OMG: ಕೇವಲ 8 ತಿಂಗಳಲ್ಲಿ 46KG ತೂಕ ಇಳಿಸಿಕೊಂಡ ಪೊಲೀಸ್ ಅಧಿಕಾರಿ!

Delhi Cop Weight Loss: 130 ಕೆಜಿ ತೂಕ ಹೊಂದಿದ್ದ ಡಿಸಿಪಿ ಜಿತೇಂದ್ರ ಮಣಿ ಮಧುಮೇಹ, ಅತಿಯಾದ ರಕ್ತದೊತ್ತಡ ಮತ್ತು ಅಧಿಕ ಕೊಲೆಸ್ಟ್ರಾಲ್ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು.

Written by - Puttaraj K Alur | Last Updated : Dec 29, 2022, 10:04 AM IST
  • ಕೇವಲ 8 ತಿಂಗಳಲ್ಲಿ 46 ಕೆಜಿ ತೂಕ ಇಳಿಸಿಕೊಂಡ ದೆಹಲಿಯ ಪೊಲೀಸ್ ಅಧಿಕಾರಿ
  • ಸೂಕ್ತ ಜೀವನ ಕ್ರಮ, ಆಹಾರ ಪದ್ಧತಿ ಮತ್ತು ವ್ಯಾಯಾಮದಿಂದ ತೂಕ ಇಳಿಸಿಕೊಂಡ ಜಿತೇಂದ್ರ ಮಣಿ
  • ಮಧುಮೇಹ, ಅತಿಯಾದ ರಕ್ತದೊತ್ತಡ ಮತ್ತು ಅಧಿಕ ಕೊಲೆಸ್ಟ್ರಾಲ್‍ನಿಂದ ಬಳಲುತ್ತಿದ್ದ ದೆಹಲಿ ಡಿಸಿಪಿ
OMG: ಕೇವಲ 8 ತಿಂಗಳಲ್ಲಿ 46KG ತೂಕ ಇಳಿಸಿಕೊಂಡ ಪೊಲೀಸ್ ಅಧಿಕಾರಿ! title=
46KG ತೂಕ ಇಳಿಸಿಕೊಂಡ ಪೊಲೀಸ್ ಅಧಿಕಾರಿ

ನವದೆಹಲಿ: ಕೇವಲ 8 ತಿಂಗಳ ಅವಧಿಯಲ್ಲಿ ದೆಹಲಿಯ ಪೊಲೀಸ್ ಅಧಿಕಾರಿಯೊಬ್ಬರು 46 ಕೆಜಿ ತೂಕ ಇಳಿಸಿಕೊಂಡು ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಸೂಕ್ತ ಜೀವನ ಕ್ರಮ, ಆಹಾರ ಪದ್ಧತಿ ಮತ್ತು ವ್ಯಾಯಾಮದಿಂದ ಮೆಟ್ರೋ ಉಪ ಪೊಲೀಸ್ ಆಯುಕ್ತ ಜಿತೇಂದ್ರ ಮಣಿಯವರು ಬರೋಬ್ಬರಿ 46 ಕೆಜಿ ತೂಕ ಇಳಿಸಿಕೊಂಡಿದ್ದಾರೆ.

130 ಕೆಜಿ ತೂಕ ಹೊಂದಿದ್ದ ಡಿಸಿಪಿ ಜಿತೇಂದ್ರ ಮಣಿ ಮಧುಮೇಹ, ಅತಿಯಾದ ರಕ್ತದೊತ್ತಡ ಮತ್ತು ಅಧಿಕ ಕೊಲೆಸ್ಟ್ರಾಲ್ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಅನಾರೋಗ್ಯಕರ ಜೀವನ ಶೈಲಿಯಿಂದ ನಿರಂತರವಾಗಿ ಅವರ ತೂಕ ಹೆಚ್ಚಾಗುತ್ತಿತ್ತು. ಇದರಿಂದ ದಿನೇ ದಿನೇ ಅವರ ಆರೋಗ್ಯ ಅಪಾಯಕಾರಿ ಹಂತಕ್ಕೆ ತಲುಪಿತ್ತು.

