ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ನೆನ್ನೆಯಷ್ಟೇ ತಮ್ಮ 70ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ದೇಶಾದ್ಯಂತ ಕೋಟ್ಯಂತರ ಜನರ ಪ್ರೀತಿಯ ಶುಭಾಶಯಗಳ ಜೊತೆಗೆ ವಿಶ್ವದ ಹಲವು ಗಣ್ಯರು ಶುಭಾಶಯ ಕೋರಿದ್ದಾರೆ.
ಇದೀಗ ತಮ್ಮ ಜನ್ಮದಿನಕ್ಕಾಗಿ ಏನು ಉಡುಗೊರೆ ಬೇಕು ಎಂದು ಹಲವು ಮಂದಿ ಕೇಳಿದ್ದಾರೆ ಎನ್ನುವ ಮೂಲಕ ತಮ್ಮ ಜನ್ಮದಿನಕ್ಕೆ ಯಾವ ಗಿಫ್ಟ್ ಗಳು ಬೇಕು ಎಂಬ ಪಟ್ಟಿಯನ್ನು ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಪ್ರಧಾನಿ ಮೋದಿಯವರಿಗೆ ಜನ್ಮದಿನಕ್ಕೆ ಉಡುಗೊರೆಯಾಗಿ ಬೇಕಿರುವ ಗಿಫ್ಟ್ ಗಳ ಪಟ್ಟಿ ಇಲ್ಲಿದೆ...
* ಮಾಸ್ಕ್ (Mask) ಧರಿಸಿ ಮತ್ತು ಸರಿಯಾದ ರೀತಿಯಲ್ಲಿ ಧರಿಸಿ
* ಸಾಮಾಜಿಕ ಅಂತರವನ್ನು (Social Distance) ಕಾಯ್ದುಕೊಳ್ಳಿ. ಎರಡು ಗಜಗಳ ಅಂತರದಲ್ಲಿರಬೇಕು ಎಂಬುದನ್ನು ನೆನಪಿಡಿ
* ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ
* ಎಲ್ಲರೂ ಒಗ್ಗೂಡಿ ನಮ್ಮ ಜಗತ್ತನ್ನು ಆರೋಗ್ಯಕರವಾಗಿಸೋಣ ಎಂದು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.
Since many have asked, what is it that I want for my birthday, here is what I seek right now:
Keep wearing a mask and wear it properly.
Follow social distancing. Remember ‘Do Gaj Ki Doori.’
Avoid crowded spaces.
Improve your immunity.
Let us make our planet healthy.
— Narendra Modi (@narendramodi) September 17, 2020
ಎಲ್ಲರಿಗೂ ಧನ್ಯವಾದಗಳು!
ತಮ್ಮ ಉಡುಗೊರೆಯ ಬಗ್ಗೆ ಹೇಳುವುದರ ಹೊರತಾಗಿ ಪ್ರಧಾನಿ ತಮಗೆ ಶುಭಾಶಯ ಕೋರಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದರು. ಈ ಕುರಿತಂತೆ ಇನ್ನೊಂದು ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ನನ್ನ ಜನ್ಮದಿನದಂದು ದೇಶದ ಮತ್ತು ಇಡೀ ಪ್ರಪಂಚದ ಜನರು ತಮ್ಮ ಶುಭಾಶಯಗಳನ್ನು ತಿಳಿಸಿದರು. ನನ್ನನ್ನು ಅಭಿನಂದಿಸಿದ ಎಲ್ಲರಿಗೂ ನಾನು ಆಭಾರಿಯಾಗಿದ್ದೇನೆ. ಈ ಶುಭಾಶಯಗಳು ನನ್ನ ನಾಗರಿಕರಿಗೆ ಸೇವೆ ಸಲ್ಲಿಸುವ ಶಕ್ತಿಯನ್ನು ನೀಡುತ್ತದೆ ಮತ್ತು ಅವರ ಜೀವನ ಮಟ್ಟವನ್ನು ಸುಧಾರಿಸುವತ್ತ ಕೆಲಸ ಮಾಡುತ್ತವೆ ಎಂದು ಬರೆದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ @ 70: ಹೋರಾಟದ ಭೂಮಿಯಿಂದ ರಾಜ್‌ಪಾತ್‌ವರೆಗೆ
People from all over India, from all over the world have shared their kind wishes. I am grateful to each and every person who has greeted me. These greetings give me strength to serve and work towards improving the lives of my fellow citizens.
