Karnataka ಬಳಿಕ ದೆಹಲಿ ತಲುಪಿದ Omicron? ಆಸ್ಪತ್ರೆಗೆ 12 ಶಂಕಿತರು ದಾಖಲು

Coronavirus Omicron Variant: ಕೊರೊನಾವೈರಸ್ ಓಮಿಕ್ರಾನ್ ರೂಪಾಂತರಿಯ 8 ಶಂಕಿತರನ್ನು ನಿನ್ನೆ (ಡಿಸೆಂಬರ್ 2) LNJP ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೇ ವೇಳೆ ಇಂದು (ಡಿಸೆಂಬರ್ 3) ಇತರ ನಾಲ್ವರು ಶಂಕಿತರನ್ನು ದಾಖಲಿಸಲಾಗಿದೆ, ಅದರಲ್ಲಿ ಇಬ್ಬರ ಕೋವಿಡ್ -19 ಪರೀಕ್ಷಾ ವರದಿಯು ಸಕಾರಾತ್ಮಕವಾಗಿದೆ, ಆದರೆ ಇತರ ಇಬ್ಬರ ವರದಿಗಾಗಿ ಕಾಯಲಾಗುತ್ತಿದೆ.

Written by - Nitin Tabib | Last Updated : Dec 3, 2021, 04:09 PM IST
  • 12 ಶಂಕಿತರನ್ನು ಎಲ್‌ಎನ್‌ಜೆಪಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
  • ಜೀನೋಮ್ ಅನುಕ್ರಮಕ್ಕಾಗಿ ಮಾದರಿಗಳನ್ನು ಕಳುಹಿಸಲಾಗುತ್ತದೆ.
  • ಈಗಾಗಲೇ ಭಾರತದಲ್ಲಿ 2 ಒಮಿಕ್ರಾನ್ ಪ್ರಕರಣಗಳು ದೃಢಪಟ್ಟಿವೆ.
Karnataka ಬಳಿಕ ದೆಹಲಿ ತಲುಪಿದ Omicron? ಆಸ್ಪತ್ರೆಗೆ 12 ಶಂಕಿತರು ದಾಖಲು title=
Coronavirus Omicron Variant (File Photo)

ನವದೆಹಲಿ: Omicron Cases In Delhi - ಕೊರೊನಾ ವೈರಸ್‌ನ (Covid-19) ಹೊಸ ರೂಪಾಂತರಿಯಾದ (Coronavirus New Variant) ಒಮಿಕ್ರಾನ್ (Omicron) ಪ್ರಪಂಚದಾದ್ಯಂತ ವೇಗವಾಗಿ ಹರಡುತ್ತಿದೆ ಮತ್ತು ಇದುವರೆಗೆ ಭಾರತ ಸೇರಿದಂತೆ 25 ಕ್ಕೂ ಹೆಚ್ಚು ದೇಶಗಳಲ್ಲಿ ಇದು ದೃಢಪಟ್ಟಿದೆ. ಏತನ್ಮಧ್ಯೆ, ಕೋವಿಡ್ -19 ರ ಓಮಿಕ್ರಾನ್ ರೂಪಾಂತರದ ಸೋಂಕಿಗೆ ಒಳಗಾಗಿರುವ ಶಂಕಿತ 12 ರೋಗಿಗಳನ್ನು ಇದುವರೆಗೆ ದೆಹಲಿಯ (Delhi) ಲೋಕನಾಯಕ ಜೈ ಪ್ರಕಾಶ್ ನಾರಾಯಣ ಆಸ್ಪತ್ರೆಗೆ (LNJP Hospital) ದಾಖಲಿಸಲಾಗಿದೆ.ಈ ಕುರಿತು ಸುದ್ದಿ ಸಂಸ್ಥೆ ANI ವರದಿ ಮಾಡಿದೆ.

ಜೀನೋಮ್ ಅನುಕ್ರಮಕ್ಕಾಗಿ (Genome Sequencing) ಮಾದರಿಗಳನ್ನು ಕಳುಹಿಸಲಾಗುತ್ತದೆ
ಮೂಲಗಳ ಪ್ರಕಾರ, ಕೊರೊನಾವೈರಸ್ ಓಮಿಕ್ರಾನ್ ರೂಪಾಂತರದ 8 ಶಂಕಿತರನ್ನು ನಿನ್ನೆ (ಡಿಸೆಂಬರ್ 2) LNJP ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೇ ವೇಳೆ ಇಂದು (ಡಿಸೆಂಬರ್ 3) ಇತರ ನಾಲ್ವರು ಶಂಕಿತರನ್ನು ದಾಖಲಿಸಲಾಗಿದೆ, ಅದರಲ್ಲಿ ಇಬ್ಬರ ಕೋವಿಡ್ -19 (Coronavirus) ಪರೀಕ್ಷಾ ವರದಿ ಧನಾತ್ಮಕವಾಗಿದೆ ಮತ್ತು ಇತರೆ ಇಬ್ಬರ ವರದಿಗಾಗಿ ಕಾಯಲಾಗುತ್ತಿದೆ. ಇದರೊಂದಿಗೆ, ಎಲ್ಲಾ ರೋಗಿಗಳ ಮಾದರಿಗಳನ್ನು ಜೀನೋಮ್ ಅನುಕ್ರಮಕ್ಕಾಗಿ ಕಳುಹಿಸಲಾಗುತ್ತಿದೆ ಎನ್ನಲಾಗಿದೆ. 

