ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಜುಲೈ 27 ರಂದು ನೋಯ್ಡಾ, ಕೋಲ್ಕತಾ, ಮತ್ತು ಮುಂಬೈನಲ್ಲಿರುವ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಮೂರು ಹೊಸ ಹೈ-ಥ್ರೂಪುಟ್ ಲ್ಯಾಬ್‌ಗಳನ್ನು ವೀಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಲಿದ್ದಾರೆ.
ಸುದ್ದಿಸಂಸ್ಥೆ ಎಎನ್‌ಐ ಪ್ರಕಾರ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath), ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ (Mamata Banerjee) ಮತ್ತು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ (Uddhav Thackeray) ವರ್ಚುವಲ್ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಈ 3 ವಿಧಗಳಲ್ಲಿ ಸಾಯುತ್ತದೆಯಂತೆ Covid-19, ಇಲ್ಲಿದೆ ಕರೋನಾ ವಿಮೋಚನೆಯ ಮಂತ್ರ
ವಿಶ್ವದ ಅತ್ಯಂತ ಹಳೆಯ ವೈದ್ಯಕೀಯ ಸಂಶೋಧನಾ ಸಂಸ್ಥೆಗಳಲ್ಲಿ ಒಂದಾದ ಐಸಿಎಂಆರ್ (ICMR) ದೇಶದಲ್ಲಿ ಬಯೋಮೆಡಿಕಲ್ ಸಂಶೋಧನೆಯನ್ನು ಸಂಘಟಿಸಲು ಮತ್ತು ಉತ್ತೇಜಿಸಲು ಸಹಾಯ ಮಾಡುತ್ತದೆ. ಪ್ರಸ್ತುತ ಇದು ದೇಶಾದ್ಯಂತ COVID-19 ಪರೀಕ್ಷೆಗಳಿಗೆ ಪ್ರತಿದಿನವೂ ಸಹಾಯ ಮಾಡುತ್ತಿದೆ.
ಜುಲೈ 23ರವರೆಗೆ ಐಸಿಎಂಆರ್ ಕೋವಿಡ್ -19 (Covid 19) ಗಾಗಿ 1.54 ಕೋಟಿ ಮಾದರಿಗಳನ್ನು ಪರೀಕ್ಷಿಸಿದ್ದು, ಶುಕ್ರವಾರ ಒಂದೇ ದಿನ 3.52 ಲಕ್ಷ ಕೊರೋನಾ ಟೆಸ್ಟ್ ಮಾಡಲಾಗಿದೆ.
ಕೊರೋನಾ ವಿರುದ್ಧದ ಯುದ್ಧದಲ್ಲಿ ಭಾರತ ಗೆಲ್ಲಲಿದೆ: ವಿಶ್ವ ಆರೋಗ್ಯ ಸಂಸ್ಥೆ ವಿಶ್ವಾಸ
ಆರೋಗ್ಯ ಇಲಾಖೆಯ ಅಧಿಕೃತ ಮಾಹಿತಿಯ ಪ್ರಕಾರ, ದೇಶಾದ್ಯಂತ 12.87 ಲಕ್ಷ ಕರೋನವೈರಸ್ COVID-19 ಪ್ರಕರಣಗಳು ದೃಢಪಟ್ಟಿದೆ. ಆ ಪೈಕಿ 8.17 ಲಕ್ಷ ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದರೆ 30 ಸಾವಿರಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ.