Aadhaar-PAN Card ಜೋಡಣೆಯ ಅಂತಿಮ ಗಡುವು ಜೂನ್ 30 ಕ್ಕೆ ವಿಸ್ತರಣೆ

Aadhaar-PAN Card Linking Deadline Extended - ಕೇಂದ್ರದ ಮೋದಿ ನೇತೃತ್ವದ ಸರ್ಕಾರ Aadhaar-PAN ಜೋಡಣೆಯ ಗಡುವನ್ನು ಪುನಃ ವಿಸ್ತರಣೆ ಮಾಡಿದೆ.

Written by - Nitin Tabib | Last Updated : Mar 31, 2021, 09:06 PM IST
  • ಆಧಾರ್-ಪ್ಯಾನ್ ಜೋಡಣೆಯ ಅಂತಿಮ ಗಡುವು ಪುನಃ ವಿಸ್ತರಣೆ.
  • ಈ ಮೊದಲು ಈ ಗಡುವನ್ನು ಮಾರ್ಚ್ 31, 2021ಕ್ಕೆ ನಿಗದಿಪಡಿಸಲಾಗಿತ್ತು.
  • ಇದೀಗ ಈ ಗಡುವನ್ನು ಜೂನ್ 30, 2021ರವರೆಗೆ ವಿಸ್ತರಿಸಲಾಗಿದೆ.
Aadhaar-PAN Card ಜೋಡಣೆಯ ಅಂತಿಮ ಗಡುವು ಜೂನ್ 30 ಕ್ಕೆ ವಿಸ್ತರಣೆ title=
PAN-Aadhaar Linking Deadline Extended (File Photo)

ನವದೆಹಲಿ: Aadhaar-PAN Card Linking Deadline Extended - ಕೇಂದ್ರ ಸರ್ಕಾರ ಆಧಾರ್-ಪ್ಯಾನ್ ಕಾರ್ಡ್ ಜೋಡಣೆ ಮಾಡುವ ಅಂತಿಮ ಗಡುವನ್ನು ಪುನಃ ವಿಸ್ತರಣೆ ಮಾಡಿದೆ. ಹೀಗಾಗಿ ಇನ್ಮುಂದೆ ನೀವು ನಿಮ್ಮ Aadhaar-PAN ಕಾರ್ಡ್ ಅನ್ನು ಜೂನ್ 30, 2021 ರವರೆಗೆ ಲಿಂಕ್ ಮಾಡಿಸಬಹುದು. ಈ ಮೊದಲು ಈ ಎರಡೂ ದಾಖಲೆಗಳನ್ನು ಜೋಡಿಸಲು ಮಾರ್ಚ್ 31 ಕೊನೆಯ ದಿನಾಂಕವಾಗಿತ್ತು.

ಇದನ್ನೂ ಓದಿ- PAN-Aadhaar Link: ಆಧಾರ್‌ನೊಂದಿಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡಲಾಗಿದೆಯೇ?

ಆದಾಯ ತೆರಿಗೆ ಇಲಾಖೆ (Income Tax Department) ಟ್ವೀಟ್ ಮಾಡುವ ಮೂಲಕ ಈ ಕುರಿತು ಮಾಹಿತಿ ನೀಡಿದ್ದು PAN-Aadhaar ಜೋಡಣೆಯ ಅಂತಿಮ ಗಡುವನ್ನು ವಿಸ್ತರಿಸಿರುವುದಾಗಿ ಘೋಷಿಸಿದೆ. ತನ್ನ ಟ್ವೀಟ್ ನಲ್ಲಿ ಬರೆದುಕೊಂಡಿರುವ ಆದಾಯ ತೆರಿಗೆ ಇಲಾಖೆ, ಕೊರೊನಾ ಮಹಾಮಾರಿಗೆ ಹಿನ್ನೆಲೆ, ಜನರಿಗೆ PAN-Aadhaar ಜೋಡಣೆಯಲ್ಲಿ ಅಡಚಣೆ ಎದುರಾಗುತ್ತಿದೆ. ಜನರ ಈ ಸಮಸ್ಯೆಯನ್ನು ಪರಿಗಣಿಸಿ ಕೇಂದ್ರ ಸರಕಾರ ಈ ಗಡುವನ್ನು ಮಾರ್ಚ್ 31, 2021 ರಿಂದ ಜೂನ್ 30, 2021ರವರೆಗೆ ವಿಸ್ತರಿಸಿದೆ ಎಂದು ಹೇಳಿದೆ.

ಇದನ್ನೂ ಓದಿ- PAN-Aadhaar ಲಿಂಕ್‌ಗೆ ಕೆಲವೇ ದಿನಗಳು ಬಾಕಿ, ಈ ಕೆಲಸ ಮಾಡದಿದ್ದರೆ 10 ಸಾವಿರ ದಂಡ

ದಂಡ ನಿಗದಿಪಡಿಸಲಾಗಿತ್ತು.
ಇದಕ್ಕೂ ಮೊದಲು ಸರ್ಕಾರ ಪ್ಯಾನ್ (PAN Card) ಹಾಗೂ ಆಧಾರ್ ಕಾರ್ಡ್ (Aadhaar Card) ಲಿಂಕ್ ಮಾಡುವ ಅಂತಿಮ ದಿನಾಂಕವನ್ನು 31 ಮಾರ್ಚ್, 2021ಕ್ಕೆ ನಿಗದಿಪಡಿಸಿತ್ತು. ಈ ಕುರಿತು ಹೇಳಿಕೆ ನೀಡಿದ್ದ ಆದಾಯ ತೆರಿಗೆ ಇಲಾಖೆ ಈ ಅರದೂ ದಾಖಲೆಗಳನ್ನು ಜೋಡಿಸದ ವ್ಯಕ್ತಿಯ ಪ್ಯಾನ್ ಕಾರ್ಡ್ ಏಪ್ರಿಲ್ 1, 2021 ರಿಂದ ನಿಷ್ಕ್ರೀಯಗೊಳಿಸಲಾಗುವುದು ಹಾಗೂ ಮಾರ್ಚ್ 31ರ ಬಳಿಕ ಲಿಂಕ್ ಮಾಡಿಸಲು ರೂ.1000 ದಂಡ ವಿಧಿಸಲಾಗುವುದು. 

ಇದನ್ನೂ ಓದಿ- ನಿಮ್ಮ ಜೇಬಿನ ಮೇಲೆ ಪರಿಣಾಮ ಬೀರುವ ಈ 8 ಕೆಲಸಗಳನ್ನು ಜೂನ್ 30ರ ಮೊದಲು ಪೂರ್ಣಗೊಳಿಸಿ

Trending News