ಪರೀಕ್ಷಾ ಪೇ ಚರ್ಚಾ: 'ಪರೀಕ್ಷೆಯಿಂದಾಚೆಗೂ ಪ್ರಪಂಚವಿದೆ' ಪ್ರಧಾನಿ ಮೋದಿ

ಪರೀಕ್ಷಾ ಪೇ ಚರ್ಚಾ 2.0 ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರ ಜೊತೆ ಸಂವಹನ ನಡೆಸಿದರು.

Last Updated : Jan 29, 2019, 01:44 PM IST
ಪರೀಕ್ಷಾ ಪೇ ಚರ್ಚಾ: 'ಪರೀಕ್ಷೆಯಿಂದಾಚೆಗೂ ಪ್ರಪಂಚವಿದೆ' ಪ್ರಧಾನಿ ಮೋದಿ title=
Pic Courtesy: ANI

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ವಿದ್ಯಾರ್ಥಿಗಳಿಗಾಗಿ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದು ಇಂದು(ಜ. 29ರಂದು) ‘ಪರೀಕ್ಷಾ ಪೆ ಚರ್ಚಾ 2.0’ ಎಂಬ ಕಾರ್ಯಕ್ರಮದ ಹೆಸರಿನಡಿ ವಿದ್ಯಾರ್ಥಿ, ಶಿಕ್ಷಕರ ಹಾಗೂ ಪೋಷಕರ ಜೊತೆ ಸಂವಹನ ನಡೆಸಿದರು. ತಾಲ್​ ಕಟೋರಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಸಂವಹನ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ವಿದ್ಯಾರ್ಥಿಗಳೊಂದಿಗೆ ಪರೀಕ್ಷೆ ಹಾಗೂ ಕಲಿಕಾ ಒತ್ತಡದ ಬಗ್ಗೆ ಮುಕ್ತವಾಗಿ ಚರ್ಚಿಸಿದರು. 

'ಪರೀಕ್ಷೆಗೆ ಮಹತ್ವವಿದೆ, ಆದರೆ ಇದು ಜೀವನದ ಪರೀಕ್ಷೆಯಲ್ಲ'
"ಪೋಷಕರು ಮಕ್ಕಳನ್ನು ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ಸಂವಹನದ ಸಮಯದಲ್ಲಿ ಪ್ರಧಾನಿ ಮೋದಿ, 'ಪರೀಕ್ಷೆಗೆ ತನ್ನದೇ ಆದ ಮಹತ್ವವಿದೆ, ಆದರೆ ಇದು ಜೀವನದ ಪರೀಕ್ಷೆಯಲ್ಲ' ಎಂದರು. ನಮ್ಮನ್ನು ನಾವು ಮಾನದಂಡದಲ್ಲಿ ಅಳತೆ ಮಾಡಿವುದಿಲ್ಲವಾದರೆ, ನಂತರ ಜೀವನವು ಸ್ಥಗಿತಗೊಳ್ಳುತ್ತದೆ. ಜೀವನ ಎಂದರೆ ವೇಗ, ಜೀವನದ ಅರ್ಥವೇನೆಂದರೆ ಕನಸುಗಳು. "ಮನಸ್ಸಿನಲ್ಲಿ ಒಂದು ಆತ್ಮೀಯತೆಯು ಸೃಷ್ಟಿಯಾದಾಗ, ಶಕ್ತಿಯು ದೇಹದಲ್ಲಿ ಸ್ವಯಂಚಾಲಿತವಾಗಿ ಬರುತ್ತದೆ. ಆಯಾಸವು ಮನೆಯ ಬಾಗಿಲನ್ನು ನೋಡುವುದಿಲ್ಲ" ಎಂದು ಪ್ರಧಾನಿ ಮೋದಿ ಹೇಳಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿದ್ಯಾರ್ಥಿಗಳು ಮತ್ತು ಪೋಷಕರು. (ಫೋಟೋ ANI)

ಮಕ್ಕಳ ಮೇಲೆ ಒತ್ತಡ ಹೇರಬೇಡಿ: ಪ್ರಧಾನಿ ಮೋದಿ
'ಪಾಲಕರು ಮಹತ್ವಾಕಾಂಕ್ಷಿಗಳಾಗಿರುತ್ತಾರೆ, ಆದರೆ ಮಕ್ಕಳ ಮೇಲಿನ ಒತ್ತಡದಿಂದಾಗಿ ಪರಿಸ್ಥಿತಿ ಬದಲಾಗುತ್ತದೆ. ಆದರೆ ಮಕ್ಕಳ ಸಂಭಾವ್ಯತೆಯನ್ನು ಗುರುತಿಸಲು ಪ್ರಯತ್ನಿಸಿ. ಮಕ್ಕಳ ಮೇಲೆ ಒತ್ತಡ ಹೇರಬೇಡ' ಎಂದು ಪ್ರಧಾನಿ ಮೋದಿ ಪೋಷಕರಿಗೆ ಕರೆ ನೀಡಿದರು.

