ನವದೆಹಲಿ: ಸಿಜೆಐ ಕಚೇರಿ ಮಾಹಿತಿ ಹಕ್ಕು ಕಾಯ್ದೆ ವಾಪ್ತಿಗೆ ಒಳಪಡುತ್ತದೆ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ಆ ಮೂಲಕ ದೆಹಲಿ ಹೈಕೋರ್ಟ್ ನೀಡಿದ ತೀರ್ಪನ್ನು ಎತ್ತಿ ಹಿಡಿದಿದೆ.
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಐದು ನ್ಯಾಯಾಧೀಶರ ಸಂವಿಧಾನ ಪೀಠವು ಮಧ್ಯಾಹ್ನ 2 ಗಂಟೆಗೆ ತೀರ್ಪು ಪ್ರಕಟಿಸಿದೆ. ಈ ನ್ಯಾಯಪೀಠದಲ್ಲಿ ನ್ಯಾಯಮೂರ್ತಿಗಳಾದ ಎನ್.ವಿ.ರಮಣ, ಡಿ.ವೈ.ಚಂದ್ರಚೂಡ್, ದೀಪಕ್ ಗುಪ್ತಾ ಮತ್ತು ಸಂಜೀವ್ ಖನ್ನಾ ಅವರು ಸದಸ್ಯರುಗಳಾಗಿದ್ದಾರೆ. ಈಗ ತೀರ್ಪಿನ ಘೋಷಣೆಗೆ ಸಂಬಂಧಿಸಿದ ನೋಟೀಸ್ ಅನ್ನು ಮಂಗಳವಾರ ಮಧ್ಯಾಹ್ನ ಸುಪ್ರೀಂ ಕೋರ್ಟ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಬಹಿರಂಗಪಡಿಸಿತ್ತು.
#Breaking: The office of Chief Justice of India comes under the purview of "public authority" and covered under RTI#RTI
— Bar & Bench (@barandbench) November 13, 2019
ಜನವರಿ 10, 2010 ರಂದು ನೀಡಿದ ಐತಿಹಾಸಿಕ ತೀರ್ಪಿನಲ್ಲಿ, ಭಾರತದ ಮುಖ್ಯ ನ್ಯಾಯಮೂರ್ತಿಗಳ ಕಚೇರಿ ಮಾಹಿತಿ ಹಕ್ಕು (ಆರ್‌ಟಿಐ) ಕಾನೂನಿನ ವ್ಯಾಪ್ತಿಯಲ್ಲಿ ಬರುತ್ತದೆ ಎಂದು ದೆಹಲಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ, ನ್ಯಾಯಾಂಗ ಸ್ವಾತಂತ್ರ್ಯವು ನ್ಯಾಯಾಧೀಶರ ಸವಲತ್ತು ಅಲ್ಲ, ಆದರು ಅವರ ಮೇಲಿನ ಜವಾಬ್ದಾರಿ ಎಂದು ಹೇಳಿದೆ. ಆಗಿನ 88 ಪುಟಗಳ ತೀರ್ಪನ್ನು ಸಿಜೆಐ, ಕೆ.ಜಿ.ಬಾಲಕೃಷ್ಣನ್ ಗೆ ವೈಯಕ್ತಿಕ ಹಿನ್ನಡೆ ಎಂದು ಭಾವಿಸಲಾಗಿತ್ತು. ಆರ್‌ಟಿಐ ಕಾಯ್ದೆಯಡಿ ನ್ಯಾಯಾಧೀಶರಿಗೆ ಸಂಬಂಧಿಸಿದ ಮಾಹಿತಿಯನ್ನು ಬಹಿರಂಗಪಡಿಸುವುದನ್ನು ಆಗಿನ ಸಿಜೆಐ ಬಾಲಕೃಷ್ಣನ್ ವಿರೋಧಿಸಿದ್ದರು.
Decision of the Delhi High Court upheld, Justice Chandrachud#RTI
— Bar & Bench (@barandbench) November 13, 2019
ಐದು ನ್ಯಾಯಾಧೀಶರ ಸಂವಿಧಾನ ಪೀಠವು ಏಪ್ರಿಲ್ 4 ರಂದು ಸುಪ್ರೀಂ ಕೋರ್ಟ್ ಪ್ರಧಾನ ಕಾರ್ಯದರ್ಶಿ ಮತ್ತು ಅದರ ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ ಹೈಕೋರ್ಟ್ ಮತ್ತು ಕೇಂದ್ರ ಮಾಹಿತಿ ಆಯೋಗದ (ಸಿಐಸಿ) ಆದೇಶಗಳ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿಗಳ ತೀರ್ಪನ್ನು ಕಾಯ್ದಿರಿಸಿತ್ತು.