ನವದೆಹಲಿ: ಮದುವೆ ಡ್ರೆಸ್ ನಲ್ಲಿಯೇ ಕ್ರಿಕೆಟ್ ಆಡಲು ಮೈದಾನಕ್ಕೆ ಇಳಿದ ಬಾಂಗ್ಲಾದೇಶದ ಮಹಿಳಾ ಕ್ರಿಕೆಟರ್ ಸಂಜಿದಾ ಇಸ್ಲಾಂ ಅವರ ಪೋಟೋಗಳು ಈಗ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿದೆ.ಈ ಪೋಟೋಗಳು ಆಕೆಗೆ ಕ್ರಿಕೆಟ್ ಮೇಲಿನ ಮೋಹವನ್ನು ತೋರಿಸುತ್ತವೆ.
Dress ✅
Jewellery ✅
Cricket bat ✅Wedding photoshoots for cricketers be like ... 👌
📸 🇧🇩 Sanjida Islam pic.twitter.com/57NSY6vRgU
— ICC (@ICC) October 21, 2020
ಈ ಫೋಟೋಗಳನ್ನು 24 ವರ್ಷದ ಈ ಆಟಗಾರ್ತಿ ಸಂಜಿದಾ ಇಸ್ಲಾಂ ತನ್ನ ಇನ್ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಂಡಿದ್ದಾರೆ.ಸಾಂಪ್ರದಾಯಿಕ ಸೀರೆಯಲ್ಲಿ ಧರಿಸಿ, ಆಭರಣಗಳೊಂದಿಗೆ ಸಂಪೂರ್ಣ ಮೈದಾನದಲ್ಲಿ ಆಡುವುದನ್ನು ಈ ಫೋಟೋ ಗಳಲ್ಲಿ ಸೆರೆ ಹಿಡಿಯಲಾಗಿದೆ. ಬ್ಯಾಟ್ನೊಂದಿಗೆ ವಿಭಿನ್ನ ರೀತಿಯಲ್ಲಿ ಪೋಸ್ ನೀಡಿರುವ ರಂಜಿದಾ ರಂಗ್ಪುರದ ಪ್ರಥಮ ದರ್ಜೆ ಕ್ರಿಕೆಟರ್ ಮಿಮ್ ಮೊಸದ್ದೀಕ್ ಅವರನ್ನು ವಿವಾಹವಾದರು.
'ನಾನು ಧೋನಿ ಇನಿಂಗ್ಸ್ ಗಳನ್ನು ನೋಡಿ ಆಟದ ಬಗ್ಗೆ ಕಲಿಯುತ್ತಿರುತ್ತೇನೆ' ಎಂದ ಬಾಂಗ್ಲಾ ಕ್ರಿಕೆಟರ್
ಈ ಫೋಟೋಗಳನ್ನು ಟ್ವಿಟ್ಟರ್ನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಹಂಚಿಕೊಂಡಿದೆ