ಮಹಾಮಾರಿ ಕೊರೊನಾ ವೈರಸ್ ವಿರುದ್ಧ ಹೋರಾಡಲು ದೇಶದ ಆರ್ಥಿಕತೆಯನ್ನು ಸತತವಾಗಿ ಗಟ್ಟಿಗೊಳಿಸಲು ಪ್ರಯತ್ನಗಳು ಮುಂದುವರೆದಿವೆ. ದೇಶಾದ್ಯಂತ ಲಾಕ್ ಡೌನ್ ಮುಂದುವರೆದಂತೆ ನೀರಿಕ್ಷೆಯಂತೆ ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರದಲ್ಲಿ ಇಳಿಕೆ ಮಾಡಿದೆ. RBI ನ ಇತಿಹಾಸದಲ್ಲಿ ಇದೆ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದ ರೆಪೋ ದರ ಇಳಿಕೆ ಮಾಡಲಾಗಿದೆ. ಕೊರೊನಾ ವೈರಸ್ ನಿಂದ ಸೊರಗುತ್ತಿರುವ ಆರ್ಥಿಕತೆಗೆ ಒತ್ತು ನೀಡುವ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರದಲ್ಲಿ ಶೇ.೦.75 ರಷ್ಟು ಕಡಿತ ಮಾಡಿದೆ. ಈ ಕಡಿತದ ಬಳಿಕ ರೆಪೋ ರೇಟ್ ಗಳು ಶೇ.5.15 ರಿಂದ ಇಳಿದು 4.40ಕ್ಕೆ ಬಂದು ಬಳುಪಿದೆ. ರೆಪೋ ರೇಟ್ ನ ಈ ಇಳಿಕೆ RBIನ ಇತಿಹಾಸದಲ್ಲಿಯೇ ಅತಿ ದೊಡ್ಡ ಪ್ರಮಾಣದ ಇಳಿಕೆ ಎಂದು ವಿಶ್ಲೇಷಿಸಲಾಗುತ್ತಿದೆ.
ರಿವರ್ಸ್ ರೆಪೋ ದರದಲ್ಲಿ 90 ಬೇಸಿಸ್ ಅಂಕಗಳ ಕಡಿತ
ಇನ್ನೊಂದೆಡೆ ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ರಿವರ್ಸ್ ರೆಪೋ ದರದಲ್ಲಿಯೂ ಕೂಡ 90 ಬೇಸಿಸ್ ಅಂಕಗಳ ಕಡಿತಗೊಳಿಸಿ ಶೇ.4ಕ್ಕೆ ನಿಗದಿಪಡಿಸಿದೆ. ಕಳೆದ ಎರಡು ಆರ್ಥಿಕ ಸಮೀಕ್ಷಾ ಸಭೆಗಳಲ್ಲಿ RBI ರೆಪೋ ರೇಟ್ ಗಳ ಕುರಿತು ಯಾವುದೇ ನಿರ್ಣಯ ಕೈಗೊಂಡಿರಲಿಲ್ಲ. ಸದ್ಯ ಈ ರೆಪೋ ರೇಟ್ ಇಳಿಕೆಯ ಲಾಭ ಹೋಂ, ಕಾರ್ ಹಾಗೂ ಇತರೆ ರೀತಿಯ ಸಾಲಗಳು ಸೇರಿದಂತೆ EMI ಭರಿಸುವ ಕೋಟ್ಯಂತರ ಜನರಿಗೆ ಸಿಗುವ ನಿರೀಕ್ಷೆ ಇದೆ.
