Arvind Kejriwal: 'ದೆಹಲಿಯಲ್ಲಿ ಕೊರೋನಾ ರೋಗಿಗಳಿಗೆ 100 ಕ್ಕಿಂತ ಕಡಿಮೆ ICU ಬೆಡ್ '

ದೆಹಲಿಯಲ್ಲಿ ಪಾಸಿಟಿವ್ ಪ್ರಕರಣಗಳ ಪ್ರಮಾಣವು 25% ರಿಂದ 30% ಕ್ಕೆ ಏರಿದೆ ಎಂದ ಕೇಜ್ರಿವಾಲ್

Last Updated : Apr 18, 2021, 04:11 PM IST
  • ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್-19 ಸ್ಥಿತಿ ಬಹಳ ಆತಂಕಕಾರಿ ಏರಿಕೆ
  • ದೆಹಲಿಯಲ್ಲಿ ಪಾಸಿಟಿವ್ ಪ್ರಕರಣಗಳ ಪ್ರಮಾಣವು 25% ರಿಂದ 30% ಕ್ಕೆ ಏರಿದೆ ಎಂದ ಕೇಜ್ರಿವಾಲ್
  • ವರ್ಚುವಲ್ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಜ್ರಿವಾಲ್
Arvind Kejriwal: 'ದೆಹಲಿಯಲ್ಲಿ ಕೊರೋನಾ ರೋಗಿಗಳಿಗೆ 100 ಕ್ಕಿಂತ ಕಡಿಮೆ ICU ಬೆಡ್ ' title=

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿನ ಕೊರೋನಾ ರೋಗಿಗಳು ಆಸ್ಪತ್ರೆಗಳಲ್ಲಿ ಬೆಡ್ ಗಳಿಲ್ಲದೆ ಪರದಾಡುವ ಪರಿಸ್ಥಿತಿಯ ಬಗ್ಗೆ ಇಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

100 ಕ್ಕಿಂತ ಕಡಿಮೆ ತೀವ್ರ ನಿಗಾ ಘಟಕ (ICU) ಹಾಸಿಗೆಗಳು ಉಳಿದಿವೆ. ಆಸ್ಪತ್ರೆಗಲ್ಲಿ ಹಾಸಿಗೆಗಳ ಕೊರತೆ ಇದೆ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಇದನ್ನೂ ಓದಿ : "ಕೊರೊನಾ ವಿಚಾರದಲ್ಲಿ ಇತರ ದೇಶಗಳಿಂದ ಭಾರತ ಪಾಠ ಕಲಿತಿಲ್ಲ"

ವರ್ಚುವಲ್ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕೇಜ್ರಿವಾಲ್(Arvind Kejriwal), ಸಹಾಯಕ್ಕಾಗಿ ಕೇಂದ್ರಕ್ಕೆ ಮನವಿ ಮಾಡಿದ್ದೇನೆ ಎಂದು ಹೇಳಿದರು. ನಾವು ಕೇಂದ್ರದಿಂದ ಸಹಾಯವನ್ನು ಕೇಳುತ್ತಿದ್ದೇವೆ ಮತ್ತು ಇಲ್ಲಿಯವರೆಗೆ ಪಡೆದ ಸಹಾಯಕ್ಕಾಗಿ ಸರ್ಕಾರಕ್ಕೆ ಧನ್ಯವಾದಗಳು ಎಂದು ಹೇಳಿದ್ದಾರೆ.

