Pran Pratishtha Fact: ಅಯೋಧ್ಯೆಯಲ್ಲಿ ನಡೆಯಲಿರುವ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಕಣ್ತುಂಬಿಕೊಳ್ಳಲು ದೇಶದ ಜನರೆಲ್ಲರೂ ಕಾತುರರಾಗಿದ್ದಾರೆ. ಈ ವೇಳೆ ರಾಮನ ಹೆಸರು ದೇಶದೆಲ್ಲೆಡೆ ಮೊಳಗುತ್ತಿದೆ. 500 ವರ್ಷಗಳ ನಂತರ ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಿಸಲಾದ ರಾಮಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯಾಗಲಿದೆ. ಜನವರಿ 22 ರಂದು ದೇವಾಲಯದಲ್ಲಿ ವಿಗ್ರಹವನ್ನು ಪೂಜಿಸುವ ಮೊದಲು ಪ್ರಾಣ ಪ್ರತಿಷ್ಠಾಪನೆ ಮಾಡುತ್ತಾರೆ. ಈ ಸಮಯದಲ್ಲಿ ವಿಗ್ರಹದ ಕಣ್ಣುಗಳಿಗೆ ಬಟ್ಟೆಯನ್ನು ಕಟ್ಟಲಾಗುತ್ತದೆ ಅಥವಾ ಪರದೆಯನ್ನು ಹಾಕಲಾಗುತ್ತದೆ. ಇದನ್ನು ಏಕೆ ಮಾಡಲಾಗುತ್ತದೆ ಎಂದು ನಿಮಗೆ ತಿಳಿದಿದೆಯೇ?
ಇದನ್ನೂ ಓದಿ: ಶ್ರೀರಾಮ 14 ವರ್ಷಗಳವರೆಗೆ ಈ ಹಣ್ಣು ಸೇವಿಸಿದ್ದನಂತೆ, ಲಾಭ ತಿಳಿದರೆ ನೀವೂ ಆಶ್ಚರ್ಯಚಕಿತರಾಗುವಿರಿ!
ಜನವರಿ 22 ರಂದು ಅಯೋಧ್ಯೆಯ ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ನಡೆಯಲಿದ್ದ ರಾಮನ ವಿಗ್ರಹದ ಕಣ್ಣುಗಳಿಗೆ ಬಟ್ಟೆಯನ್ನು ಕಟ್ಟಲಾಗಿದೆ. ವಿಗ್ರಹದ ಪ್ರತಿಷ್ಠಾಪನೆಯಲ್ಲಿ ಅನೇಕ ಆಚರಣೆಗಳು ಮತ್ತು ಸಂಪ್ರದಾಯಗಳನ್ನು ಅನುಸರಿಸಲಾಗುವುದು. ಪ್ರತಿಷ್ಠಾಪನೆ ಮತ್ತು ಪೂಜೆ ಮುಗಿದ ನಂತರ ಮೂರ್ತಿಯ ಕಣ್ಣುಗಳಿಗೆ ಕಟ್ಟಿದ ಬಟ್ಟೆಯನ್ನು ತೆಗೆಯಲಾಗುತ್ತದೆ. ನಂತರ ದೇವಾಲಯದಲ್ಲಿ ಪೂಜೆ ಪ್ರಾರಂಭವಾಗುತ್ತದೆ.
ಬಟ್ಟೆಗಳನ್ನು ಏಕೆ ಕಟ್ಟಲಾಗುತ್ತದೆ?
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರಾಣ ಪ್ರತಿಷ್ಠಾಪನೆಯ ಸಮಯದಲ್ಲಿ ಮೂರ್ತಿಯ ಕಣ್ಣುಗಳಿಗೆ ಬಟ್ಟೆ ಕಟ್ಟುವುದು ಬಹಳ ಮುಖ್ಯ. ಈ ಸಮಯದಲ್ಲಿ, ಪಂಡಿತರಿಂದ ಶಕ್ತಿಯುತ ಮಂತ್ರಗಳನ್ನು ಪಠಿಸಲಾಗುತ್ತದೆ. ಈ ವೇಳೆ ವಿಗ್ರಹಕ್ಕೆ ಒಂದು ಶಕ್ತಿ ಬರುತ್ತದೆ ಎಂಬ ನಂಬಿಕೆಯಿದೆ. ಆ ಸಮಯದಲ್ಲಿ ಕಣ್ಣುಗಳಿಂದ ತೀಕ್ಷಣ ಕಿರಣಗಳು ಹೊರ ಬರಬಹುದು, ಇದರಿಂದಾಗಿ ವಿಗ್ರಹದ ಕಣ್ಣುಗಳ ಮೇಲೆ ಬಟ್ಟೆಯನ್ನು ಕಟ್ಟಲಾಗುತ್ತದೆ.
ಕನ್ನಡಿ ಮುಂದೆ ಇಟ್ಟು ಬಟ್ಟೆ ತೆರೆಯಲಾಗುತ್ತದೆ
ಮೂರ್ತಿಯ ಪ್ರತಿಷ್ಠಾಪನೆಯ ಸಮಯದಲ್ಲಿ ಕಣ್ಣಿಗೆ ಬಟ್ಟೆಯನ್ನು ಕಟ್ಟುವ ಸಂಪ್ರದಾಯವಿದೆ. ಪ್ರತಿಷ್ಠಾಪನೆಯ ನಂತರ ಕನ್ನಡಿಯನ್ನು ಮುಂದೆ ಇಟ್ಟು ಬಟ್ಟೆ ತೆರೆಯಲಾಗುತ್ತದೆ. ಬಟ್ಟೆ ತೆರೆದ ನಂತರ, ವಿಗ್ರಹದ ಕಣ್ಣುಗಳಲ್ಲಿ ಅದೃಶ್ಯ ಬೆಳಕು ಅಥವಾ ಶಕ್ತಿಯು ಉತ್ಪತ್ತಿಯಾಗುತ್ತದೆ. ಅದು ಅತ್ಯಂತ ವೇಗದಲ್ಲಿ ಹೊರಬರುತ್ತದೆ. ಈ ವೇಳೆ ಯಾವುದೇ ವ್ಯಕ್ತಿ ಮುಂದೆ ಬಂದರೆ, ಅದು ಅವರಿಗೆ ಹಾನಿಕಾರಕವಾಗಿದೆ. ಆದ್ದರಿಂದ, ವಿಗ್ರಹದ ಕಣ್ಣುಗಳಿಂದ ಬಟ್ಟೆಯನ್ನು ತೆರೆದಾಗ, ಕನ್ನಡಿಯನ್ನು ಮುಂಭಾಗದಲ್ಲಿ ಇರಿಸಲಾಗುತ್ತದೆ. ಅಷ್ಟೇ ಅಲ್ಲ ಕೆಲವೊಮ್ಮೆ ಗಾಜು ಕೂಡ ಒಡೆದು ಹೋಗುತ್ತದೆ. ಗಾಜು ಒಡೆಯುವುದನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ.
ಇದನ್ನೂ ಓದಿ: ಶ್ರೀರಾಮ ಪ್ರಾಣ ಪ್ರತಿಷ್ಠೆ ನೇರ ಪ್ರಸಾರ ನಿಷೇಧಿಸಿದ ತಮಿಳುನಾಡು ಸರ್ಕಾರ..!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.