ಬ್ಯಾಂಕ್ ಗಳಿಗೆ ಸಿಕ್ತು ದೊಡ್ಡ ನೆಮ್ಮದಿ
RBI ಗವರ್ನರ್ ಶಕ್ತಿಕಾಂತ್ ದಾಸ್ ಪ್ರಕಾರ ಕೊರೊನಾ ವೈರಸ್ ನ ಕಾರಣ ಹಣದ ಹರಿವಿನಲ್ಲಿ ಹಿನ್ನೆಡೆ ಉಂಟಾಗಿದೆ ಎಂದಿದ್ದಾರೆ. ಕ್ಯಾಶ್ ರೀಜರ್ವ್ ರೆಶ್ಯೋ (CRR)ನಲ್ಲಿ 100 ಬೇಸಿಸ್ ಪಾಯಿಂಟ್ ನಷ್ಟು ಕಡಿತಗೊಳಿಸಿ ಶೇ.3 ಕ್ಕೆ ನಿಗದಿಪಡಿಸಲಾಗಿದೆ. ಮುಂದಿನ ಒಂದು ವರ್ಷಗಳ ಅವಧಿಕೆ ಈ ಇಳಿಕೆಯನ್ನು ಮಾಡಲಾಗಿದೆ. ಅಷ್ಟೇ ಅಲ್ಲ ಎಲ್ಲ ಕಮರ್ಷಿಯಲ್ ಬ್ಯಾಂಕ್ ಗಳ ಸಲ ಹಾಗೂ ಬಡ್ಡಿ ಮರುಪಾವತಿಸಲು 3 ತಿಂಗಳ ಕಾಲಾವಕಾಶ ನೀಡಲಾಗಿದೆ ಎಂದು RBI ಗವರ್ನರ್ ಹೇಳಿದ್ದಾರೆ. RBIನ ಈ ನಿರ್ಣಯದಿಂದ 3.74 ಕೋರಿ ರೂ. ನಗದು ಹಣ ವ್ಯವಸ್ಥೆಯಲ್ಲಿ ಬರಲಿದೆ ಎನ್ನಲಾಗಿದೆ.
ನಿರ್ಧಾರಿತ ಅವಧಿಗೂ ಮುನ್ನವೇ ನಡೆದಿದೆ RBI ನ ಮಾನಿಟರಿ ಪಾಲಸಿ ಸಭೆ
ಈ ಕುರಿತು ಹೇಳಿಕೆ ನೀಡಿರುವ RBI ಗವರ್ನರ್ ಶಕ್ತಿಕಾಂತ್ ದಾಸ್, ಆರ್ಥಿಕ ಸ್ಥಿರತೆಯ ಹಿನ್ನೆಲೆ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದಿದ್ದಾರೆ. COVID-19 ಭೀತಿಯ ಹಿನ್ನೆಲೆ RBIನ ಈ ಮಾನಿಟರಿ ಪಾಲಸಿ ಸಮಿತಿ ಸಭೆ ನಿಗದಿತ ಅವಧಿಗೂ ಮುನ್ನವೇ ನಡೆಸಲಾಗಿದೆ ಎಂದಿದ್ದಾರೆ. ಇದಕ್ಕೂ ಮೊದಲು ಮಾರ್ಚ್ 31 ರಿಂದ ಏಪ್ರಿಲ್ 3 ರವರೆಗೆ ನಡೆಯಬೇಕಿದ್ದ ಈ ಸಭೆಯನ್ನು ನಿರ್ಧರಿಸಲಾಗಿತ್ತು. ಮಾರ್ಚ್ 24, 26 ಹಾಗೂ 27ಕ್ಕೆ ನಡೆಸಲಾಗಿದೆ. ಈ ಸಭೆಯಲ್ಲಿ ಮನಿತರಿ ಪಾಲಸಿ ಸಮೀತಿಯ ಒಟ್ಟು 6 ಸದಸ್ಯರ ಪೈಕಿ ನಾಲ್ವರು ಸದಸ್ಯರು ಬಡ್ಡಿದರ ಕಡಿತದ ಪರ ತಮ್ಮ ಮತ ಚಲಾಯಿಸಿದ್ದಾರೆ ಎನ್ನಲಾಗಿದೆ.
ಗವರ್ನರ್ PC ಹೈಲೈಟ್ಸ್
ಆರ್ಥಿಕ ವೇದಿಕೆಯ ಮೇಲೆ ಸದ್ಯದ ಸ್ಥಿತಿಯಲ್ಲಿ ಬಲವಾದ ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ.
ಫೈನಾನ್ಸಿಯಲ್ ಮಾರ್ಕೆಟ್ ಮೇಲೆ ಸದ್ಯ ಭಾರಿ ಒತ್ತಡವಿದೆ.
ಲಾಕ್ ಡೌನ್ ಬಳಿಕ GDP ಕುಸಿತವನ್ನು ನಿರೀಕ್ಷಿಸಲಾಗುತ್ತಿದೆ.
ದೇಶೀಯ ಆರ್ಥವ್ಯವಸ್ಥೆಯನ್ನು ರಕ್ಷಿಸಲು ಎಲ್ಲ ಆವಶ್ಯಕ ಕ್ರಮಗಳನ್ನು ಕೈಗೊಳ್ಳಲಾಗುವುದು.
ಕಳೆದ MPC ಸಭೆಯಿಂದ ಇಲ್ಲಿಯವರೆಗೆ ಮಾರುಕಟ್ಟೆಯಲ್ಲಿ ರೂ.2.8 ಲಕ್ಷ ಕೋಟಿಗಳಷ್ಟು ಲಿಕ್ವಿಡಿಟಿ ತುಂಬಲಾಗಿದೆ.
