PM kisan: ಈಗ ವರ್ಷಕ್ಕೆ 6 ಸಾವಿರದ ಬದಲು ಸಿಗಲಿದೆ 36,000 ರೂ. ತಕ್ಷಣ ಈ ಕೆಲಸ ಮಾಡಿ

ಪಿಎಂ ಕಿಸಾನ್ ಮನ್ ಧನ್ ಯೋಜನೆ ಅಡಿಯಲ್ಲಿ ರೈತರಿಗೆ ಪ್ರತಿ ತಿಂಗಳು ಪಿಂಚಣಿ ನೀಡಲಾಗುತ್ತದೆ. ರೈತರಿಗೆ ಆರ್ಥಿಕ ಸಹಾಯ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಯೋಜನೆ ಜಾರಿಗೆ ತಂದಿದೆ. 

Written by - Ranjitha R K | Last Updated : Jul 14, 2021, 04:24 PM IST
  • ಪಿಎಂ ಕಿಸಾನ್ ಸಮ್ಮನ್ ನಿಧಿ ಲಾಭ ಪಡೆಯುವ ರೈತರಿಗೊಂದು ಶುಭ ಸುದ್ದಿ.
  • ಇನ್ನು ಪ್ರತಿ ತಿಂಗಳು 3000 ರೂಪಾಯಿಗಳನ್ನು ಪಡೆಯಬಹುದು.
  • ಪಿಎಂ ಕಿಸಾನ್ ಲಾಭ ಪಡೆಯುತ್ತಿದ್ದರೆ ಹೆಚ್ಚುವರಿ ದಾಖಲೆ ಸಲ್ಲಿಸುವ ಅಗತ್ಯವಿಲ್ಲ.
PM kisan: ಈಗ ವರ್ಷಕ್ಕೆ  6 ಸಾವಿರದ ಬದಲು ಸಿಗಲಿದೆ 36,000 ರೂ. ತಕ್ಷಣ ಈ ಕೆಲಸ ಮಾಡಿ  title=
ಪಿಎಂ ಕಿಸಾನ್ ಸಮ್ಮನ್ ನಿಧಿ ಲಾಭ ಪಡೆಯುವ ರೈತರಿಗೊಂದು ಶುಭ ಸುದ್ದಿ. (photo zee news)

ನವದೆಹಲಿ : PM kisan Man dhan Yojna : ಪಿಎಂ ಕಿಸಾನ್ ಸಮ್ಮನ್ ನಿಧಿ ಲಾಭ ಪಡೆಯುವ ರೈತರಿಗೊಂದು ಶುಭ ಸುದ್ದಿ. ನೀವು ಕಿಸಾನ್ ಸಮ್ಮನ್ ನಿಧಿ (Kisan samman nidhi scheme) ಯೋಜನೆಯ ಲಾಭವನ್ನು ಪಡೆದುಕೊಳ್ಳುತ್ತಿದ್ದರೆ, ಇನ್ನು ಪ್ರತಿ ತಿಂಗಳು 3000 ರೂಪಾಯಿಗಳನ್ನು ಪಡೆಯಬಹುದು. ಈ ಯೋಜನೆಯ ಲಾಭ ಪಡೆಯಲು ಯಾವುದೇ ರೀತಿಯ ದಾಖಲೆಯನ್ನು ಒದಗಿಸಬೇಕಾಗಿಲ್ಲ. ಪಿಎಂ ಕಿಸಾನ್ ಮನ್ ಧನ್ ಯೋಜನೆ (PM kisan Man dhan Yojna) ಅಡಿಯಲ್ಲಿ ರೈತರು ಪ್ರತಿವರ್ಷ 36,000 ರೂಗಳನ್ನು ಪಡೆಯಬಹುದು.

ಹೇಗೆ ಸಿಗಲಿದೆ ವರ್ಷಕ್ಕೆ 36,000 ರೂ : 
ಪಿಎಂ ಕಿಸಾನ್ ಮನ್ ಧನ್ ಯೋಜನೆ (PM kisan Man dhan Yojna Benefits) ಅಡಿಯಲ್ಲಿ ರೈತರಿಗೆ ಪ್ರತಿ ತಿಂಗಳು ಪಿಂಚಣಿ ನೀಡಲಾಗುತ್ತದೆ. ಈ ಯೋಜನೆಯಡಿ, 60 ವರ್ಷದ ನಂತರ, ರೈತರಿಗೆ ಪ್ರತಿ ತಿಂಗಳು 3000 ರೂ.ಗಳ ಪಿಂಚಣಿ ನೀಡಲಾಗುತ್ತದೆ. ಅಂದರೆ ವರ್ಷಕ್ಕೆ 36,000 ರೂ. ರೈತರಿಗೆ ಆರ್ಥಿಕ ಸಹಾಯ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ (Central government) ಈ ಯೋಜನೆ ಜಾರಿಗೆ ತಂದಿದೆ. 

