99% ರಷ್ಟು ಜನರು ಹನುಮಾನ್ ಚಾಲೀಸಾವನ್ನು ಪಠಿಸುವಾಗ ಈ ತಪ್ಪನ್ನು ಮಾಡುತ್ತಾರೆ..! ಫಲ ಸಿಗಲ್ಲ

Hanuman Chalisa : ಮಂತ್ರ ಅಥವಾ ಮೂಲವನ್ನು ಪಠಿಸುವಾಗ ತಿಳಿದೋ ಅಥವಾ ತಿಳಿಯದೆಯೋ ನಾವು ಹಲವಾರು ತಪ್ಪುಗಳನ್ನು ಮಾಡುತ್ತೇವೆ.. ಇದರಿಂದ ಶುಭ ಫಲವು ಸಿಗುವುದಿಲ್ಲ. ಇಂದು ನಾವು ಹನುಮಾನ್ ಚಾಲೀಸಾಗೆ ಸಂಬಂಧಿಸಿದ ಅಂತಹ ತಪ್ಪುಗಳ ಬಗ್ಗೆ ತಿಳಿಯೋಣ... ನೀವೂ ಈ ತಪ್ಪು ಮಾಡುತ್ತಿದ್ದರೆ ಇಂದಿನಿಂದಲೇ ಸರಿಪಡಿಸಿಕೊಳ್ಳಿ. 

Written by - Krishna N K | Last Updated : Jun 27, 2024, 08:21 PM IST
    • ಮಂತ್ರ ಪಠಿಸುವಾಗ ನಾವು ಹಲವಾರು ತಪ್ಪುಗಳನ್ನು ಮಾಡುತ್ತೇವೆ..
    • ಈ ರೀತಿಯ ತಪ್ಪುಗಳಿಂದ ನಮಗೆ ಶುಭ ಫಲವು ಸಿಗುವುದಿಲ್ಲ.
    • ಇದಕ್ಕೆ ಸಂಬಂಧಿಸಿದ ಅಂತಹ ತಪ್ಪುಗಳ ಬಗ್ಗೆ ತಿಳಿಯೋಣ..
99% ರಷ್ಟು ಜನರು ಹನುಮಾನ್ ಚಾಲೀಸಾವನ್ನು ಪಠಿಸುವಾಗ ಈ ತಪ್ಪನ್ನು ಮಾಡುತ್ತಾರೆ..! ಫಲ ಸಿಗಲ್ಲ title=

How to pray lord Hanuman : ಹನುಮಾನ್ ಚಾಲೀಸಾವನ್ನು ಪಠಿಸುವುದರಿಂದ ಮನಸ್ಸು ಶಾಂತವಾಗುತ್ತದೆ, ಆತ್ಮವಿಶ್ವಾಸ ಹೆಚ್ಚುತ್ತದೆ ಮತ್ತು ಆಂಜನೇಯನ ಕೃಪೆಗೆ ಪಾತ್ರರಾಗುತ್ತೇವೆ. ಹನುಮಾನ್ ಚಾಲೀಸಾವನ್ನು ಪ್ರತಿದಿನ ಬಹುತೇಕ ಜನರು ಫಠಿಸುತ್ತಾರೆ. ಆದರೆ ಇನ್ನೂ 99% ಜನರು ಹನುಮಾನ್ ಚಾಲೀಸಾವನ್ನು ಪಠಿಸುವಾಗ ಕೆಲವು ತಪ್ಪುಗಳನ್ನು ಮಾಡುತ್ತಾರೆ, ಇದರಿಂದಾಗಿ ಅವರು ಹನುಮಾನ್ ಚಾಲೀಸಾದ ಫಲಿತಾಂಶವನ್ನು ಪಡೆಯುವುದಿಲ್ಲ. ಇದು ಹೆಚ್ಚಿನ ಜನರಿಗೆ ತಿಳಿದಿಲ್ಲದ ತಪ್ಪು. 

ಮಂತ್ರವನ್ನು ಪಠಿಸುವಾಗ ನಾವು ತಿಳಿದೋ.. ತಿಳಿಯದೆಯೋ.. ತಪ್ಪಾದಾಗ, ಇದರಿಂದ ಮಂತ್ರವನ್ನು ಜಪಿಸಿದ ಶುಭ ಫಲ ಸಿಗುವುದಿಲ್ಲ. ಇಂದು ನಾವು ಹನುಮಾನ್ ಚಾಲೀಸಾಗೆ ಸಂಬಂಧಿಸಿದ ಅಂತಹ ತಪ್ಪುಗಳ ಬಗ್ಗೆ ತಿಳಿಯೋಣ... ನೀವೂ ಈ ತಪ್ಪು ಮಾಡುತ್ತಿದ್ದರೆ ಇಂದಿನಿಂದಲೇ ಸರಿಪಡಿಸಿಕೊಳ್ಳಿ, ರಾಮಧೂತನ ಕೃಪೆಗೆ ಪಾತ್ರರಾಗಿ.. 

