ನವದೆಹಲಿ: ಏನನ್ನೇ ಕೊಳ್ಳಬೇಕೆಂದರೂ ಆರ್ಡರ್ ಮಾಡಲು ಇ-ಕಾಮರ್ಸ್ ಈಗ ಸುಲಭ ಮಾರ್ಗವಾಗಿ ಮಾರ್ಪಟ್ಟಿದೆ. ಮತ್ತೊಂದೆಡೆ ನಿಮ್ಮ ವಾಹನಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ಬೇಕಿದ್ದರೆ ಪೆಟ್ರೋಲ್ ಪಂಪ್ ಹೋಗಬೇಕಾಗುತ್ತದೆ ಮತ್ತು ಪೆಟ್ರೋಲ್ ಪಂಪ್ ಹೊರಗೆ ಉದ್ದುದ್ದ ಸಾಲುಗಳಲ್ಲಿ ಕಾಯುವುದು ಸಾಮಾನ್ಯವಾಗಿರುತ್ತವೆ. ಆದರೆ ಈಗ ನೀವು ನಿಮ್ಮ ವಾಹನಕ್ಕೆ ಪೆಟ್ರೋಲ್-ಡೀಸೆಲ್ ಹಾಕಿಸಲು ಪೆಟ್ರೋಲ್ ಪಂಪ್ ಗೆ ಹೋಗಬೇಕಾಗಿಲ್ಲ. ಏಕೆಂದರೆ ದೇಶದ ಅತಿದೊಡ್ಡ ತೈಲ ಮಾರ್ಕೆಟಿಂಗ್ ಕಂಪೆನಿ, ಐಓಸಿ (ಇಂಡಿಯನ್ ಆಯಿಲ್ ಕಾರ್ಪೊರೇಷನ್) ಹೊಸ ಸೇವೆ ಪ್ರಾರಂಭಿಸಿದೆ.
ಇಂಡಿಯನ್ ಆಯಿಲ್ ಕಾರ್ಪೊರೇಷನ್ ಆನ್ಲೈನ್ ಪೆಟ್ರೋಲ್ ಮತ್ತು ಡೀಸೆಲ್ ಬೇಡಿಕೆಗೆ ಅನುಕೂಲ ಕಲ್ಪಿಸಿದೆ. ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪ್ ಲಿಮಿಟೆಡ್(HPCL) CMD ಎಂ.ಕೆ. ಸುರಾನಾ ಪ್ರಕಾರ, ಪೆಟ್ರೋಲ್ ಮತ್ತು ಡೀಸೆಲ್ ಹೋಂ ಡೆಲಿವರಿ ಅನುಷ್ಠಾನಗೊಳಿಸುವಲ್ಲಿ ಯಾವುದೇ ತೊಡಕಿಲ್ಲ ಎಂದಿದ್ದಾರೆ. ಕಂಪನಿಯು ಅದಕ್ಕೆ ಕೆಲಸ ಮಾಡಲು ಪ್ರಾರಂಭಿಸಿದೆ. ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಇಂಡಿಯನ್ ಆಯಿಲ್ ಕಾರ್ಪೋರೇಶನ್ ಇಂಧನವನ್ನು ಡೋರ್ ಡೆಲಿವರಿ ಮಾಡುವ ಕೆಲಸ ಪ್ರಾರಂಭಿಸಿತು. ಇದರ ಅಡಿಯಲ್ಲಿ, ಕೋಲ್ಕತಾದ ಕೊಲ್ತೂರ್ನಲ್ಲಿರುವ ಪೆಟ್ರೋಲ್ ಪಂಪ್ ಪೆಟ್ರೋಲ್ ಮತ್ತು ಡೀಸಲ್ ವಿತರಣೆಯನ್ನು ಪ್ರಾರಂಭಿಸಿದೆ. ಆರಂಭದಲ್ಲಿ ಗ್ರಾಹಕರಿಗೆ ಕೇವಲ ಡೀಸೆಲ್ ಅನ್ನು ಮಾತ್ರ ಹೋಂ ಡೆಲಿವರಿ ನೀಡಲಾಗುತ್ತಿತ್ತು. ಅಲ್ಲದೆ ಇದಕ್ಕಾಗಿ ಗ್ರಾಹಕರು ಯಾವುದೇ ಶುಲ್ಕವನ್ನು ಪ್ರತ್ಯೇಕವಾಗಿ ಪಾವತಿಸಬೇಕಾಗಿರಲಿಲ್ಲ.
ಈ ಸೌಕರ್ಯಕ್ಕಾಗಿ ರೆಪೊಸ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಲಾಗಿದೆ, ಅದರ ಮೂಲಕ ಗ್ರಾಹಕರು ಆರ್ಡರ್ ಬುಕ್ ಮಾಡಬಹದು. ಕನಿಷ್ಠ 200 ರಿಂದ 2500 ಲೀಟರ್ಗಳ ವರೆಗೆ ಆರ್ಡರ್ ಬುಕಿಂಗ್ ಅನ್ನು ಮಾಡಬಹುದು. ಆದಾಗ್ಯೂ, ಈ ಸೌಲಭ್ಯವನ್ನು ಅನೇಕ ಪೆಟ್ರೋಲ್ ಪಂಪ್ ಮಾಲೀಕರು ವಿರೋಧಿಸಿದ್ದಾರೆ.