ನವ ದೆಹಲಿ: ನೋಟು ಅಮಾನೀಕರಣದ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಅಮಾನೀಕರಣಕ್ಕೆ ಬೆಂಬಲ ನೀಡಿ ಯಶಸ್ವೀಗೊಳಿಸಿದ 125 ಕೋಟಿ ಭಾರತೀಯರಿಗೆ ನನ್ನ ಧನ್ಯವಾದಗಳು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಬುಧವಾರ ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ಮೋದಿ ತಮ್ಮ ಟ್ವೀಟ್ ನಲ್ಲಿ ನೀಡುರುವ ಗ್ರಾಫಿಕ್ ನೋಟು ಅಮಾನೀಕರಣ 'ಒಂದು ಐತಿಹಾಸಿಕ ಮತ್ತು ಬಹು-ಆಯಾಮದ ಯಶಸ್ಸು' ಎಂಬುದನ್ನು ಸೂಚಿಸುತ್ತದೆ.
125 crore Indians fought a decisive battle and WON. #AntiBlackMoneyDay pic.twitter.com/3NPqEBhqGq
— Narendra Modi (@narendramodi) November 8, 2017
"ಭ್ರಷ್ಟಾಚಾರ ಮತ್ತು ಕಪ್ಪು ಹಣವನ್ನು ನಿರ್ಮೂಲನೆ ಮಾಡಲು ಸರಕಾರ ತೆಗೆದುಕೊಂಡ ಹಲವಾರು ಕ್ರಮಗಳನ್ನು ದೃಢವಾಗಿ ಬೆಂಬಲಿಸಿದ ಭಾರತದ ಜನರಿಗೆ ನಾನು ನಮಿಸುತ್ತೇನೆ" ಎಂದು ಅವರು ಹೇಳಿದರು.
2016 ರ ನವೆಂಬರ್ 8 ರಂದು ಪ್ರಧಾನಿ ಮೋದಿ ರಾತ್ರಿಯ 1000 ಮತ್ತು 500 ರೂಪಾಯಿಗಳನ್ನು ರದ್ದುಪಡಿಸುವ ಮೂಲಕ ಕಪ್ಪು ಹಣ ಮತ್ತು ಭ್ರಷ್ಟಾಚಾರದ ವಿರುದ್ಧ ಇದೊಂದು "ನಿರ್ಣಾಯಕ ಯುದ್ಧ" ಎಂದು ಹೇಳಿದ್ದರು.
ಕಳೆದ ನವೆಂಬರ್ 8ರ ರಾತ್ರಿ 40 ನಿಮಿಷದ ಭಾಷಣ ಮಾಡಿದ ಪ್ರಧಾನಿ ಮೋದಿ, ಮಧ್ಯರಾತ್ರಿಯಿಂದ 500 ರಿಂದ 1000 ರೂ.ಗಳಿಗೆ ಕಾನೂನಿನ ಮಾನ್ಯತೆ ಇರುವುದಿಲ್ಲ. ಇನ್ನು ಮುಂದೆ ಅವು 'ಕೇವಲ ನಿಷ್ಪ್ರಯೋಜಕ ಕಾಗದ' ಎಂದು ತಿಳಿಸಿದ್ದರು.
ನಂತರ 50 ದಿನಗಳು (ನವೆಂಬರ್ 10 ರಿಂದ ಡಿಸೆಂಬರ್ 30) ಎಲ್ಲಾ ಬ್ಯಾಂಕ್ ಹಾಗೂ ಪೋಸ್ಟ್ ಆಫೀಸ್ನಲ್ಲಿ ಹಳೆಯ 500 ಮತ್ತು 1000 ರೂ. ನೋಟುಗಳನ್ನು ಠೇವಣಿ ಮಾಡಲು ಅವಕಾಶ ನೀಡಿದ್ದರು.