ಜಲಪಾಯ್ಗುಡಿ: ಪಶ್ಚಿಮ ಬಂಗಾಳದ ಜಲಪಾಯ್ಗುಡಿಯಲ್ಲಿ ಲೋಕಸಭೆ ಚುನಾವಣೆಣಾ ಪ್ರಚಾರದಲ್ಲಿ ಬ್ಯುಸಿ ಆಗಿರುವ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಯಾವ ರಾಜಕೀಯ ಪಕ್ಷ ಸಹ ಜಲಪಾಯ್ಗುಡಿ ಕಡೆ ತಿರುಗಿಯೂ ನೋಡಿಲ್ಲ. ಎಲ್ಲಾ ಪಕ್ಷಗಳೂ ನಿರ್ಲಕ್ಷಿಸಿವೆ. ಹಾಗಾಗಿ ಕಾರ್ಮಿಕರ ಹಕ್ಕುಗಳನ್ನು ಉಳಿಸಿಕೊಳ್ಳಲು ನಾವು ಸಮಿತಿಯನ್ನು ರಚಿಸಿದ್ದೇವೆ. ಇದಲ್ಲದೆ, ಕಾರ್ಮಿಕರಿಗೆ ಉತ್ತಮ ವೇತನ ನೀಡದ ಚಕಾ ತೋಟದ ಮಾಲೀಕರ ವಿರುದ್ಧ ನಮ್ಮ ಸರ್ಕರಾ ಕ್ರಮ ಕೈಗೊಳ್ಳಲಿದೆ ಎಂದರು.
"ತೃಣಮೂಲ ಕಾಂಗ್ರೆಸ್ ನಿಮ್ಮ ಕಾಳಜಿ ವಹಿಸುತ್ತದೆ. ನೀವು ಮತ್ತು ನಿಮ್ಮ ಕುಟುಂಬದ ಸದಸ್ಯರು ಸಂತೋಷವಾಗಿರಬೇಕು. ಅದಕ್ಕಾಗಿ ಸರ್ಕಾರ ಎಲ್ಲಾ ಸೌಲಭ್ಯಗಳನ್ನು ಒದಗಿಸಿದೆ. ಆರೋಗ್ಯಕ್ಕಾಗಿ ಆಸ್ಪತ್ರೆ, ರಸ್ತೆ, ಮಾರುಕಟ್ಟೆ ಹೀಗೆ ಎಲ್ಲಾ ಸೌಲಭ್ಯಗಳನ್ನೂ ತೃಣಮೂಲ ಕಾಂಗ್ರೆಸ್ ವ್ಯವಸ್ಥೆಗೊಳಿಸಿದೆ" ಎಂದು ಮಮತಾ ಬ್ಯಾನರ್ಜಿ ಹೇಳಿದರು.
ಇದೇ ವೇಳೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಮಮತಾ ಬ್ಯಾನರ್ಜಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ಚಾಯ್ವಾಲಾ ಎಂದು ಬಿಂಬಿಸಿಕೊಂಡು ಜನತೆಯ ಮತ ಪಡೆದಿದ್ದರು. ಈಗ ಅವರು ಚಾಯ್ವಾಲಾ ಆಗಿ ಉಳಿದಿಲ್ಲ. ಸ್ವತಃ ಚೌಕಿದಾರ ಎಂದು ಹೇಳಿಕೊಳ್ಳುತ್ತಿದ್ದಾರೆ. ಐದು ವರ್ಷಗಳ ಅಧಿಕಾರದಲ್ಲಿ ನಾಲ್ಕು ವರ್ಷ ವಿದೇಶ ಪ್ರವಾಸದಲ್ಲಿ ಕಳೆದಿದ್ದಾರೆ. ಆದರೆ ದೇಶಕ್ಕಾಗಿ ಏನೂ ಮಾಡಿಲ್ಲ" ಎಂದು ಟೀಕಿಸಿದರು.