2008 ರ ಹೋಲಿಕೆಯಲ್ಲಿ ಭಾರತೀಯ ಮೈಕ್ರೋ ಎಕಾನಾಮಿ ತುಂಬಾ ಬಲಿಷ್ಟವಾಗಿದೆ.
ಬ್ಯಾಂಕ್, NBF ಗಳಿಗೆ ಟರ್ಮ್ ಸಾಲ ಮರುಪಾವತಿಸಲು 3 ತಿಂಗಳ ಹೆಚ್ಚುವರಿ ಅವಧಿ ನೀಡಲಾಗುವುದು.
ವರ್ಕಿಂಗ್ ಕ್ಯಾಪಿಟಲ್ ಮೇಲೆ ಬಡ್ಡಿ ಪಾವತಿಯನ್ನು ಸದ್ಯಕ್ಕೆ ಮುಂದೂಡಲಾಗಿದೆ.
ಬ್ಯಾಂಕ್ ನಲ್ಲಿ ಹೂಡಿಕೆದಾರರ ಹಣ ಸುರಕ್ಷಿತವಾಗಿದೆ.
ಗ್ರಾಹಕರು ಬ್ಯಾಂಕ್ ಗಳಿಂದ ತಮ್ಮ ಡಿಪಾಸಿಟ್ ಮರುಪಡೆಯಲು ಅವಸರ ಮಾಡಬಾರದು
ಗ್ರಾಹಕರು ಆದಷ್ಟು ಡಿಜಿಟಲ್ ಪೇಮೆಂಟ್ ವ್ಯವಸ್ಥೆಯ ಲಾಭ ಪಡೆಯಬೇಕು
ಮಾರ್ಜಿನ್ ಸ್ಟ್ಯಾಂಡಿಂಗ್ ಫೆಸಿಲಿಟಿ ಕ್ಯಾಪ್ ಅನ್ನು ಶೇ.2 ರಿಂದ ಹೆಚ್ಚಿಸಿ ಶೇ.3ಕ್ಕೆ ತಂದಿಡಲಾಗಿದೆ.
EMI ಮರುಪಾವತಿಸಲು ಸಿಗಲಿದೆ ಸಮಯಾವಕಾಶ
EMI ಮರುಪಾವತಿಸಲು ಮೂರು ತಿಂಗಳ ಕಾಲಾವಕಾಶ ನೀಡಬೇಕು ಎಂದು RBI ಎಲ್ಲ ಬ್ಯಾಂಕ್ ಗಳಿಗೆ ಮನವಿ ಮಾಡಿದೆ. ಆದರೆ, ಇಡಿ ಕೇವಲ ಸಲಹೆಯಾಗಿದ್ದು, ಆದೇಶವಲ್ಲ ಎಂದು ಕೇಂದ್ರೀಯ ಬ್ಯಾಂಕ್ ಸ್ಪಷ್ಟಪಡಿಸಿದೆ. ಅಂದರೆ, EMI ಮರುಪಾವತಿಗೆ ಕಾಲಾವಕಾಶ ನೀಡಬೇಕೆ ಅಥವಾ ಬೇಡವೇ ಎಂಬುದನ್ನು ಇದೀಗ ಬ್ಯಾಂಕ್ ಗಳು ನಿರ್ಧರಿಸಲಿವೆ. ಅಷ್ಟೇ ಅಲ್ಲ ಯಾವ ಲೋನ್ ಮೇಲೆ EMI ಸಡಿಲಿಕೆ ನೀಡಲಿವೆ ಎಂಬುದನ್ನೂ ಸಹ ಬ್ಯಾಂಕ್ ಗಗಳೇ ನಿರ್ಧರಿಸಲಿವೆ. ಅಂದರೆ, ರಿಟೇಲ್, ಕಮರ್ಷಿಯಲ್ ಅಥವಾ ಇತರೆ ಯಾವುದೇ ರೀತಿಯ ಲೋನ್ ಪಡೆದ ಜನರಲ್ಲಿ ಇದೀಗ ಕನ್ಫ್ಯೂಶನ್ ಮುಂದುವರೆಯಲಿದೆ. ಆದರೆ, RBI ಕೈಗೊಂಡ ರೆಪೋ ರೇಟ್ ನಿರ್ಣಯ ಮಾತ್ರ ಐತಿಹಾಸಿಕ ಎಂದು ಮಾತ್ರ ಹೇಳಬಹುದು,