ಸುಧಾರಣೆ, ಕಾರ್ಯಕ್ಷಮತೆ, ಪರಿವರ್ತನೆ ; ಪ್ಯಾರಿಸ್ ನಲ್ಲಿ ಮೋದಿ ತ್ರಿವಳಿ ಸೂತ್ರ

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮೂರು ರಾಷ್ಟ್ರಗಳ ಮೊದಲ ಹಂತದ ಪ್ರವಾಸದಲ್ಲಿ ಶುಕ್ರವಾರದಂದು ಫ್ರಾನ್ಸ್‌ನಲ್ಲಿರುವ ಭಾರತೀಯ ವಲಸೆಗಾರರನ್ನು ಉದ್ದೇಶಿಸಿ ಮಾತನಾಡಿದರು. ಫ್ರೆಂಚ್ ಆಲ್ಪ್ಸ್ ಬಳಿಯ ಸೇಂಟ್ ಗೆರ್ವೈಸ್‌ನಲ್ಲಿ ಎರಡು ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾದವರ ಸ್ಮಾರಕವನ್ನು ಅವರು ಅನಾವರಣಗೊಳಿಸಿದರು.

Last Updated : Aug 23, 2019, 03:56 PM IST
ಸುಧಾರಣೆ, ಕಾರ್ಯಕ್ಷಮತೆ, ಪರಿವರ್ತನೆ ; ಪ್ಯಾರಿಸ್ ನಲ್ಲಿ ಮೋದಿ ತ್ರಿವಳಿ ಸೂತ್ರ   title=
ANI PHOTO

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮೂರು ರಾಷ್ಟ್ರಗಳ ಮೊದಲ ಹಂತದ ಪ್ರವಾಸದಲ್ಲಿ ಶುಕ್ರವಾರದಂದು ಫ್ರಾನ್ಸ್‌ನಲ್ಲಿರುವ ಭಾರತೀಯ ವಲಸೆಗಾರರನ್ನು ಉದ್ದೇಶಿಸಿ ಮಾತನಾಡಿದರು. ಫ್ರೆಂಚ್ ಆಲ್ಪ್ಸ್ ಬಳಿಯ ಸೇಂಟ್ ಗೆರ್ವೈಸ್‌ನಲ್ಲಿ ಎರಡು ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾದವರ ಸ್ಮಾರಕವನ್ನು ಅವರು ಅನಾವರಣಗೊಳಿಸಿದರು.

ಪ್ರೇಕ್ಷಕರನ್ನುದ್ದೇಶಿಸಿ ಮಾತನಾಡಿದ ಮೋದಿ, 'ಎರಡು ಅಪಘಾತಗಳಲ್ಲಿ ಪ್ರಾಣ ಕಳೆದುಕೊಂಡ ಮಹಾನ್ ಭಾರತೀಯ ಪರಮಾಣು ಭೌತಶಾಸ್ತ್ರಜ್ಞ ಹೋಮಿ ಭಾಬಾ ಸೇರಿದಂತೆ ಎಲ್ಲರಿಗೂ ನಾನು ವಂದಿಸುತ್ತೇನೆ(ಏರ್ ಇಂಡಿಯಾ ವಿಮಾನ ಅಪಘಾತಗಳು, 1950 ಮತ್ತು 1966 ರಲ್ಲಿ ಫ್ರಾನ್ಸ್‌ನ ಸೇಂಟ್ ಗೆರ್ವೈಸ್‌ನಲ್ಲಿ).ಭಾರತವು ಈಗ ಮುಂದೆ ಸಾಗುತ್ತಿದೆ ಮತ್ತು ನಮಗೆ ದೊರೆತ ಆದೇಶವು ಕೇವಲ ಸರ್ಕಾರವನ್ನು ನಡೆಸುವುದಕ್ಕಾಗಿ ಅಲ್ಲ, ಆದರೆ ಹೊಸ ಭಾರತವನ್ನು ನಿರ್ಮಿಸುವುದಕ್ಕಾಗಿ ಎಂದು ಅವರು ಹೇಳಿದರು.

ತಾವು ಫುಟ್ಬಾಲ್ ಪ್ರಿಯರ ರಾಷ್ಟ್ರಕ್ಕೆ ಬಂದಿರುವುದಾಗಿ ಹೇಳಿದ ಅವರು 'ಗೋಲ್ ನ ಮಹತ್ವದ ಗುರಿತಾಗಿ ಹೇಳುತ್ತಾ ಅದು ಅಂತಿಮ ಸಾಧನೆ ಎಂದರು. ಕಳೆದ 5 ವರ್ಷಗಳಲ್ಲಿ ನಾವು ಈ ಹಿಂದೆ ಈಡೇರಿಸುವುದು ಅಸಾಧ್ಯವೆಂದು ಪರಿಗಣಿಸಲಾಗಿದ್ದ ಗುರಿಗಳನ್ನು ಹೊಂದಿದ್ದೇವೆ ಎಂದು ಹೇಳಿದರು. ಭ್ರಷ್ಟಾಚಾರದ ವಿರುದ್ಧದ ಹೋರಾಟದ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ “ಹೊಸ ಭಾರತದಲ್ಲಿ, ಭ್ರಷ್ಟಾಚಾರ, ವಂಶ ರಾಜಕೀಯ, ಜನರ ಹಣದ ಲೂಟಿ, ಭಯೋತ್ಪಾದನೆ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ, ಇದು ಹಿಂದೆಂದೂ ಸಂಭವಿಸಿಲ್ಲ. ಹೊಸ ಸರ್ಕಾರ ಅಧಿಕಾರಕ್ಕೆ ಬಂದ 75 ದಿನಗಳಲ್ಲಿ ನಾವು ಅನೇಕ ಧೃಡ ನಿರ್ಧಾರಗಳನ್ನು ತೆಗೆದುಕೊಂಡಿದ್ದೇವೆ ”ಎಂದು ಅವರು ಹೇಳಿದರು.

ಗಣೇಶ ಮಹೋತ್ಸವ ಪ್ಯಾರಿಸ್‌ನ ಸಾಂಸ್ಕೃತಿಕ ಕ್ಯಾಲೆಂಡರ್‌ನ ಒಂದು ಪ್ರಮುಖ ಭಾಗವಾಗಿದೆ ಎಂದು ನನಗೆ ತಿಳಿಸಲಾಯಿತು. ಈ ದಿನ ಪ್ಯಾರಿಸ್ ಮಿನಿ ಇಂಡಿಯಾದಂತೆ ಕಾಣುತ್ತದೆ, ಇದರರ್ಥ ಕೆಲವು ದಿನಗಳಲ್ಲಿ ನಾವು ಇಲ್ಲಿ 'ಗಣಪತಿ ಬಪ್ಪಾ ಮೋರಿಯಾ' ಮಂತ್ರಗಳನ್ನು ಕೇಳಲಿದ್ದೇವೆ ಎಂದು ಹೇಳಿದರು. 

 

Trending News