ನವದೆಹಲಿ: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲಬೆಲೆಯಲ್ಲಿ ಏರಿಳಿತದ ಮಧ್ಯೆ, ಮಂಗಳವಾರ ಸತತ ಆರನೇ ದಿನ ಪೆಟ್ರೋಲ್ ದರ ಇಳಿಕೆಯಾಗಿದೆ. ಡೀಸೆಲ್ ಬೆಲೆಯಲ್ಲಿ ಇಂದು ಯಾವುದೇ ಬದಲಾವಣೆಯಾಗಿಲ್ಲ.
ಕ್ರಿಯಾತ್ಮಕ ಬೆಲೆ ಯೋಜನೆ ಅಡಿಯಲ್ಲಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಜಾಗತಿಕ ಕಚ್ಚಾ ತೈಲದ ಬೆಲೆಗಳೊಂದಿಗೆ ಸಮನ್ವಯದಲ್ಲಿ ಪ್ರತಿದಿನವೂ ಪರಿಷ್ಕರಿಸಲಾಗುತ್ತಿದೆ. ಇಂದು ಪರಿಷ್ಕರಿಸಲಾದ ತೈಲ ದರದಲ್ಲಿ ಪೆಟ್ರೋಲ್ ದರದಲ್ಲಿ 09 ಪೈಸೆ ಇಳಿಕೆ ಕಂಡುಬಂದಿದೆ. ಡೀಸೆಲ್ ಬೆಲೆಯಲ್ಲಿ ಇಂದು ಯಾವುದೇ ಬದಲಾವಣೆಯಾಗಿಲ್ಲ.
ಇದರೊಂದಿಗೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 72.28 ರೂ., ಡೀಸೆಲ್ ಬೆಲೆ 65.94 ರೂ. ಇದೆ.
ಈ ದರವು ಇಂದು ಬೆಳಿಗ್ಗೆ 6 ಗಂಟೆಯಿಂದ ನಾಳೆ ಬೆಳಿಗ್ಗೆ 6 ಗಂಟೆಯವರೆಗೆ ಅನ್ವಯವಾಗಲಿದೆ.
ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಗಳು ಕೆಳಕಂಡಂತಿದೆ
ನಗರಗಳು |
ಪೆಟ್ರೋಲ್ (ರೂ./ಲೀ) |
ಡೀಸೆಲ್ (ರೂ./ಲೀ) |
ದೆಹಲಿ | 72.28 | 65.94 |
ಕೊಲ್ಕತ್ತಾ | 74.97 | 68.17 |
ಮುಂಬೈ | 77.93 | 69.11 |
ಚೆನ್ನೈ | 75.15 | 69.70 |
ಬೆಂಗಳೂರು | 74.72 | 68.13 |
ಹೈದರಾಬಾದ್ | 76.81 | 71.82 |
ತಿರುವನಂತಪುರಂ | 75.75 | 71.03 |
ದೇಶಾದ್ಯಂತ ಎಲ್ಲಾ ರಾಜ್ಯಗಳ ಪೆಟ್ರೋಲ್-ಡೀಸೆಲ್ ಬೆಲೆ ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ: