ರಾಹುಲ್ ಗಾಂಧಿ ಸ್ಥಾನದಲ್ಲಿ ಕಾಂಗ್ರೆಸ್ ನಾಯಕತ್ವಕ್ಕೆ ಯುವ ನಾಯಕನನ್ನು ಹುಡುಕಿ-ಪಂಜಾಬ್ ಸಿಎಂ

ರಾಹುಲ್ ಗಾಂಧಿ ಅವರ ಸ್ಥಾನದಲ್ಲಿ ಯುವ ನಾಯಕನನ್ನು ಹುಡುಕುವಂತೆ ಪಕ್ಷದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಗೆ ಪಂಜಾಬ್ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಸಲಹೆ ನೀಡಿದ್ದಾರೆ,

Last Updated : Jul 6, 2019, 12:57 PM IST
ರಾಹುಲ್ ಗಾಂಧಿ ಸ್ಥಾನದಲ್ಲಿ ಕಾಂಗ್ರೆಸ್ ನಾಯಕತ್ವಕ್ಕೆ ಯುವ ನಾಯಕನನ್ನು ಹುಡುಕಿ-ಪಂಜಾಬ್ ಸಿಎಂ  title=

ನವದೆಹಲಿ: ರಾಹುಲ್ ಗಾಂಧಿ ಅವರ ಸ್ಥಾನದಲ್ಲಿ ಯುವ ನಾಯಕನನ್ನು ಹುಡುಕುವಂತೆ ಪಕ್ಷದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಗೆ ಪಂಜಾಬ್ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಸಲಹೆ ನೀಡಿದ್ದಾರೆ,

ರಾಹುಲ್ ಗಾಂಧಿ ರಾಜೀನಾಮೆ ನೀಡಿರುವುದರಿಂದ, ಈಗ ಪಕ್ಷವು ನೂತನ ನಾಯಕನ ಹುಡುಕಾಟದಲ್ಲಿದೆ ಈ ಹಿನ್ನಲೆಯಲ್ಲಿ ಈಗ ಪಂಜಾಬ್ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಹೇಳಿದ್ದಾರೆ. ಬುಧುವಾರದಂದು ರಾಹುಲ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಈ ಕುರಿತಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅಮರಿಂದರ್ ಸಿಂಗ್, ರಾಹುಲ್ ಗಾಂಧಿ ರಾಜೀನಾಮೆ ದುರದೃಷ್ಟಕರ ಎಂದು ಹೇಳುವ ಮೂಲಕ ತಮ್ಮ ನಿರಾಶೆ ವ್ಯಕ್ತಪಡಿಸಿದರು. ಈಗ ಪಕ್ಷವನ್ನು ಯುವ ನಾಯಕನ ಅಗತ್ಯವನ್ನು ಗಣನೆಗೆ ತೆಗೆದುಕೊಳ್ಳಬೇಕೆಂದು ಅವರು ಸಿಡಬ್ಲ್ಯೂಸಿಗೆ ಒತ್ತಾಯಿಸಿದರು.

"ರಾಹುಲ್ ಗಾಂಧಿ ಅವರ ದುರದೃಷ್ಟಕರ ನಿರ್ಧಾರದ ನಂತರ, ಪಕ್ಷವನ್ನು ಸಜ್ಜುಗೊಳಿಸಲು ಕಾಂಗ್ರೆಸ್ ಅಧ್ಯಕ್ಷರಾಗಿ ಮತ್ತೊಬ್ಬ ಕ್ರಿಯಾತ್ಮಕ ಯುವ ನಾಯಕನನ್ನು ಕಾಣುವ ಭರವಸೆ ಇದೆ. ಯುವಕರ ಆಕಾಂಕ್ಷೆಗಳಿಗೆ ಅನುಗುಣವಾಗಿ ಮತ್ತು ತಳಮಟ್ಟದೊಂದಿಗೆ ಸಂಪರ್ಕ ಹೊಂದಿರುವ ಯುವ ನಾಯಕನ ಅಗತ್ಯವನ್ನು ಸಿಡಬ್ಲ್ಯೂಸಿ ಗಮನಿಸಬೇಕು' ಎಂದು ಸಿಂಗ್ ಹೇಳಿದ್ದಾರೆ 

ಈಗ ನೂತನ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ಸುಶೀಲ್ ಕುಮಾರ್ ಶಿಂಧೆ ಮತ್ತು ಮಲ್ಲಿಕಾರ್ಜುನ್ ಖರ್ಗೆ ಅವರ ಹೆಸರುಗಳು ಚಾಲ್ತಿಯಲ್ಲಿವೆ ಎನ್ನಲಾಗಿದೆ. 

Trending News