Om shape temple: ಭಾರತದ ಈ ಸ್ಥಳದಲ್ಲಿ ನಿರ್ಮಾಣವಾಗಲಿದೆ ವಿಶ್ವದ ಮೊದಲ 'ಓಂ' ಆಕಾರದ ದೇವಾಲಯ

Om Shiv Mandir: ದೇಶದಲ್ಲಿ ಶೀಘ್ರವಾಗಿ ಪ್ರಸಿದ್ಧಿ ಪಡೆಯುತ್ತಿರುವ ಇಂತಹದೇ ಮತ್ತೊಂದು ದೇವಾಲಯ ನಿರ್ಮಾಣವಾಗುತ್ತಿದೆ. ರಾಜಸ್ಥಾನದ ಪಾಲಿಯಲ್ಲಿ ನಿರ್ಮಾಣವಾಗುತ್ತಿರುವ 'ಓಂ' ಆಕಾರದ ದೇವಾಲಯ ಇದಾಗಿದೆ.

Written by - Bhavishya Shetty | Last Updated : Feb 2, 2024, 09:22 PM IST
    • ದೇಶದಲ್ಲಿ ಶೀಘ್ರವಾಗಿ ಪ್ರಸಿದ್ಧಿ ಪಡೆಯುತ್ತಿರುವ ಇಂತಹದೇ ಮತ್ತೊಂದು ದೇವಾಲಯ
    • ಭವ್ಯವಾದ ಓಂ ಆಕಾರದ ಶಿವ ದೇವಾಲಯ ನಿರ್ಮಾಣವಾಗುತ್ತಿದೆ
    • 250 ಎಕರೆ ಜಾಗದಲ್ಲಿ ಓಂ ಆಕಾರದ ಶಿವ ದೇವಾಲಯ
Om shape temple: ಭಾರತದ ಈ ಸ್ಥಳದಲ್ಲಿ ನಿರ್ಮಾಣವಾಗಲಿದೆ ವಿಶ್ವದ ಮೊದಲ 'ಓಂ' ಆಕಾರದ ದೇವಾಲಯ title=
om shaped temple

Om Shiv Mandir: ಭಾರತದ ದೇವಾಲಯಗಳು ಕೇವಲ ಕಟ್ಟಡವಾಗಿ ಉಳಿದಿಲ್ಲ, ಅವು ಸಂಸ್ಕೃತಿ-ಪರಂಪರೆಯ ಪ್ರತಿಬಿಂಬವಾಗಿದ್ದು, ಅದರ ಭವ್ಯತೆ ಜಗತ್ಪ್ರಸಿದ್ಧವಾಗುತ್ತಿದೆ. ಇದಕ್ಕೆ ತಾಜಾ ಉದಾಹರಣೆ ಅಯೋಧ್ಯೆಯ ಶ್ರೀರಾಮ ಮಂದಿರ. ಇದೇ ಕಾರಣದಿಂದ ಪ್ರಪಂಚದಾದ್ಯಂತ ಜನರು ಭಾರತದ ದೇವಾಲಯಗಳಿಗೆ ಭೇಟಿ ನೀಡಲು ಇಚ್ಛಿಸುತ್ತಾರೆ. ಇದಲ್ಲದೆ, ಈ ದೇವಾಲಯಗಳ ಸುಂದರವಾದ ವಾಸ್ತುಶಿಲ್ಪವು ಆಧ್ಯಾತ್ಮಿಕ ಶಾಂತಿಯನ್ನು ನೀಡುತ್ತದೆ.

ಇದನ್ನೂ ಓದಿ: ಕೇಂದ್ರ ಬಜೆಟ್’ನಲ್ಲಿ ರಾಜ್ಯಕ್ಕೆ ಅನ್ಯಾಯ, ಫೆ.7 ರಂದು ಪ್ರತಿಭಟನೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ದೇಶದಲ್ಲಿ ಶೀಘ್ರವಾಗಿ ಪ್ರಸಿದ್ಧಿ ಪಡೆಯುತ್ತಿರುವ ಇಂತಹದೇ ಮತ್ತೊಂದು ದೇವಾಲಯ ನಿರ್ಮಾಣವಾಗುತ್ತಿದೆ. ರಾಜಸ್ಥಾನದ ಪಾಲಿಯಲ್ಲಿ ನಿರ್ಮಾಣವಾಗುತ್ತಿರುವ 'ಓಂ' ಆಕಾರದ ದೇವಾಲಯ ಇದಾಗಿದೆ. ಈ ಓಂ ಆಕಾರದ ದೇವಾಲಯವು ತುಂಬಾ ಸುಂದರವಾಗಿದೆ. ಅಲ್ಲದೆ, ಓಂ ಆಕಾರದಲ್ಲಿ ನಿರ್ಮಿಸಲಾದ ವಿಶ್ವದ ಮೊದಲ ದೇವಾಲಯ ಇದು. ಈ ದೇವಾಲಯವು ಭೂಮಿಯಿಂದ ಮಾತ್ರವಲ್ಲದೆ ಬಾಹ್ಯಾಕಾಶದಿಂದಲೂ ಬಹಳ ಸುಂದರವಾಗಿ ಕಾಣುತ್ತದೆ.

