ನವದೆಹಲಿ:ನೌಕರರ ಭವಿಷ್ಯ ನಿಧಿ ಸಂಘಟನೆ (EPFO)ಯ ಸುಮಾರು 6 ಕೋಟಿಗೂ ಅಧಿಕ ಚಂದಾದಾರರಿಗೆ ಶೀಘ್ರದಲ್ಲಿಯೇ ದೊಡ್ಡ ಉಡುಗೊರೆ ಸಿಗುವ ಸಾಧ್ಯತೆ ಇದೆ. ಹೌದು, ಪಿಎಫ್ ಮೇಲೆ ಸಿಗುವ ವಿಮಾ ರಾಶಿಯಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ. EPF ಸಂಘಟನೆಯ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟೀಸ್ ಲಿಂಕ್ಡ್ ವಿಮಾ ಯೋಜನೆ 1976 ರಲ್ಲಿ ಬದಲಾವಣೆ ತರಲು ಅನುಮತಿ ನೀಡಿದೆ.
ಒಂದು ಲಕ್ಷ ರೂ. ವರೆಗೆ ಹೆಚ್ಚಳವಾಗುವ ಸಾಧ್ಯತೆ
ಪ್ರಸ್ತುತ ಇಪಿಎಫ್ ಖಾತೆದಾರರಿಗೆ ಆರು ಲಕ್ಷ ರೂಪಾಯಿಗಳ ವಿಮೆ ಸಿಗುತ್ತದೆ. ಈ ಮೊತ್ತವು ಒಂದು ಲಕ್ಷ ರೂಪಾಯಿಗಳಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಇದ್ರಿಂದ ಈ ಮೊತ್ತವು ಏಳು ಲಕ್ಷ ರೂಪಾಯಿಗಳಿಗೆ ಹೆಚ್ಚಾಗಲಿದೆ.
ಯಾವಾಗ ಸಿಗುತ್ತದೆ ಈ ವಿಮಾ ರಾಶಿ
ಯಾವುದೇ ಓರ್ವ EPFO ಚಂದಾದಾರ ನೌಕರಿ ಮಾಡುವಾಗಲೇ ಮೃತಪಟ್ಟರೆ, ಅವರ ಕುಟುಂಬ ಸದಸ್ಯರಿಗೆ ಈ ವಿಮಾ ಸೌಲಭ್ಯ ಸಿಗುತ್ತದೆ. ಶೀಗ್ರದಲ್ಲಿಯೇ ಈ ಪ್ರಸ್ತಾವನೆಯನ್ನು ಕೇಂದ್ರ ಹಣಕಾಸು ಸಚಿವಾಲಯಕ್ಕೆ ಕಳುಹಿಸಲಾಗುತ್ತಿದ್ದು, ಸಚಿವಾಲಯದ ಹಸಿರು ನಿಶಾನೆ ದೊರೆತೆ ಬಳಿಕ ಈ ಕುರಿತು ಅಧಿಸೂಚನೆ ಹೊರಡಿಸಲಾಗುವುದು.
ಸಂಘಟನೆಯ ಕೇಂದ್ರೀಯ ಮಂಡಳಿ ಕೇಂದ್ರ ಸರ್ಕಾರಕ್ಕೆ ಶೇ.8.50 ಬಡ್ಡಿ ದರ ಕಾಯುವಂತೆ ಶಿಫಾರಸ್ಸು ಮಾಡಿದೆ. ಇದನ್ನು ಒಟ್ಟು ಎರೆದು ಹಂತಗಳಲ್ಲಿ ಪಾವತಿಸಲು ತೀರ್ಮಾನಿಸಲಾಗಿದೆ.
ಪರಸ್ತುತ ಇಪಿಎಫ್‌ಒ ಹೆಚ್ಚಿನ ಪ್ರಮಾಣದಲ್ಲಿ ಬಡ್ಡಿ ಪಾವತಿಸಲು ಸಾಧ್ಯವಾಗುತ್ತಿಲ್ಲ. ಕಳೆದ ಐದು ವರ್ಷಗಳಿಂದ ಎಕ್ಸ್‌ಚೇಂಜ್ ಟ್ರೇಡೆಡ್ ಫಂಡ್ (ಇಟಿಎಫ್) ಮೂಲಕ ಮಾಡಲಾಗುತ್ತಿರುವ ಹೂಡಿಕೆಯ ಆದಾಯವು ಇಪಿಎಫ್‌ಒಗೆ ನಕಾರಾತ್ಮಕ ವರದಿಯಾಗಿದೆ. ಇಪಿಎಫ್‌ಒ ತನ್ನ ವಾರ್ಷಿಕ ಠೇವಣಿಗಳ 85% ಅನ್ನು ಡೆಟ್ ಫಂಡ್ ಗಳಲ್ಲಿ (ಉದಾ. ಬಾಂಡ್‌ಗಳು, ಡಿಬೆಂಚರ್‌ಗಳು, ಇತ್ಯಾದಿ) ಹೂಡಿಕೆ ಮಾಡುತ್ತದೆ, ಉಳಿದ 15% ಇಟಿಎಫ್‌ಗಳ ಮೂಲಕ ಷೇರುಗಳನ್ನು ಹೂಡಿಕೆ ಮಾಡುತ್ತದೆ. ಈಕ್ವಿಟಿ ಹೂಡಿಕೆ ಎಂದರೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ. ಸಾಮಾನ್ಯವಾಗಿ ಇದು ಹೆಚ್ಚು ಅಪಾಯಕಾರಿ, ಆದರೆ ಆದಾಯವು ಉತ್ತಮವಾಗಿರುತ್ತದೆ. ಈ ಬಾರಿ ಕರೋನಾ ಬಿಕ್ಕಟ್ಟಿನಿಂದಾಗಿ, ಷೇರು ಹೂಡಿಕೆಯ ಗಳಿಕೆಯಲ್ಲಿ ತುಂಬಾ ಇಳಿಮುಖವಾಗಿದೆ.