Omicron Patient:ಭಾರತ ಬಿಟ್ಟು ಪಲಾಯನಗೈದ ದೇಶದ ಮೊದಲ ಓಮಿಕ್ರಾನ್ ರೋಗಿ! ಈ ರೀತಿ ಆಡಳಿತದ ಕಣ್ಣು ತಪ್ಪಿಸಿದ್ದಾನಂತೆ

Omicron First Patient of India: ಜೀನೋಮ್ ಸೀಕ್ವೆನ್ಸಿಂಗ್ ವರದಿ ಬರುವ ವೇಳೆಗೆ ಅವರು ದುಬೈ ತಲುಪಿದ್ದರು. ಕೊರೊನಾ ನೆಗೆಟಿವ್ ರಿಪೋರ್ಟ್ ತೋರಿಸಿ ಹೋಟೆಲ್ ಸಿಬ್ಬಂದಿಯನ್ನು ಅವರು ಯಾಮರಿಸಿದ್ದಾರೆ.  

Written by - Nitin Tabib | Last Updated : Dec 3, 2021, 02:49 PM IST
  • ಔಷಧೀಯ ಕಂಪನಿಯೊಂದರಲ್ಲಿ ಈ Omicron ಸೋಂಕಿತ ಕೆಲಸ ಮಾಡುತ್ತಿದ್ದ.
  • ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದಿಳಿದಿದ್ದ ಈ ಓಮಿಕ್ರಾನ್ ಸೋಂಕಿತ
  • ನವೆಂಬರ್ 27ರಂದು ಈ ಸೋಂಕಿತ ದುಬೈಗೆ ತೆರಳಿದ್ದಾನೆ
Omicron Patient:ಭಾರತ ಬಿಟ್ಟು ಪಲಾಯನಗೈದ ದೇಶದ ಮೊದಲ ಓಮಿಕ್ರಾನ್ ರೋಗಿ! ಈ ರೀತಿ ಆಡಳಿತದ ಕಣ್ಣು ತಪ್ಪಿಸಿದ್ದಾನಂತೆ title=
Omicron First Patient of India (Representational Image)

ಬೆಂಗಳೂರು: Omicron First Patient of India - ಕರ್ನಾಟಕದ (Karnataka) ಬೆಂಗಳೂರಿನಲ್ಲಿ ಕೊರೊನಾ ವೈರಸ್‌ನ ಹೊಸ ರೂಪಾಂತರವಾದ (Coronavirus New Variant) ಒಮಿಕ್ರಾನ್‌ನಿಂದ ಎರಡು ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಆದರೆ ಈ ನಡುವೆ ಸುದ್ದಿಯೊಂದು ಹೊರಬಂದಿದ್ದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಹೌದು, ಭಾರತಕ್ಕೆ ಬಂದ ನಂತರ ದುಬೈಗೆ ಹಿಂದಿರುಗಿದ ದಕ್ಷಿಣ ಆಫ್ರಿಕಾದ ಪ್ರಜೆಯೊಬ್ಬ ಒಮಿಕ್ರಾನ್ ಸೋಂಕಿಗೆ ಗುರಿಯಾಗಿದ್ದರು ಅವರು ದುಬೈಗೆ ಹಿಂದಿರುಗಿದಾಗ, ಜೀನೋಮ್ ಅನುಕ್ರಮದ (Genome Sequencing) ವರದಿಗಳು ಇನ್ನೂ ಬಂದಿರಲಿಲ್ಲ. .ಇದು ಭಾರತದಲ್ಲಿ ಓಮಿಕ್ರಾನ್ (Omicron Infected) ಮೊದಲ ಪ್ರಕರಣ ಎಂದು ನಂಬಲಾಗಿದೆ.

ಓಮಿಕ್ರಾನ್ ಸೋಂಕಿತ ಪ್ರಯಾಣದ ಇತಿಹಾಸ
ಟೈಮ್ಸ್ ಆಫ್ ಇಂಡಿಯಾದಲ್ಲಿ ಪ್ರಕಟವಾದ ವರದಿಯ ಪ್ರಕಾರ, ಓಮಿಕ್ರಾನ್ ಸೋಂಕಿತ ದಕ್ಷಿಣ ಆಫ್ರಿಕಾದ ಪ್ರಜೆಯ ವಯಸ್ಸು 66 ವರ್ಷಗಳು. ಆತ ಔಷಧಿ ಕಂಪನಿಯ ಪ್ರತಿನಿಧಿ. ಓಮಿಕ್ರಾನ್ ಸೋಂಕಿತ ನವೆಂಬರ್ 27 ರಂದು ಭಾರತದ ಬೆಂಗಳೂರಿನಿಂದ ದುಬೈಗೆ ಮರಳಿದ್ದಾನೆ. ಈ ವ್ಯಕ್ತಿ ನವೆಂಬರ್ 20 ರಂದು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದಿದ್ದಾನೆ. ಬೆಂಗಳೂರು ತಲುಪಿದಾಗ ತನಿಖೆಯಲ್ಲಿ ಆತನ ವರದಿ ನೆಗೆಟಿವ್ ಬಂದಿದೆ.