ರಾಜಸ್ಥಾನದ ಪಾಲಿ ಜಿಲ್ಲೆಯ ಜಡಾನ್ ಗ್ರಾಮದಲ್ಲಿ ಭವ್ಯವಾದ ಓಂ ಆಕಾರದ ಶಿವ ದೇವಾಲಯ ನಿರ್ಮಾಣವಾಗುತ್ತಿದೆ. ಈ ದೇವಾಲಯದ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದ್ದು, ಇದೇ ವರ್ಷ ಸಿದ್ಧವಾಗಲಿದೆ.

250 ಎಕರೆ ಜಾಗದಲ್ಲಿ ಓಂ ಆಕಾರದ ಈ ಶಿವ ದೇವಾಲಯ ನಿರ್ಮಾಣವಾಗುತ್ತಿದೆ. ಈ ದೇವಾಲಯದಲ್ಲಿ ಶಿವಲಿಂಗದ ಪ್ರತಿಷ್ಠಾಪನೆ ಕಾರ್ಯಕ್ರಮವು 10-19 ಫೆಬ್ರವರಿ 2024 ರ ನಡುವೆ ನಡೆಯಲಿದೆ. ಈ ಶಿವನ ದೇವಾಲಯದಲ್ಲಿ 1008 ವಿವಿಧ ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ. ಓಂ ಆಕಾರದ ಈ ದೇವಾಲಯದ ಆವರಣದಲ್ಲಿ ಒಟ್ಟು 108 ಕೊಠಡಿಗಳಿವೆ. ಇದರ ಗೋಪುರವು 135 ಅಡಿ ಎತ್ತರವಾಗಿದ್ದು, ದೇವಾಲಯದ ಮಧ್ಯದಲ್ಲಿ ಗುರು ಮಹಾರಾಜ್ ಸ್ವಾಮಿ ಮಾಧವಾನಂದರ ಸಮಾಧಿಯಿದೆ. ಮೇಲ್ಭಾಗದಲ್ಲಿ ಮಹಾದೇವನ ಶಿವಲಿಂಗವನ್ನು ಸ್ಥಾಪಿಸಲಾಗಿದೆ.

ಇದನ್ನೂ ಓದಿ: ವಾರಕ್ಕೊಮ್ಮೆ ಈ ತರಕಾರಿಯನ್ನು ಹಸಿಯಾಗಿ ತಿನ್ನಿ ಸಾಕು… ಬಿಳಿಕೂದಲು ಒಂದೂ ಉಳಿಯದೆ ಬುಡದಿಂದಲೇ ಕಪ್ಪಾಗುತ್ತೆ!

1995ರಲ್ಲಿ ಈ ದೇವಾಲಯದ ಶಂಕುಸ್ಥಾಪನೆ ನಡೆದಿದ್ದು, ಕಳೆದ 25 ವರ್ಷಗಳಿಂದ ಇದರ ನಿರ್ಮಾಣ ಕಾರ್ಯ ನಡೆಯುತ್ತಿದೆ. ಓಂ ಆಶ್ರಮ ಜದನ್ ಪಾಲಿಯನ್ನು ನಾಗರ ಶೈಲಿಯ ವಾಸ್ತುಶಿಲ್ಪ ಮತ್ತು ಉತ್ತರ ಭಾರತದ ವಾಸ್ತುಶಿಲ್ಪದ ಆಧಾರದ ಮೇಲೆ ನಿರ್ಮಿಸಲಾಗುತ್ತಿದೆ. ಓಂನ ಆಕಾರವು ಸುಮಾರು ಅರ್ಧ ಕಿಲೋಮೀಟರ್ ತ್ರಿಜ್ಯದಲ್ಲಿ ಹರಡಿದೆ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News