ಇದನ್ನೂ ಓದಿ : PM Kisan Tractor Scheme: ಪಿಎಂ ಕಿಸಾನ್ ಟ್ರ್ಯಾಕ್ಟರ್ ಯೋಜನೆ ಅಡಿಯಲ್ಲಿ ಟ್ರ್ಯಾಕ್ಟರ್ ಖರೀದಿಸಿದರೆ ಸಿಗಲಿದೆ 50 ಶೇ ಸಬ್ಸಿಡಿ

ಅಗತ್ಯ ದಾಖಲೆಗಳು :
ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಈ ಯೋಜನೆಯ ಲಾಭ ಪಡೆಯಲು, ಕೆಲವು ದಾಖಲೆಗಳುನ್ನು ಸಲ್ಲಿಸಬೇಕಾಗುತ್ತದೆ.  ಅವುಗಳೆಂದರೆ ಆಧಾರ್ ಕಾರ್ಡ್(Aadhaar card), ಬ್ಯಾಂಕ್ ಖಾತೆ ವಿವರಗಳು . ಆದರೆ, ಯಾವ ರೈತರು ಈಗಾಗಲೇ ಪಿಎಂ ಕಿಸಾನ್ ಲಾಭವನ್ನು (benefits of Pm Kisan) ಪಡೆದುಕೊಳ್ಳುತ್ತಿದ್ದಾರೋ ಅವರು, ಹೆಚ್ಚುವರಿ ದಾಖಲೆಯನ್ನು ಸಲ್ಲಿಸುವ ಅಗತ್ಯವಿಲ್ಲ.

ಈ ಯೋಜನೆಯ ಲಾಭ ಯಾರಿಗೆ ಸಿಗುತ್ತದೆ :
1. 18 ರಿಂದ 40 ವರ್ಷದೊಳಗಿನ ಯಾವುದೇ ರೈತ ಈ ಯೋಜನೆಯ ಲಾಭವನ್ನು ಪಡೆಯಬಹುದು.
2. ಇದಕ್ಕಾಗಿ,  ಗರಿಷ್ಠ 2 ಹೆಕ್ಟೇರ್ ಕೃಷಿ ಮಾಡಬಹುದಾದ ಭೂಮಿ ಇರಬೇಕು.
3.  ರೈತನ ವಯಸ್ಸಿಗೆ ಅನುಗುಣವಾಗಿ  ಕನಿಷ್ಠ 20 ವರ್ಷ ಮತ್ತು ಗರಿಷ್ಠ 40 ವರ್ಷಗಳು ಮಾಸಿಕ 55 ರಿಂದ 200 ರೂ ಜಮೆ ಮಾಡಬೇಕಾಗುತ್ತದೆ. 
4. 18 ವರ್ಷ ವಯಸ್ಸಿನಲ್ಲಿ ಈ ಯೋಜನೆಗೆ ಸೇರುವ ರೈತರು ಮಾಸಿಕ 55 ರೂ. ಭರಿಸಬೇಕಾಗುತ್ತದೆ. 
5. ನೀವು 30 ನೇ ವಯಸ್ಸಿನಲ್ಲಿ ಈ ಯೋಜನೆಗೆ ಸೇರಿದರೆ, ನೀವು 110 ರೂ. ಜಮೆ ಮಾಡಬೇಕು. 
6. ನೀವು 40 ನೇ ವಯಸ್ಸಿನಲ್ಲಿ ಸೇರಿದರೆ, ಪ್ರತಿ ತಿಂಗಳು ಭಾರಿಸಬೇಕಾಗಿರುವ ಮೊತ್ತ 200 ರೂ.

ಇದನ್ನೂ ಓದಿ : PAN Card Latest News : ಈ ಹೊಸ ವೆಬ್‌ಸೈಟ್‌ನಿಂದ 5 ನಿಮಿಷಗಳಲ್ಲಿ e-Pan ಕಾರ್ಡ್ ಡೌನ್‌ಲೋಡ್ ಮಾಡಿ : ಹೇಗೆ ಇಲ್ಲಿದೆ ನೋಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News