UPI ಬಳಕೆದಾರರಿಗೆ RBI ಗವರ್ನರ್ ಕೊಟ್ರು ಗುಡ್ ನ್ಯೂಸ್: ಏನದು ಗೊತ್ತಾ?

Single Block and Multiple Debits: ವಿತ್ತೀಯ ನೀತಿ ಪರಾಮರ್ಶೆ (ಎಂಪಿಸಿ) ಕುರಿತು ಮಾಹಿತಿ ನೀಡಿದ ಅವರು, ಹೊಸ ಸೌಲಭ್ಯದ ಅಡಿಯಲ್ಲಿ ನೀವು ಶೀಘ್ರದಲ್ಲೇ ನಿಮ್ಮ ಖಾತೆಯಲ್ಲಿ ಪಾವತಿಗಳನ್ನು 'ಬ್ಲಾಕ್' ಮಾಡಲು ಮತ್ತು ಹೋಟೆಲ್ ಬುಕಿಂಗ್, ಬಂಡವಾಳ ಮಾರುಕಟ್ಟೆಯಲ್ಲಿ ಷೇರುಗಳ ಖರೀದಿ ಮತ್ತು ಮಾರಾಟದಂತಹ ವಹಿವಾಟುಗಳಿಗೆ UPI ಮೂಲಕ ಪಾವತಿಗಳನ್ನು ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ. ಜೊತೆಗೆ ಇ-ಕಾಮರ್ಸ್ ಮತ್ತು ಹೂಡಿಕೆಗಾಗಿ ಪಾವತಿಗಳನ್ನು ಸುಲಭವಾಗಿ ಮಾಡಲಾಗುತ್ತದೆ.

Written by - Bhavishya Shetty | Last Updated : Dec 7, 2022, 04:35 PM IST
    • ಯುಪಿಐ ಬಳಕೆದಾರರಿಗೆ ಗುಡ್ ನ್ಯೂಸ್ ಇದೆ
    • ವಹಿವಾಟುಗಳಿಗೆ UPI ಮೂಲಕ ಪಾವತಿಗಳನ್ನು ಮಾಡಲು ಸಾಧ್ಯವಾಗುತ್ತದೆ
    • ಯುಪಿಐನಲ್ಲಿ ಪಾವತಿಗಳನ್ನು ನಿರ್ಬಂಧಿಸುವ ಸೇವೆಯನ್ನು ಘೋಷಿಸಿದೆ
UPI ಬಳಕೆದಾರರಿಗೆ RBI ಗವರ್ನರ್ ಕೊಟ್ರು ಗುಡ್ ನ್ಯೂಸ್: ಏನದು ಗೊತ್ತಾ? title=
RBI

Single Block and Multiple Debits: ಇಂದಿನ ಕಾಲಮಾನದಲ್ಲಿ ಎಲ್ಲಿಯಾದರೂ ಪಾವತಿ ಮಾಡಬೇಕೆಂದರೆ ನಾವು ಫೋನ್ ಪೇ, ಗೂಗಲ್ ಪೇ ನಂತಹ ಅಪ್ಲಿಕೇಶನ್ ಗಳನ್ನು ಬಳಕೆ ಮಾಡುತ್ತೇವೆ. ಅದರ ಜೊತೆಗೆ ಯುನಿಫೈಡ್ ಪೇಮೆಂಟ್ ಇಂಟರ್ಫೇಸ್  ಅಂದರೆ UPI ಅನ್ನು ಸಹ ಬಳಸುತ್ತೇವೆ. ಇದು ನೀವು ಕೂಡ ಯುಪಿಐ ಬಳಕೆದಾರರಾಗಿದ್ದರೆ, ಈ ಸುದ್ದಿ ನಿಮಗೆ ಸಂತೋಷವನ್ನು ನೀಡುತ್ತದೆ. ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಯುಪಿಐ ಬಳಕೆದಾರರಿಗೆ ಗುಡ್ ನ್ಯೂಸ್ ನೀಡಿದ್ದಾರೆ.

ಇದನ್ನೂ ಓದಿ: Free Ration: ಪಡಿತರ ಚೀಟಿದಾರರಿಗೆ ಇನ್ಮುಂದೆ ಉಚಿತವಾಗಿ ಸಿಗುತ್ತೆ 150 ಕೆಜಿ ಅಕ್ಕಿ: ಸರ್ಕಾರದಿಂದ ಮಹತ್ವದ ಘೋಷಣೆ

