ನವದೆಹಲಿ: ಇನ್ನು ಮುಂದೆ ನೀವು ಪೆಟ್ರೋಲ್-ಡೀಸೆಲ್ ಗಾಗಿ ಅಲೆದಾಡುವ ಅಗತ್ಯವಿಲ್ಲ. ಈಗ ನಿಮಗೆ ಶೀಘ್ರದಲ್ಲಿಯೇ ಪೆಟ್ರೋಲ್ ಮತ್ತು ಡೀಸೆಲ್ ಸಿಗುತ್ತದೆ. ಐಓಸಿ(ಇಂಡಿಯನ್ ಆಯಿಲ್ ಕಾರ್ಪೊರೇಷನ್) ಪುಣೆನಲ್ಲಿ ಡೀಸೆಲ್ ಅನ್ನು ಹೋಂ ಡೆಲಿವರಿ ನೀಡುತ್ತಿದೆ. ಆರಂಭದಲ್ಲಿ, ಕಂಪನಿಯು ಡೀಸೆಲ್ ಅನ್ನು ಮಾತ್ರ ಮನೆಗೆ ವಿತರಿಸುತ್ತಿದೆ. ನಂತರ, ಅವರು ಪೆಟ್ರೋಲ್ ಸೇವೆಯನ್ನು ಕೂಡ ಮನೆ ಬಾಗಿಲಿಗೆ ತಲುಪಿಸುವ ಯೋಜನೆ ಹೊಂದಿದ್ದಾರೆ. ವಾಸ್ತವವಾಗಿ, ದೇಶದ ಅತಿದೊಡ್ಡ ತೈಲ ಮಾರ್ಕೆಟಿಂಗ್ ಕಂಪೆನಿ, ಐಓಸಿ ಹೊಸ ಸೇವೆ ಪ್ರಾರಂಭಿಸಿದೆ. ಕಂಪನಿಯು ಈಗ ಡೀಸೆಲ್ ಅನ್ನು ಮನೆ ಬಾಗಿಲಿಗೆ ವಿತರಿಸುವ ಸೇವೆಯನ್ನು ಪ್ರಾರಂಭಿಸಿದೆ.
ಐಓಸಿ ಅಧ್ಯಕ್ಷ ಸಂಜೀವ್ ಸಿಂಗ್ ಕಂಪೆನಿಯು ಪುಣೆಯಲ್ಲಿ ಡೀಸೆಲ್ ಅನ್ನು ಮನೆಗೆ ತಲುಪಿಸುವ ಸೇವೆಯನ್ನು ಪರಿಚಯಿಸಿದೆ. ಶೀಘ್ರದಲ್ಲೇ ದೇಶದಾದ್ಯಂತ ಅದನ್ನು ಅನ್ವಯಿಸುವುದು ಕಂಪನಿಯ ಗುರಿ ಎಂದು ತಿಳಿಸಿದರು.
ಡೀಸೆಲ್ ಹೋಂ ಡೆಲಿವೆರಿ
ಕಂಪನಿಯು ಟ್ರಕ್ನಲ್ಲಿ ಡೀಸೆಲ್ ತುಂಬುವ ಯಂತ್ರವನ್ನು ಸ್ಥಾಪಿಸಿದೆ. ಈ ಯಂತ್ರವು ಪೆಟ್ರೋಲ್ ಪಂಪ್ಗಳಂತೆಯೇ ಇದೆ. ಒಂದು ಟ್ಯಾಂಕ್ ಸಹ ಟ್ರಕ್ಗೆ ಲಗತ್ತಿಸಲಾಗಿದೆ. ಇದರ ಮೂಲಕ, ನಗರದ ಜನರಿಗೆ ಡೀಸೆಲ್ ಮನೆಯ ಬಾಗಲನ್ನು ತಲುಪಲಿದೆ.
ಪೆಟ್ರೋಲ್ ಸೇವೆಯಲ್ಲೂ ಸಹ ಶೀಘ್ರದಲ್ಲೇ ಹೋಂ ಡೆಲಿವೆರಿ ಸೌಲಭ್ಯ
ಪೆಟ್ರೋಲ್ ಹೋಂ ಡೆಲಿವೆರಿ ಸೌಲಭ್ಯ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಐಓಸಿ, ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪ್ ಲಿಮಿಟೆಡ್ (ಎಚ್ಪಿಸಿಎಲ್) ಮತ್ತು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಇತರ ಕಂಪೆನಿಗಳು ಹೋಂ ಡೆಲಿವೆರಿ ಸೌಲಭ್ಯದ ಬಗ್ಗೆ ಅನುಮೋದನೆಯನ್ನು ಪಡೆದಿವೆ. ಈ ಕಂಪನಿಗಳು ದೇಶದ ಇತರ ಭಾಗಗಳಲ್ಲಿ ಪೈಲಟ್ ಯೋಜನೆಗಳನ್ನು ನಡೆಸುತ್ತವೆ.
.@IndianOilcl launched the first PESO approved mobile dispenser for door to door delivery of diesel in Pune, Maharashtra. The step is a milestone of sorts in further enhancing customer convenience. Options are also being explored to add more petro products in the future. pic.twitter.com/n6abHy5KnW
— Petroleum Ministry (@PetroleumMin) March 20, 2018
ಮೂರು ತಿಂಗಳ ಪ್ರಾಯೋಗಿಕ ಯೋಜನೆ
ಪೆಟ್ರೋಲಿಯಂ ಮತ್ತು ಸ್ಫೋಟಕ ಪ್ರೊಟೆಕ್ಷನ್ ಆರ್ಗನೈಸೇಶನ್ (ಪಿಇಎಸ್ಓ) ಯಿಂದ ಅನುಮೋದನೆ ಪಡೆದ ನಂತರ ಐಓಸಿ ಇಂತಹ ಸೇವೆ ಪ್ರಾರಂಭಿಸುವ ಮೊದಲ ಕಂಪನಿ ಎಂದು ಐಓಸಿ ಅಧ್ಯಕ್ಷ ಸಂಜೀವ್ ಸಿಂಗ್ ಹೇಳಿದ್ದಾರೆ. ಇದೀಗ, ಪ್ರಾಯೋಗಿಕ ಆಧಾರದ ಮೇಲೆ ಇದನ್ನು ಪ್ರಾರಂಭಿಸಲಾಗಿದೆ. ಮೂರು ತಿಂಗಳ ಪ್ರಾಯೋಗಿಕ ಅವಧಿಯಲ್ಲಿ ಪಡೆದಿರುವ ಅನುಭವಗಳ ಆಧಾರದ ಮೇಲೆ ಇತರ ನಗರಗಳಲ್ಲಿ ಇದನ್ನು ಪ್ರಾರಂಭಿಸಲಾಗುವುದು ಎಂದು ಅವರು ತಿಳಿಸಿದರು.