ನಿವೃತ್ತ ಜಡ್ಜ್ ನೇತೃತ್ವದ ಸಮಿತಿಯಿಂದ ಅಲೋಕ್ ವರ್ಮಾ, ರಾಕೇಶ್ ಅಸ್ತನಾರ ತನಿಖೆ- ರಂಜನ್ ಗೊಗೊಯ್

ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಮತ್ತು ವಿಶೇಷ ನಿರ್ದೇಶಕ ರಾಕೇಶ್ ಅಸ್ತಣ ವಿರುದ್ಧ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಎ.ಕೆ ಪಟ್ನಾಯಕ್ ಅವರು ತನಿಖೆ ನಡೆಸಲಿದ್ದಾರೆ ಎಂದು ಮುಖ್ಯ ನ್ಯಾಯಮೂರ್ತಿ  ರಂಜನ್ ಗೊಗೊಯ್ ತಿಳಿಸಿದ್ದಾರೆ. 

Last Updated : Oct 26, 2018, 12:43 PM IST
ನಿವೃತ್ತ ಜಡ್ಜ್ ನೇತೃತ್ವದ ಸಮಿತಿಯಿಂದ ಅಲೋಕ್ ವರ್ಮಾ, ರಾಕೇಶ್ ಅಸ್ತನಾರ ತನಿಖೆ- ರಂಜನ್ ಗೊಗೊಯ್ title=

ನವದೆಹಲಿ: ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಮತ್ತು ವಿಶೇಷ ನಿರ್ದೇಶಕ ರಾಕೇಶ್ ಅಸ್ತಣ ವಿರುದ್ಧ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎ.ಕೆ ಪಟ್ನಾಯಕ್ ಅವರು ತನಿಖೆ ನಡೆಸಲಿದ್ದಾರೆ ಎಂದು ಸುಪ್ರಿಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ತಿಳಿಸಿದ್ದಾರೆ. 

ಸರ್ಕಾರದಿಂದ ರಜೆಗೆ ಕಳಿಸಲ್ಪಟ್ಟಿದ್ದಾರೆ ಎನ್ನಲಾದ ಈ ಇಬ್ಬರು ಅಧಿಕಾರಿಗಳ ಮೇಲಿನ ಆರೋಪ ಪ್ರತ್ಯಾರೋಪಗಳ ವಿಚಾರವಾಗಿ ವಿಚಾರಣೆಯನ್ನು ನಡೆಸಲಾಗುವುದು ಮತ್ತು  ಈ ತನಿಖೆ ಎರಡು ವಾರದಲ್ಲಿ ಮುಕ್ತಾಯಗೊಳ್ಳಲಿದೆ ಎಂದು ಮುಖ್ಯ ನ್ಯಾಯಮೂರ್ತಿ ಗೊಗೊಯ್ ತಿಳಿಸಿದರು.

ವರ್ಮಾ ಅವರ ವಕೀಲ ಫಾಲಿ ನಾರಿರಿಮನ್ ವಾದ ಮಂಡಿಸಿದ ಪ್ರಕಾರ, ಸಿವಿಸಿ ಮತ್ತು ಕೇಂದ್ರ ಸರಕಾರವು ನೀಡಿರುವ ಆದೇಶವು ಕಾನೂನಿನಡಿಗೆ ಬರುವುದಿಲ್ಲ ಎಂದು ವಾದಿಸಿದ್ದಾರೆ.ಈಗ ಈಗ ಸಿವಿಸಿ ಮತ್ತು ಕೇಂದ್ರ ಸರ್ಕಾರವು ಈ ವಿಚಾರವಾಗಿ ಉತ್ತರ ನೀಡಬೇಕೆಂದು ಸುಪ್ರಿಂಕೋರ್ಟ್ ತಿಳಿಸಿದೆ.

ಇದೇ ವೇಳೆ ಸದ್ಯದ ಹಂಗಾಮಿ ಸಿಬಿಐ ಮುಖ್ಯಸ್ಥ ಎಂ ನಾಗೇಶರಾವ್ ಅವರು ಯಾವುದೇ ನಿರ್ಧಾರಗಳನ್ನು ತಗೆದುಕೊಳ್ಳುವಂತಿಲ್ಲ, ಬದಲಾಗಿ ಅದು ತನ್ನ ದಿನ ನಿತ್ಯದ ಕಾರ್ಯ ನಿರ್ವಹಣೆಯನ್ನು ಮಾತ್ರ ನಿರ್ವಹಿಸಬೇಕು ಎಂದು ಸುಪ್ರಿಂಕೋರ್ಟ್ ತಿಳಿಸಿದೆ.
 

Trending News