ವಿತ್ತೀಯ ನೀತಿ ಪರಾಮರ್ಶೆ (ಎಂಪಿಸಿ) ಕುರಿತು ಮಾಹಿತಿ ನೀಡಿದ ಅವರು, ಹೊಸ ಸೌಲಭ್ಯದ ಅಡಿಯಲ್ಲಿ ನೀವು ಶೀಘ್ರದಲ್ಲೇ ನಿಮ್ಮ ಖಾತೆಯಲ್ಲಿ ಪಾವತಿಗಳನ್ನು 'ಬ್ಲಾಕ್' ಮಾಡಲು ಮತ್ತು ಹೋಟೆಲ್ ಬುಕಿಂಗ್, ಬಂಡವಾಳ ಮಾರುಕಟ್ಟೆಯಲ್ಲಿ ಷೇರುಗಳ ಖರೀದಿ ಮತ್ತು ಮಾರಾಟದಂತಹ ವಹಿವಾಟುಗಳಿಗೆ UPI ಮೂಲಕ ಪಾವತಿಗಳನ್ನು ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ. ಜೊತೆಗೆ ಇ-ಕಾಮರ್ಸ್ ಮತ್ತು ಹೂಡಿಕೆಗಾಗಿ ಪಾವತಿಗಳನ್ನು ಸುಲಭವಾಗಿ ಮಾಡಲಾಗುತ್ತದೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಯುಪಿಐನಲ್ಲಿ ಪಾವತಿಗಳನ್ನು ನಿರ್ಬಂಧಿಸುವ ಸೇವೆಯನ್ನು ಘೋಷಿಸಿದೆ. ಅವುಗಳನ್ನು ವಿವಿಧ ಉದ್ದೇಶಗಳಿಗಾಗಿ (ಸಿಂಗಲ್ ಬ್ಲಾಕ್ ಮತ್ತು ಮಲ್ಟಿಪಲ್ ಡೆಬಿಟ್‌ಗಳು) ಕಡಿತಗೊಳಿಸುತ್ತದೆ. ಅಗತ್ಯವಿರುವಾಗ ಹಣವನ್ನು ಕಡಿತಗೊಳಿಸಲು ನೀವು ಬ್ಯಾಂಕ್ ಖಾತೆಗಳಲ್ಲಿ ಹಣವನ್ನು ನಿಗದಿಪಡಿಸುವ ಮೂಲಕ ಇಲ್ಲಿಯೂ ಸಹ ಪಾವತಿಗಳನ್ನು ನಿಗದಿಪಡಿಸಬಹುದು. ಆರ್‌ಬಿಐ ಪ್ರಕಾರ, ಈ ವ್ಯವಸ್ಥೆಯಿಂದ ಇ-ಕಾಮರ್ಸ್ ಮತ್ತು ಇತರ ಹೂಡಿಕೆಗಳಿಗೆ ಪಾವತಿ ಸುಲಭವಾಗುತ್ತದೆ.

ಯುಪಿಐ ಮಿತಿಯನ್ನು ಹೆಚ್ಚಿಸುವ ಮೂಲಕ ವಿವಿಧ ಸೇವೆಗಳಿಗೆ ಪಾವತಿ ಮಾಡಲು ಗ್ರಾಹಕರ ಖಾತೆಯಲ್ಲಿ ಪಾವತಿಯನ್ನು 'ಬ್ಲಾಕ್' ಮಾಡಲು ನಿರ್ಧರಿಸಲಾಗಿದೆ ಎಂದು ಆರ್‌ಬಿಐ ಗವರ್ನರ್ ಹೇಳಿದ್ದಾರೆ. ಹೋಟೆಲ್ ಬುಕಿಂಗ್ ಇತ್ಯಾದಿಗಳಿಗಾಗಿ ನೀವು ಈ ಸೇವೆಯನ್ನು ಬಳಸಬಹುದು. ಈ ಹಿಂದೆ, ಆರ್‌ಬಿಐನಿಂದ ಹಣಕಾಸು ಪರಾಮರ್ಶೆ ನೀತಿ (ಎಂಪಿಸಿ) ಪ್ರಕಟಿಸುವಾಗ, ರೆಪೊ ದರದಲ್ಲಿ 35 ಬೇಸಿಸ್ ಪಾಯಿಂಟ್‌ಗಳ ಹೆಚ್ಚಳವನ್ನು ಘೋಷಿಸಲಾಯಿತು.

ಇದನ್ನೂ ಓದಿ: Bharat Jodo Yatra : ಬಿಜೆಪಿ ನಾಯಕರಿಗೆ ಫ್ಲೈಯಿಂಗ್ ಕಿಸ್ ನೀಡಿದ ರಾಹುಲ್ ಗಾಂಧಿ

ಸತತ ಐದನೇ ಬಾರಿಗೆ ರೆಪೊ ದರ ಹೆಚ್ಚಳದೊಂದಿಗೆ ಶೇ.6.25ಕ್ಕೆ ತಲುಪಿದೆ. ಮೇ ತಿಂಗಳ ನಂತರ ಇದು ಐದನೇ ಬಾರಿಗೆ ರೆಪೋ ದರದಲ್ಲಿ ಏರಿಳಿತ ಕಂಡಿದೆ. ಇದರೊಂದಿಗೆ ಮುಂದಿನ ದಿನಗಳಲ್ಲಿ ಹಣದುಬ್ಬರ ದರ ಇಳಿಕೆಯಾಗುವ ಭರವಸೆಯನ್ನು ಆರ್‌ಬಿಐ ವ್ಯಕ್ತಪಡಿಸಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News