ಇದನ್ನೂ ಓದಿ: ವಿಶ್ವಮಟ್ಟದಲ್ಲಿ ದಾಖಲೆ ಬರೆದ ಕನ್ನಡದ ʼಕೆಂಡʼ..!

ಹನುಮಾನ್ ಚಾಲೀಸಾ ಮಾಡುವಾಗ ಮಾಡಿದ ತಪ್ಪುಗಳು

1. ಹನುಮಾನ್ ಚಾಲೀಸ್‌ ಪಠಣೆ ಮಾಡುವಾಗ ಹೆಚ್ಚಿನ ಜನರು ಮಾಡುವ ಸಾಮಾನ್ಯ ತಪ್ಪು ಅಂದ್ರೆ, ಹನುಮಾನ್ ಚಾಲೀಸ್‌ ಪಠಿಸುವಾಗ ಅವರ ಮನಸ್ಸು ಅಲೆದಾಡುತ್ತಿರುತ್ತದೆ. ಹನುಮಾನ್ ಚಾಲೀಸಾ ಮಾಡುವಾಗ ಅವರ ಗಮನವು ಹನುಮಾನ್ ಚಾಲೀಸಾದಲ್ಲಿ ಕೇಂದ್ರೀಕೃತವಾಗುವುದಿಲ್ಲ. ಇಂತಹ ತಪ್ಪು ಮಾಡಬೇಡಿ. 

2. ಮಾರುತಿ ಭಗವಾನ್ ರಾಮನ ಮಹಾನ್ ಭಕ್ತನಾಗಿದ್ದರಿಂದ ಶ್ರೀರಾಮನ ಹೆಸರನ್ನು ತೆಗೆದುಕೊಳ್ಳದೆ ಹನುಮಾನ್ ಚಾಲೀಸಾವನ್ನು ಪ್ರಾರಂಭಿಸಬೇಡಿ. ಶ್ರೀರಾಮನ ನಾಮಸ್ಮರಣೆಯ ನಂತರವೇ ಹನುಮಾನ್ ಚಾಲೀಸಾವನ್ನು ಪಠಿಸಬೇಕು. 

ಇದನ್ನೂ ಓದಿ:7ನೇ ತರಗತಿ ಪಠ್ಯ ಪುಸ್ತಕದಲ್ಲಿ ನಟಿ ತಮನ್ನಾ ಬಗ್ಗೆ ಉಲ್ಲೇಖ ..! ಪಾಲಕರ ತೀವ್ರ ಖಂಡನೆ..

3. ಹನುಮಾನ್ ಚಾಲೀಸಾ ಪಠಿಸುವಾಗ ನೀರು ತುಂಬಿದ ಪಾತ್ರೆಯನ್ನು ಹನುಮಂತನ ಮುಂದೆ ಇಡಬೇಕು. ಹನುಮಾನ್ ಚಾಲೀಸಾವನ್ನು 3 ಬಾರಿಯಿಂದ 108 ಬಾರಿ ಪಠಣೆ ಮಾಡಬಹುದು. ಹನುಮಾನ್ ಚಾಲೀಸಾ ಮಾಡುವಾಗ ದೇಹ ಮತ್ತು ಮನಸ್ಸು ಎರಡೂ ಶುದ್ಧವಾಗಿರಬೇಕು. 

4. ಹನುಮಾನ್ ಚಾಲೀಸಾ ಪಠಣದ ಸಂಪೂರ್ಣ ಫಲವನ್ನು ಪಡೆಯಲು, ತಾಮಸಿಕ ಆಹಾರ ಅಥವಾ ಮದ್ಯ ಸೇವನೆಯನ್ನು ಸಹ ತ್ಯಜಿಸಬೇಕು. ಅದೇ ವೇಳೆ ಹನುಮಂತಯ್ಯನವರ ಕೃಪೆಗೆ ಪಾತ್ರರಾಗಬೇಕಾದರೆ ದುರ್ಬಲ ವ್ಯಕ್ತಿಯ ಮೇಲೆ ಬಲಪ್ರಯೋಗ ಮಾಡಬೇಡಿ, ಯಾರೊಂದಿಗೂ ನಿಂದನೀಯ ಭಾಷೆ ಮಾತನಾಡಬೇಡಿ.

5. ಹನುಮಾನ್ ಚಾಲೀಸಾವನ್ನು ಖುರ್ಚಿಯ ಮೇಲೆ ಕುಳಿತು ಮಾಡಬೇಕು. ನೆಲದ ಮೇಲೆ ಕುಳಿತು ಹನುಮಾನ್ ಚಾಲೀಸವನ್ನು ಪಠಿಸಿ.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News