ಸ್ಟಾರ್ ಹೋಟೆಲ್‌ನಲ್ಲಿ ತಂಗಿರುವ ವೇಳೆ ಆತನಿಗೆ ಓಮಿಕ್ರಾನ್‌ಗೆ ಸೋಂಕು ತಗುಲಿದೆ
ನವೆಂಬರ್ 20 ರಂದು ದಕ್ಷಿಣ ಆಫ್ರಿಕಾದ ಈ ಪ್ರಜೆ ಬೆಂಗಳೂರಿನ ವಸಂತನಗರದ ಸ್ಟಾರ್ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದಾನೆ. ನಂತರ ಅವರಿಗೆ ಕರೋನಾ ಪರೀಕ್ಷೆಯನ್ನು ನಡೆಸಲಾಗಿತ್ತು ಮತ್ತು ಆಗ ಆತನ ಕೋವಿಡ್ -19 ಪಾಸಿಟಿವ್ ಎಂದು ಕಂಡುಬಂದಿದೆ.

ಇದನ್ನೂ ಓದಿ-Omicron Variant ನ ಮೂರು ಮುಖ್ಯ ಲಕ್ಷಣಗಳು ಇವು, ಮೊದಲಿಗಿಂತ ಸಂಪೂರ್ಣ ಭಿನ್ನ

ಹೋಟೆಲ್ ಸಿಬ್ಬಂದಿ ಈ ರೀತಿ ದೂಡಿದ್ದಾರೆ
ಇದರ ನಂತರ, ನವೆಂಬರ್ 22 ರಂದು, ಈ ವ್ಯಕ್ತಿಯ ಮಾದರಿಯನ್ನು ಜೀನೋಮ್ ಅನುಕ್ರಮಕ್ಕಾಗಿ ಕಳುಹಿಸಲಾಗಿದೆ. ನಂತರ ಮರುದಿನ ನವೆಂಬರ್ 23 ರಂದು, ವ್ಯಕ್ತಿಯನ್ನು ಖಾಸಗಿ ಲ್ಯಾಬ್‌ನಲ್ಲಿ ಪರೀಕ್ಷಿಸಲಾಯಿತು, ಅಲ್ಲಿ ಅವರ ಕರೋನಾ ವರದಿ ಮತ್ತೊಮ್ಮೆ ನೆಗೆಟಿವ್ ಬಂದಿದೆ. ನಂತರ ಅವರು ತಮ್ಮ ಕರೋನಾ ನೆಗೆಟಿವ್ ವರದಿಯನ್ನು ಹೋಟೆಲ್ ಸಿಬ್ಬಂದಿಗೆ ತೋರಿಸಿದ್ದಾನೆ ಮತ್ತು ಅಲ್ಲಿಂದ ಚೆಕ್ ಔಟ್ ಮಾಡಿದ್ದಾನೆ

ಇದನ್ನೂ ಓದಿ-Breaking: Omicron in India! ಕರ್ನಾಟಕದಲ್ಲಿಯೇ ಎರಡು ಪ್ರಕರಣಗಳ ವರದಿ..!

ಜೀನೋಮ್ ಸೀಕ್ವೆನ್ಸಿಂಗ್ ವರದಿ ಬಂದ ನಂತರ ಸ್ಥಳೀಯ ಆಡಳಿತವು ದಕ್ಷಿಣ ಆಫ್ರಿಕಾದ ಆ ಪ್ರಜೆಯನ್ನು ಹುಡುಕಲು ಹೋದಾಗ, ಅವನು ಮತ್ತೆ ದುಬೈಗೆ ಮರಳಿರುವುದು ತಿಳಿದುಬಂದಿದೆ.

ಇದನ್ನೂ ಓದಿ-Omicron variant: ದಕ್ಷಿಣ ಆಫ್ರಿಕಾದ ವಿಜ್ಞಾನಿಗಳಿಂದ ಹೊಸ ಎಚ್ಚರಿಕೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News