ಮಕ್ಕಳು ಮೊಬೈಲ್ ನಲ್ಲಿ ತಲ್ಲೀನರಾಗಿರುವ ಬಗ್ಗೆ ಪೋಷಕರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರಧಾನಿ ಮೋದಿ, ಇದು ಸಮಸ್ಯೆಯೂ ಹೌದು, ಪರಿಹಾರವೂ ಹೌದು. ನಾವು ನಮ್ಮ ಮಕ್ಕಳು ತಂತ್ರಜ್ಞಾನದಿಂದ ದೂರವಿರಲು ಬಯಸುತ್ತೇವೆ. ಹಾಗೇನಾದರೂ ಆದಲ್ಲಿ ಒಂದರ್ಥದಲ್ಲಿ ಅವರು ಪ್ರಪಂಚದಿಂದ ಹಿಂದೆ ಸಾಗುವಂತಾಗುತ್ತದೆ.  ಹಾಗಾಗಿ ತಂತ್ರಜ್ಞಾನವನ್ನು ಬಳಸಲು ಮಕ್ಕಳಿಗೆ ಪ್ರೋತ್ಸಾಹಿಸಬೇಕು. ಆದರೆ ಆ ತಂತ್ರಜ್ಞಾನದಿಂದ ಏನು ಉಪಯೋಗವಾಗುತ್ತದೆ ಎಂಬುದನ್ನು ಅವರಿಗೆ ಅರ್ಥೈಸಬೇಕು ಎಂದರು.

ಪರೀಕ್ಷೆ ಒಂದು ಮಾನದಂಡವಷ್ಟೇ:
ಇನ್ನು ಇದೇ ವೇಳೆ ಮಕ್ಕಳ ಚಟುವಟಿಕೆಗಳ ಮೇಲೆ ಕಣ್ಣಿಡುವಂತೆ ಪೋಷಕರಿಗೆ ತಿಳಿಸಿದ ಮೋದಿ, ಮಕ್ಕಳ ಮೇಲೆ ಗಮನವಿಟ್ಟಷ್ಟು ಅವರ ಸಾಮರ್ಥ್ಯ ಏನೆಂಬುದು ನಮಗೆ ತಿಳಿಯುತ್ತದೆ. ಅವರ ಯಶಸ್ವಿಗೆ ಅದು ದಾರಿ ದೀಪವಾಗುತ್ತದೆ. ಅವರು ಸಮಯದ ಒತ್ತಡವನ್ನು ಹೊಂದಿರುವುದಿಲ್ಲ ಏಕೆಂದರೆ ಅವರು ಸಮಯದ ಮೌಲ್ಯವನ್ನು ತಿಳಿದಿರುತ್ತಾರೆ. ಪರೀಕ್ಷೆ ಎಂದರೆ ಮಾನದಂಡ. ಪರೀಕ್ಷೆ ಕೆಟ್ಟದ್ದಲ್ಲ ಅದು ನಮ್ಮ ಸಾಮರ್ಥ್ಯವನ್ನು ನಿರ್ಧರಿಸುವ ಒಂದು ಮಾನದಂಡ. 'ಪರೀಕ್ಷೆಯಿಂದಾಚೆಗೂ ಪ್ರಪಂಚವಿದೆ' ಎಂದು ಅವರು ತಿಳಿಸಿದರು.

'ಸದಾ ಮಕ್ಕಳನ್ನು ಪ್ರೋತ್ಸಾಹಿಸಿ'
ಪೋಷಕರು ಮತ್ತು ಶಿಕ್ಷಕರು ಮಕ್ಕಳನ್ನು ಇತರ ಮಕ್ಕಳೊಂದಿಗೆ ಹೋಲಿಕೆ ಮಾಡಬಾರದು. ಇದು ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ತಿಳಿಸಿದ ಮೋದಿ, ನಾವು ಯಾವಾಗಲೂ ಮಕ್ಕಳನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದರು.

Trending News