ಎರಡನೇ ದಿನವೂ ಪೆಟ್ರೋಲ್-ಡೀಸೆಲ್ ದರ ಸ್ಥಿರ; ಇಂದಿನ ಬೆಲೆ ಎಷ್ಟಿದೆ?!

ಮಂಗಳವಾರವಷ್ಟೇ ಇಳಿಕೆ ಕಂಡಿದ್ದ ಪೆಟ್ರೋಲ್-ಡೀಸೆಲ್ ದರದಲ್ಲಿ ಸತತ ಎರಡನೇ ದಿನವೂ ಯಾವ ಬದಲಾವಣೆಯೂ ಆಗಿಲ್ಲ. ಇದರೊಂದಿಗೆ ದೆಹಲಿಯಲ್ಲಿ ಪೆಟ್ರೋಲ್ 72.60 ರೂ. ಮತ್ತು ಡೀಸೆಲ್ ಲೀಟರ್‌ಗೆ 65.75 ರೂ. ಆಗಿದೆ.

Last Updated : Nov 7, 2019, 08:28 AM IST
ಎರಡನೇ ದಿನವೂ ಪೆಟ್ರೋಲ್-ಡೀಸೆಲ್ ದರ ಸ್ಥಿರ; ಇಂದಿನ ಬೆಲೆ ಎಷ್ಟಿದೆ?! title=

ನವದೆಹಲಿ: ಕ್ರಿಯಾತ್ಮಕ ಬೆಲೆ ಯೋಜನೆ ಅಡಿಯಲ್ಲಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಜಾಗತಿಕ ಕಚ್ಚಾ ತೈಲದ ಬೆಲೆಗಳೊಂದಿಗೆ ಸಮನ್ವಯದಲ್ಲಿ ಪ್ರತಿದಿನವೂ ಪರಿಷ್ಕರಿಸಲಾಗುತ್ತಿದೆ. ಪ್ರಪಂಚದಾದ್ಯಂತ ತೈಲ ಪೂರೈಕೆ ಕುಸಿಯುತ್ತಿರುವ ಕಾರಣ, ಏಷ್ಯಾದ ಮಾರುಕಟ್ಟೆಗಳಲ್ಲಿ ತೈಲ ದರದ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ.

ಅಕ್ಟೋಬರ್ ತಿಂಗಳಲ್ಲಿ ಪೆಟ್ರೋಲ್ ದರ ಲೀಟರ್‌ಗೆ ಸುಮಾರು 2 ರೂ. ಮತ್ತು ಡೀಸೆಲ್ ಲೀಟರ್‌ಗೆ 1.50 ರೂ.ಗಿಂತ ಕಡಿಮೆಯಾಗಿದೆ.

ಮಂಗಳವಾರವಷ್ಟೇ ಇಳಿಕೆ ಕಂಡಿದ್ದ ಪೆಟ್ರೋಲ್-ಡೀಸೆಲ್ ದರದಲ್ಲಿ ಸತತ ಎರಡನೇ ದಿನವೂ ಯಾವ ಬದಲಾವಣೆಯೂ ಆಗಿಲ್ಲ.  ಇದರೊಂದಿಗೆ ದೆಹಲಿಯಲ್ಲಿ ಪೆಟ್ರೋಲ್ 72.60 ರೂ. ಮತ್ತು ಡೀಸೆಲ್ ಲೀಟರ್‌ಗೆ 65.75 ರೂ. ಆಗಿದೆ. 

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 75.08 ರೂ. ಮತ್ತು ಡೀಸೆಲ್ ಬೆಲೆ 67.99 ರೂ. ಆಗಿದೆ.

ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಗಳು ಕೆಳಕಂಡಂತಿದೆ

ನಗರಗಳು

ಪೆಟ್ರೋಲ್ 

(ರೂ./ಲೀ)

ಡೀಸೆಲ್

(ರೂ./ಲೀ)

ದೆಹಲಿ 72.60 65.75
ಕೊಲ್ಕತ್ತಾ 75.32 68.16
ಮುಂಬೈ 78.28 68.96
ಚೆನ್ನೈ 75.46 69.51
ಬೆಂಗಳೂರು 75.08 67.99
ಹೈದರಾಬಾದ್ 77.26 71.75
ತಿರುವನಂತಪುರಂ 75.98 70.78

ದೇಶಾದ್ಯಂತ ಎಲ್ಲಾ ರಾಜ್ಯಗಳ ಪೆಟ್ರೋಲ್-ಡೀಸೆಲ್ ಬೆಲೆ ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ: 

https://www.iocl.com/TotalProductList.aspx

Trending News