ಗುಜರಾತ್‌ನ ಜುನಾಗಡ್‌ನಲ್ಲಿ ರಸ್ತೆ ಅಪಘಾತ; ಐವರ ಸಾವು, ಇಬ್ಬರಿಗೆ ಗಾಯ

ಭೀಕರ ರಸ್ತೆ ಅಪಘಾತವೊಂದರಲ್ಲಿ  ಕಾರುಗಳೆರಡರ ನಡುವೆ ಢಿಕ್ಕಿಯಾಗಿ ಕನಿಷ್ಠ 5 ಮಂದಿ ಸಾವನ್ನಪ್ಪಿರುವ ಘಟನೆ ಗುಜರಾತ್‌ನ ಜುನಾಗಡ್‌ನಲ್ಲಿ ನಡೆದಿದೆ.

Last Updated : Aug 29, 2019, 03:24 PM IST
ಗುಜರಾತ್‌ನ ಜುನಾಗಡ್‌ನಲ್ಲಿ ರಸ್ತೆ ಅಪಘಾತ; ಐವರ ಸಾವು, ಇಬ್ಬರಿಗೆ ಗಾಯ title=

ಜುನಾಗಡ್: ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗುರುವಾರ ಎರಡು ಕಾರುಗಳು ಒಂದಕ್ಕೊಂದು ಡಿಕ್ಕಿ ಹೊಡೆದ ಪರಿಣಾಮ ರಸ್ತೆ ಅಪಘಾತದಲ್ಲಿ ಐದು ಜನರು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ.

ಕಿಟಕಿಗಳನ್ನು ಒಡೆದು ಮೃತ ದೇಹಗಳನ್ನು ಕಾರಿನಿಂದ ಹೊರತೆಗೆಯಲಾಯಿತು. ಅವರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತಪಟ್ಟ ಐವರಲ್ಲಿ ಮೂವರನ್ನು ಟಿವಿ ಮತ್ತು ಯೂಟ್ಯೂಬ್ ಕಲಾವಿದರಾಗಿದ್ದ ಇಶಾನ್ ಮಿರ್, ಐಜಾಜ್ ಮಿರ್ ಮತ್ತು ಪಾಯಲ್ ಲಾಥಿಯಾ ಎಂದು ಗುರುತಿಸಲಾಗಿದೆ. ಇನ್ನಿಬ್ಬರ ಗುರುತು ಪತ್ತೆಯಾಗಿಲ್ಲ.

Trending News