ಇದನ್ನೂ ಓದಿ : JEE Main Exam 2021 ಸ್ಥಗಿತ, NTAನಿಂದ ಮಹತ್ವದ ನಿರ್ಧಾರ

ಇದಲ್ಲದೆ, ಅವರು ಇಂದು ಬೆಳಿಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah) ಅವರೊಂದಿಗೆ ಮಾತನಾಡಿ,  ದೆಹಲಿ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆಯ ಬಗ್ಗೆ ತಿಳಿಸಿದ್ದಾರೆ. "100 ಕ್ಕಿಂತ ಕಡಿಮೆ ಐಸಿಯು ಹಾಸಿಗೆಗಳು ಉಳಿದಿವೆ ಮತ್ತು ಆಮ್ಲಜನಕದ ಕೊರತೆಯಿದೆ. ಹಾಸಿಗೆಗಳ ಕೊರತೆಯ ಬಗ್ಗೆ ನಿನ್ನೆ ಡಾ.ಹರ್ಷ್ ವರ್ಧನ್ ಮತ್ತು ಅಮಿತ್ ಶಾ ಜಿ ಅವರಿಗೆ ತಿಳಿಸಿದ್ದೇನೆ. ನಮಗೆ ಅವುಗಳ ತೀವ್ರ ಅವಶ್ಯಕತೆಯಿದೆ ಎಂದು ಹೇಳಿದ್ದೇನೆ ಎಂದಿದ್ದಾರೆ.

ಇದನ್ನೂ ಓದಿ : ಕರೋನಾ ರಕ್ಕಸ ನರ್ತನ, ಒಂದೇ ದಿನ 2.60 ಲಕ್ಷ ಜನರಿಗೆ ಸೋಂಕು, ವೈರಸ್ ಮುಷ್ಟಿಯೊಳಗೆ ರಾಜ್ಯ

ಕೇಂದ್ರ ಸರ್ಕಾರದ ಅಧೀನದಲ್ಲಿರುವ ಆಸ್ಪತ್ರೆ(Hospital)ಗಳಲ್ಲಿ 10,000 ಹಾಸಿಗೆಗಳಲ್ಲಿ 1800 ಹಾಸಿಗೆಗಳನ್ನು ಮಾತ್ರ COVID-19 ರೋಗಿಗಳಿಗೆ ಕಾಯ್ದಿರಿಸಲಾಗಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ. "ಪರಿಸ್ಥಿತಿ ತುಂಬಾ ಗಂಭೀರವಾಗಿದೆ. ಕರೋನವೈರಸ್ ಸೋಂಕಿತ ರೋಗಿಗಳಿಗೆ ಕನಿಷ್ಠ 7000 ಹಾಸಿಗೆಗಳನ್ನು ಕಾಯ್ದಿರಿಸುವಂತೆ ನಾನು ಕೇಂದ್ರವನ್ನು ಕೋರಿದ್ದೇನೆ" ಎಂದು ಅವರು ಹೇಳಿದರು.

ಇದನ್ನೂ ಓದಿ : "ಕಳೆದ ವರ್ಷ ಒಟ್ಟಾಗಿ ಭಾರತವು ಕೋವಿಡ್ ನ್ನು ಸೋಲಿಸಿತ್ತು"

ಮುಂದಿನ ಎರಡು-ಮೂರು ದಿನಗಳಲ್ಲಿ ನಾವು ಆರು ಸಾವಿರಕ್ಕೂ ಹೆಚ್ಚು ICU ಬೆಡ್ ಗಳನ್ನ  ಸಿದ್ಧಪಡಿಸುತ್ತೇವೆ ಎಂದು ಕೇಜ್ರಿವಾಲ್ ಭರವಸೆ ನೀಡಿದರು. ಶಾಲೆ(School)ಗಳಲ್ಲದೆ, ಕಾಮನ್ವೆಲ್ತ್ ಗೇಮ್ಸ್ ವಿಲೇಜ್ ಮತ್ತು ಯಮುನಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ COVID-19 ರೋಗಿಗಳಿಗೆ ಕೋವಿಡ್ ಕೇರ್ ಗಳನ್ನು ತೆರೆಯಲಾಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ : "ರೈತರ ಜೊತೆಗೆ ಪ್ರಧಾನಿ ಮೋದಿ ಮಾತುಕತೆ ನಡೆಸಲಿ": ಹರಿಯಾಣ ಡಿಸಿಎಂ ಚೌತಾಲಾ

ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್-19 (COVID-19) ಸ್ಥಿತಿ ಬಹಳ ಆತಂಕಕಾರಿ ಏರಿಕೆಯ ಮಧ್ಯೆ, ದೆಹಲಿಯಲ್ಲಿ ಪಾಸಿಟಿವ್ ಪ್ರಕರಣಗಳ ಪ್ರಮಾಣವು 25% ರಿಂದ 30% ಕ್ಕೆ ಏರಿದೆ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News