್ದಾರೆ.
Good news: ಸ್ವದೇಶೀ ಕರೋನಾ ಲಸಿಕೆಯ ಮೊದಲ ಹಂತದ ಪ್ರಯೋಗ ಯಶಸ್ವಿ
ಮೊದಲ ಹಂತದ ವ್ಯಾಕ್ಸಿನೇಷನ್ ಸಮಯದಲ್ಲಿ ಸುಮಾರು 30 ಕೋಟಿ ಜನರಿಗೆ ಲಸಿಕೆ ನೀಡಲು ಕೇಂದ್ರ ಸರ್ಕಾರ ಯೋಜಿಸುತ್ತಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಸಚಿವರು ತಿಳಿಸಿದರು.
ಲಸಿಕೆಯನ್ನು ತನ್ನ ಯೋಧರಿಗೆ ಆದ್ಯತೆಯ ಆಧಾರದ ಮೇಲೆ ವಿತರಿಸಲು ಮತ್ತು ನೀಡಲು ಸರ್ಕಾರ ಸಿದ್ಧವಾಗಿದೆ. ಕೋವಿಡ್ -19 (Covid 19) ವ್ಯಾಕ್ಸಿನೇಷನ್ ಡ್ರೈವ್ಗಾಗಿ ಕೇಂದ್ರವು ವಿವರವಾದ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ ಎಂದು ಅವರು ಹೇಳಿದರು.
Coronavirus Vaccine Guidelines: ಕೊರೊನಾ ಲಸಿಕೆ ಹಾಕಿಸಿಕೊಳ್ಳಬೇಕೇ? ಮೊದ್ಲು ಈ ಕೆಲ್ಸಾ ಮಾಡಿ ಎಂದ ಕೇಂದ್ರ
ದೇಶದಲ್ಲಿ ಕೋವಿಡ್ -19 ಲಸಿಕೆ ಬಿಡುಗಡೆ ಮಾಡಿದ ನಂತರ ಒಡಿಶಾದಲ್ಲಿ ಮೊದಲ ಹಂತದಲ್ಲಿ ಸುಮಾರು 3.2 ಲಕ್ಷ ಜನರಿಗೆ ಲಸಿಕೆ ನೀಡಲಾಗುವುದು. ವ್ಯಾಕ್ಸಿನೇಷನ್ಗಾಗಿ ರಾಜ್ಯದಲ್ಲಿ 29,276 ಕೇಂದ್ರಗಳನ್ನು ಗುರುತಿಸಲಾಗಿದೆ ಎಂದವರು ವಿವರಿಸಿದರು.