ರಾಜಸ್ಥಾನ : ಗುಜ್ಜರ್ ಸೇರಿ ಐದು ಸಮುದಾಯಗಳಿಗೆ ಶೇ.1ರ ಮೀಸಲಾತಿಗೆ ಸರ್ಕಾರ ಅನುಮೋದನೆ

ಗುಜ್ಜರ್ ಸಮುದಾಯ ಸೇರಿದಂತೆ ಒಟ್ಟು 5 ಹಿಂದುಳಿದ ವರ್ಗಗಳಿಗೆ ರಾಜಸ್ಥಾನ ಸರ್ಕಾರ ಶೇ.1ರ ಮೀಸಲಾತಿ ನೀತಿಗೆ ಸೋಮವಾರ ಅನುಮೋದನೆ ನೀಡಿದೆ.

Last Updated : Jul 2, 2018, 08:31 PM IST
ರಾಜಸ್ಥಾನ : ಗುಜ್ಜರ್ ಸೇರಿ ಐದು ಸಮುದಾಯಗಳಿಗೆ ಶೇ.1ರ ಮೀಸಲಾತಿಗೆ ಸರ್ಕಾರ ಅನುಮೋದನೆ  title=

ಜೈಪುರ : ಗುಜ್ಜರ್ ಸಮುದಾಯ ಸೇರಿದಂತೆ ಒಟ್ಟು 5 ಹಿಂದುಳಿದ ವರ್ಗಗಳಿಗೆ ರಾಜಸ್ಥಾನ ಸರ್ಕಾರ ಶೇ.1ರ ಮೀಸಲಾತಿ ನೀತಿಗೆ ಸೋಮವಾರ ಅನುಮೋದನೆ ನೀಡಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಜುಲೈ 7ರಂದು ಜೈಪುರದಲ್ಲಿ ನಡೆಯಲಿರುವ ರ್ಯಾಲಿಯಲ್ಲಿ ಪಾಲ್ಗೊಳ್ಳುತ್ತಿದ್ದು, ಇದಕ್ಕೆ ಪೂರ್ವಭಾವಿಯಾಗಿ ರಾಜಸ್ತಾನ ಸರ್ಕಾರ ಮೀಸಲಾತಿಗೆ ಅನುಮೋದನೆ ನೀಡಿ ಆದೇಶ ಹೊರಡಿಸಿದೆ. ಈ ಹಿಂದೆ ಸರ್ಕಾರ ತಮಗೆ ಮಿಸಲಾತಿ ನೀಡದಿದ್ದರೆ ರ್ಯಾಲಿ ನಡೆಯುವ ಸ್ಥಳದಲ್ಲಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಗುಜ್ಜರ್ ಸಮುದಾಯದ ಮುಖಂಡರು ಎಚ್ಚರಿಕೆ ನೀಡಿದ್ದರು. ಈ ಬೆನ್ನಲ್ಲೇ ಸರ್ಕಾರ ಮೀಸಲಾತಿ ಆದೇಶ ಹೊರಡಿಸಿದೆ. 

ಈ ಅನುಮೋದನೆಯಿಂದಾಗಿ ಗೋದಿಯಾ ಲೋಹರ್‌, ಬಂಜಾರಾ, ಗುಜ್ಜರ್‌, ರೈಕಾ ಮತ್ತು ಗಡಾರಿಯಾ ಸಮುದಾಯಗಳು ರಾಜಸ್ಥಾನ ಸರ್ಕಾರದಿಂದ ಶೇ. 1ರ ಮೀಸಲಾತಿಯ ಲಾಭ ಪಡೆಯಲಿವೆ. 

ಶೇ.1ರ ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳ ದಾಖಲಾತಿಗೆ ಸಂಬಂಧಿಸಿದಂತೆ ಮತ್ತು ಸರ್ಕಾರಿ ಉದ್ಯೋಗಕ್ಕೆ ಸಂಬಂಧಿಸಿದಂತೆ ಸರ್ಕಾರ ಎರಡು ಪ್ರತ್ಯೇಕ ಆದೇಶಗಳನ್ನು ಹೊರಡಿಸಿದೆ. 

Trending News