ಭೂಪಾಲ್: ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಎನ್ ಡಿ ಟಿ ವಿ ಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಾ ಪ್ರಧಾನಿ ಭಾರತಕ್ಕೆ ದೇವರು ಕರುಣಿಸಿದ ವರ ಎಂದು ಬಣ್ಣಿಸಿದರು.
ಮಧ್ಯಪ್ರದೇಶದ ಈ ವರ್ಷದಲ್ಲಿ ವಿಧಾನಸಭಾ ಚುನಾವಣೆಗೆ ಹೋಗುತ್ತಿರುವುದರಿಂದ ಈ ಸಂದರ್ಭದಲ್ಲಿ ಕಾಂಗ್ರೇಸ್ ವಿರುದ್ಧ ಕಿಡಿ ಕಾರಿದ ಚೌಹಾಣ್" ಅವರು ಜನರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುವುದಿಲ್ಲ.ಅವರು ಸಾರ್ವಜನಿಕರನ್ನು ತಮ್ಮ ಪ್ರಜೆಗಳೆಂದು ತಿಳಿದಿದ್ದಾರೆ. ಆದರೆ ನಾನು ತಮ್ಮ ಅಥವಾ ಮಾಮಾ ಎಂದು ರಾಜ್ಯದ ಜನರಿಂದ ಕರೆಯಲ್ಪಡುತ್ತಿದ್ದೇನೆ" ಎಂದು ತಿಳಿಸಿದರು.
ಮಧ್ಯಪ್ರದೇಶದಲ್ಲಿ ಈ ವರ್ಷಾಂತ್ಯದಲ್ಲಿ ವಿಧಾನಸಭಾ ಚುನಾವಣೆ ಚುನಾವಣೆ ಇರುವುದರಿಂದ ನಾಲ್ಕನೇ ಬಾರಿಗೆ ಗೆಲ್ಲುವ ನಿರೀಕ್ಷೆಯಲ್ಲಿರುವ ಶಿವರಾಜ್ ಸಿಂಗ್ ಚೌಹಾಣ್ ಆದರೆ ಈ ಬಾರಿ ಪ್ರತಿಪಕ್ಷಗಳಿಂದ ತೀವ್ರ ಸ್ಪರ್ಧೆ ಎದುರಿಸುತ್ತಿದ್ದಾರೆ.
2013 ರಲ್ಲಿ ಸರ್ಕಾರಿ ಉದ್ಯೋಗಕ್ಕಾಗಿ ನಡೆದ ಪರೀಕ್ಷೆಗಳಲ್ಲಿ ವಂಚನೆ ನಡೆದು ವ್ಯಾಪಂ ಹಗರಣದ ಮೂಲಕ ಬಾರಿ ಟೀಕೆಗೆ ಒಳಪಟ್ಟಿದ್ದ ಚೌಹಾಣ್ ಸರ್ಕಾರವು ಈ ಬಾರಿ ಗೆಲ್ಲುವು ಕುದುರೆಯಾಗುವುದು ಕಷ್ಟ ಎಂದು ಹೇಳಲಾಗುತ್ತದೆ.