— Narendra Modi (@narendramodi) September 17, 2020
ಕೆಲಸದ ಶೈಲಿಯ ಮೆಚ್ಚುಗೆ :
ಪ್ರಧಾನಿ ನರೇಂದ್ರ ಮೋದಿಯವರಿಗೆ ವಿಶ್ವದ ಹಲವು ಗಣ್ಯ ನಾಯಕರು ಶುಭಾಶಯ ಕೋರಿದ್ದಾರೆ. ಇದರಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್, ಜರ್ಮನ್ ಚಾನ್ಸೆಲರ್ ಏಂಜೆಲಾ ಮರ್ಕೆಲ್, ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಶ್ರೀಲಂಕಾದ ಅಧ್ಯಕ್ಷ ಮತ್ತು ಪ್ರಧಾನಿ ಮತ್ತು ನೇಪಾಳದ ಪ್ರಧಾನಿ ಕೆ.ಪಿ.ಶರ್ಮಾ ಒಲಿ ಸೇರಿದ್ದಾರೆ. ಈ ಸಂದರ್ಭದಲ್ಲಿ ಪುಟಿನ್ ಪ್ರಧಾನಿ ಮೋದಿಯವರ ಕಾರ್ಯ ಶೈಲಿಯನ್ನು ಶ್ಲಾಘಿಸುವ ಪತ್ರ ಬರೆದಿದ್ದಾರೆ.
ಪ್ರಧಾನಿ ಮೋದಿಯವರ 70ನೇ ಹುಟ್ಟುಹಬ್ಬದ ಅಂಗವಾಗಿ ಬಿಜೆಪಿಯಿಂದ 'ಸೇವಾ ಸಪ್ತಾಹ' ಆಚರಣೆ
ಬಿಜೆಪಿ ವತಿಯಿಂದ 'ಸೇವಾ ಸಪ್ತಾಹ':
ಪ್ರಧಾನಿ ನರೇಂದ್ರ ಮೋದಿಯವರ 70 ನೇ ಹುಟ್ಟುಹಬ್ಬವನ್ನು ಸೇವಾ ವಾರ ಎಂದು ಬಿಜೆಪಿ ಆಚರಿಸುತ್ತಿದೆ. ಸೆಪ್ಟೆಂಬರ್ 14 ರಿಂದ 20 ರವರೆಗೆ ನಡೆಯುವ ಈ ಸೇವಾ ಸಪ್ತಾಹದಲ್ಲಿ ಬೂತ್ ಹಂತದವರೆಗಿನ ಪ್ರತಿಯೊಬ್ಬ ಕಾರ್ಮಿಕರು ತಮ್ಮ ಪ್ರದೇಶಗಳಲ್ಲಿ ವಿಭಿನ್ನ ಸೇವೆಯನ್ನು ಮಾಡುತ್ತಿದ್ದಾರೆ. ಆಸ್ಪತ್ರೆಯಲ್ಲಿ ಹಣ್ಣುಗಳನ್ನು ವಿತರಿಸುವುದು, ಮಕ್ಕಳಿಗೆ ಪುಸ್ತಕಗಳನ್ನು ನೀಡುವುದು, ರಕ್ತದಾನ ಹೀಗೆ ಹಲವು ರೀತಿಯಲ್ಲಿ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ರಾಷ್ಟ್ರವ್ಯಾಪಿ ನಡೆಯಲಿರುವ ಸೇವಾ ಸಪ್ತಾಹ ಅಭಿಯಾನಕ್ಕಾಗಿ ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಎಲ್ಲಾ ಸಾಂಸ್ಥಿಕ ಘಟಕಗಳು ಮತ್ತು ಕಾರ್ಮಿಕರಿಗೆ ಪ್ರತ್ಯೇಕ ಸೇವಾ ಚಟುವಟಿಕೆಗಳನ್ನು ನಡೆಸುವಂತೆ ಸೂಚನೆ ನೀಡಿದ್ದಾರೆ.