ಇದನ್ನೂ ಓದಿ-Omicron variant: ದಕ್ಷಿಣ ಆಫ್ರಿಕಾದ ವಿಜ್ಞಾನಿಗಳಿಂದ ಹೊಸ ಎಚ್ಚರಿಕೆ

ಓಮಿಕ್ರಾನ್ ಸೋಂಕಿತ ಶಂಕಿತರು ಈ ದೇಶಗಳಿಂದ ಮರಳಿದ್ದಾರೆ
ಇಂದು (ಡಿಸೆಂಬರ್ 3) ಎಲ್‌ಎನ್‌ಜೆಪಿ ಆಸ್ಪತ್ರೆಯಲ್ಲಿ ದಾಖಲಾಗಿರುವ 4 ಶಂಕಿತರ ಪೈಕಿ ಇಬ್ಬರು ಬ್ರಿಟನ್‌ನಿಂದ ಮರಳಿದ್ದರೆ, ಒಬ್ಬರು ಫ್ರಾನ್ಸ್‌ನಿಂದ ಮತ್ತು ಒಬ್ಬರು ನೆದರ್‌ಲ್ಯಾಂಡ್‌ನಿಂದ ಮರಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದರೊಂದಿಗೆ, ಕೋವಿಡ್ -19 ಸೋಂಕಿಗೆ ಒಳಗಾದ ರೋಗಿಗಳ ಕಾಂಟ್ಯಾಕ್ಟ್ ಟ್ರೆಸಿಂಗ್ ನಡೆಸಲಿದೆ ಮತ್ತು ಅವರನ್ನೂ ಪರೀಕ್ಷಿಸಲಾಗುತ್ತಿದೆ.

ಇದನ್ನೂ ಓದಿ-ಕೊರೊನಾ ಭೀತಿ: ಕೆನಡಾ ವನ್ಯಜೀವಿಗಳಲ್ಲಿ ಮೊದಲ COVID-19 ಪ್ರಕರಣ ಪತ್ತೆ

ಭಾರತದಲ್ಲಿ 2 ಒಮಿಕ್ರಾನ್ ಪ್ರಕರಣಗಳು ದೃಢಪಟ್ಟಿವೆ
ಇದಕ್ಕೂ ಮುನ್ನ ಗುರುವಾರ (ಡಿಸೆಂಬರ್ 2), ಕೇಂದ್ರ ಆರೋಗ್ಯ ಸಚಿವಾಲಯವು ಭಾರತದಲ್ಲಿ ಓಮಿಕ್ರಾನ್ ರೂಪಾಂತರದ ಉಪಸ್ಥಿತಿಯನ್ನು ದೃಢಪಡಿಸಿತ್ತು ಮತ್ತು ಕರ್ನಾಟಕದಲ್ಲಿ ಎರಡು ಹೊಸ ಕರೋನವೈರಸ್ ಪ್ರಕರಣಗಳು ಪತ್ತೆಯಾಗಿವೆ ಎಂದು ತಿಳಿಸಿತ್ತು. ಕರ್ನಾಟಕ ಆರೋಗ್ಯ ಸಚಿವ ಡಾ ಕೆ. ಸುಧಾಕರ್ ಅವರು ಮಾಧ್ಯಮ ಪ್ರತಿನಿಧಿಗಳಿಗೆ, 'ಇಬ್ಬರಿಗೆ ಕೋವಿಡ್ -19 ರ ಒಮಿಕ್ರಾನ್ ರೂಪಾಂತರದಿಂದ ಸೋಂಕು ತಗುಲಿರುವುದು ಕಂಡುಬಂದಿದೆ. ಸೋಂಕಿತ ವ್ಯಕ್ತಿಗೆ ಸುಮಾರು 66 ವರ್ಷ ವಯಸ್ಸಾಗಿದ್ದು, ಅವರು ದಕ್ಷಿಣ ಆಫ್ರಿಕಾದ ಪ್ರಜೆಯಾಗಿದ್ದು, ಹಿಂತಿರುಗಿದ್ದಾರೆ. ಇನ್ನೊಬ್ಬ ವ್ಯಕ್ತಿ 46 ವರ್ಷ ವಯಸ್ಸಿನ ವೈದ್ಯರಾಗಿದ್ದು, ಯಾವುದೇ ಪ್ರಯಾಣದ ಇತಿಹಾಸವನ್ನು ಅವರು ಹೊಂದಿಲ್ಲ ಎಂದು ತಿಳಿಸಿದ್ದರು.

ಇದನ್ನೂ ಓದಿ-Coronavirus : ಎರಡು ವಾರಗಳಲ್ಲಿ ಮಕ್ಕಳಲ್ಲಿ 32% ರಷ್ಟು ಕೋವಿಡ್ -19 ಪ್ರಕರಣಗಳ ಹೆಚ್ಚಳ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News