ಇದನ್ನೂ ಓದಿ: Modi Mother Health : ಹೀರಾಬೆನ್ ಮೋದಿ ಆಸ್ಪತ್ರೆಗೆ ದಾಖಲು.. ಅಮ್ಮನನ್ನು ನೋಡಲು ಆಸ್ಪತ್ರೆ ಬಂದ ಪ್ರಧಾನಿ ಮೋದಿ

ತಮ್ಮ ತೂಕ ಹೆಚ್ಚಾಗಲು ಅನಾರೋಗ್ಯಕರ ಜೀವನ ಶೈಲಿ ಮತ್ತು ಆಹಾರ ಪದ್ಧತಿಯೇ ಕಾರಣವೆಂದು ಯಾವಾಗ ಮಣಿಯವರ ಅರಿವಿಗೆ ಬಂತೋ ಅಂದಿನಿಂದಲೇ ಅವರು ಬದಲಾವಣೆ ಬಯಸಿದರಂತೆ. ಹೀಗಾಗಿ ಸಂಪೂರ್ಣವಾಗಿ ತಮ್ಮ ಲೈಫ್‍ಸ್ಟೈಲ್‍ಅನ್ನೇ ಬದಲಾಯಿಸಿದರು. ಆರೋಗ್ಯಕರ ಜೀವನಕ್ಕಾಗಿ ಶಿಸ್ತು ಪಾಲಿಸಿದ ಮಣಿ 8 ತಿಂಗಳುಗಳ ಕಾಲ ಪ್ರತಿದಿನವೂ 15 ಸಾವಿರ ಮೆಟ್ಟುಲುಗಳನ್ನು ಹತ್ತುವುದು-ಇಳಿಯುವುದು ಮಾಡಿದಂತೆ. ಜೊತೆಗೆ ಆರೋಗ್ಯಕರ ಆಹಾರ ಪದ್ಧತಿಯ ನಿಯಮ ಪಾಲಿಸಿದರು. ಚಪಾತಿ, ಅನ್ನದ ಬದಲು ಸೂಪ್, ಸಲಾಡ್, ಹಣ್ಣು-ಹಂಪಲುಗಳಂತಹ ಹೆಚ್ಚಿನ ಪೌಷ್ಟಿಕಾಂಶದ ಆಹಾರ ತಿನ್ನಲು ಪ್ರಾರಂಭಿಸಿದರಂತೆ.

ಕಠಿಣವಾಗಿ ಈ ನಿಯಮ ಪಾಲಿಸಿದ ಪರಿಣಾಮ 8 ತಿಂಗಳಿನಲ್ಲಿ ಅವರ ಸೊಂಟದ ಸುತ್ತಳತೆ 12 ಇಂಚು ಕಡಿಮೆಯಾಗಿದೆಯಂತೆ. ಜೊತೆಗೆ ಅವರ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವೂ ಸರಿಯಾಗಿದೆ. 130ಕೆಜಿ ಇದ್ದ ಮಣಿ ಇದೀಗ 84ಕೆಜಿ ಆಗಿದ್ದಾರೆ. ತೂಕ ಇಳಿಸಿಕೊಂಡಿರುವ ಖುಷಿ ಹಂಚಿಕೊಂಡಿರುವ ಮಣಿ, ‘ನಾನು ನನ್ನ ಜೀವನಶೈಲಿಯ ಬದಲಾವಣೆಗೆ ಕಠಿಣ ನಿರ್ಧಾರ ತೆಗೆದುಕೊಂಡೆ. ನಾನು ಪ್ರತಿ ತಿಂಗಳು 4.5 ಲಕ್ಷ ಹೆಜ್ಜೆ ನಡೆಯುವ ಗುರಿ ಹೊಂದಿದ್ದೆ. ಕಳೆದ 8 ತಿಂಗಳಲ್ಲಿ ನಾನು 32 ಲಕ್ಷಕ್ಕೂ ಹೆಚ್ಚು ಮೆಟ್ಟಿಲುಗಳನ್ನು ಹತ್ತಿ-ಇಳಿದಿದ್ದೇನೆ. ಅತಿಯಾದ ತೂಕದಿಂದ ಬಳಲುತ್ತಿದ್ದ ನನಗೆ ಇದೀಗ ತುಂಬಾ ಖುಷಿಯಾಗಿದೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: Railway Rules: ರೈಲಿನಲ್ಲಿ ಪ್ರಯಾಣಿಸುವ ಮಹಿಳಾ ಯಾತ್ರಿಗಳಿಗೆ ಸಂತಸದ ಸುದ್ದಿ

90 ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದ ಸಮಾರಂಭದಲ್ಲಿ ಮಣಿಯವರಿಗೆ ಪೊಲೀಸ್ ಇಲಾಖೆ ಪರವಾಗಿ ಪ್ರಶಂಸಾ ಪತ್ರ ನೀಡಿದ ಪೊಲೀಸ್ ಆಯುಕ್ತ ಸಂಜಯ್ ಅರೋರಾ ಅವರ ಪ್ರಯತ್ನಕ್ಕೆ ಶಹಬಾಸ್ ಹೇಳಿದ್ದಾರೆ. ಇದೀಗ ಮಣಿಯವರು ತನ್ನ ಮೇಲಧಿಕಾರಿಗಳು ಮತ್ತು ಸಹೋದ್ಯೋಗಿಗಳು ತೂಕ ನಷ್ಟಕ್ಕೆ ನೆರವಾಗಲು ಸಲಹೆ ನೀಡುವುದಾಗಿ ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News