ಷೇರು ಮಾರುಕಟ್ಟೆಯಲ್ಲಿ ಹಾಹಾಕಾರ 2800 ಅಂಕಗಳಿಂದ ಕುಸಿದ SENSEX

ಸದ್ಯ ಷೇರು ಮಾರುಕಟ್ಟೆಯಲ್ಲಿ CORONAVIRUS ನ ಪ್ರಭಾವ ಕಂಡುಬರಲಾರಂಭಿಸಿದೆ. ಭಾರತೀಯ ಷೇರು ಮಾರುಕಟ್ಟೆಯ ಪಾಲಿಗೆ ಇಂದಿನ ದಿನ BLACK MONDAY ಆಗಿ ಸಾಬೀತಾಗಿದೆ.

Last Updated : Mar 16, 2020, 04:17 PM IST
ಷೇರು ಮಾರುಕಟ್ಟೆಯಲ್ಲಿ ಹಾಹಾಕಾರ 2800 ಅಂಕಗಳಿಂದ ಕುಸಿದ SENSEX title=

ನವದೆಹಲಿ:ಭಾರತೀಯ ಷೇರು ಮಾರುಕಟ್ಟೆಯ ಪಾಲಿಗೆ ಇಂದಿನ ದಿನ BLACK MONDAY ಆಗಿ ಸಾಬೀತಾಗಿದೆ. ನಿಫ್ಟಿ ಹಾಗೂ ಸೆನ್ಸೆಕ್ಸ್ ಎರಡೂ ಷೇರು ಸೂಚ್ಯಂಕಗಳಲ್ಲಿ ಕ್ರಮೇಣವಾಗಿ ಶೇ.8 ಮತ್ತು ಶೇ.8 ರಷ್ಟು ಕುಸಿತ ಕಂಡುಬಂದಿದೆ. ಕೊರೊನಾ ವೈರಸ್ ನ ಭೀತಿ ಜಾಗತಿಕ ಮಾರುಕಟ್ಟೆಯ ಮೇಲೆ ಯಾವ ರೀತಿ ಪರಿಣಾಮ ಬೀರಿದೆ ಎಂದರೆ ಜಾಗತಿಕ ಮಾರುಕಟ್ಟೆಗಳು ನಿರಂತರವಾಗಿ ಕುಸಿಯುತ್ತಲೇ ಇವೆ. ಈ ಮಾಹಾಮಾರಿ ಒಂದೆಡೆ ಜನರನ್ನು ಕೂಡ ತನ್ನ ತೆಕ್ಕೆಗೆ ಸೆಳೆಯುತ್ತಿದ್ದರೆ, ಇನ್ನೊಂದೆಡೆ ಷೇರು ಮಾರುಕಟ್ಟೆಗಳ ಉಸಿರು ಕೂಡ ಬಿಗಿಯಲಾರಂಭಿಸಿದೆ.

ಕೊನೆಯ ಗಂಟೆಯಲ್ಲಿ ಪ್ರಾಬಲ್ಯ ಮೆರೆದ ಭಾರಿ ಮಾರಾಟ ಪ್ರಕ್ರಿಯೆ
ಇಂದಿನ ದಿನದ ವಹಿವಾಟಿನ ಕೊನೆಯ ಗಳಿಗೆಯಲ್ಲಿ ಭಾರಿ ಮಾರಾಟ ಷೇರು ಮಾರುಕಟ್ಟೆಯಲ್ಲಿ ಪ್ರಾಬಲ್ಯ ಮೆರೆದ್ದು, ಸೆನ್ಸೆಕ್ಸ್ 2730 ಅಂಕಗಳಿಂದ ಕುಸಿತ ಅನುಭವಿಸಿದೆ. ಇದೆ ಸಮಯದಲ್ಲಿ ನಿಫ್ಟಿ ಕೂಡ 766 ಅಂಕಗಳ ಭಾರಿ ಕುಸಿತದಿಂದ ತನ್ನ ವಹಿವಾಟು ಮುಂದುವರೆಸಿದೆ.

ಯಾವ ಮಟ್ಟಕ್ಕೆ ವಹಿವಾಟು ನಿಂತು ಹೋಗಿದೆ
ಇಂದಿನ ವಹಿವಾಟಿನಲ್ಲಿ, 30 ಷೇರುಗಳ ಸೂಚ್ಯಂಕ ಹೊಂದಿರುವ ಸೆನ್ಸೆಕ್ಸ್ 2713.41 ಪಾಯಿಂಟ್ ಅಂದರೆ ಶೇ.7.96 ರಷ್ಟು ಕುಸಿತ ಕಂಡು 31390.07 ಸೂಚ್ಯಂಕಕ್ಕೆ ಬಂದು ತನ್ನ ದಿನದ ವಹಿವಾಟನ್ನು ಮುಕ್ತಾಯಗೊಳಿಸಿದೆ. ಇನ್ನೊಂದೆಡೆ ಎನ್ಎಸ್ಇ 50-ಷೇರು ಸೂಚ್ಯಂಕ ಹೊಂದಿರುವ ನಿಫ್ಟಿ ಕೂಡ 756.10 ಪಾಯಿಂಟ್ ಅಥವಾ ಶೇ.7.60 ಕುಸಿತ ಕಂಡು 9199.10 ಅಂಕಗಳಿಗೆ ತನ್ನ ದಿನದ ವಹಿವಾಟನ್ನು ಅಂತ್ಯಗೊಳಿಸಿದೆ.

ಷೇರು ಮಾರುಕಟ್ಟೆ ಕುಸಿಯಲು ಇಲ್ಲಿದೆ ಕಾರಣ
ದೇಶದಲ್ಲಿ ಕರೋನಾ ವೈರಸ್ ಅಪಾಯ ಹೆಚ್ಚುತ್ತಿದೆ ಮತ್ತು ಈ ಕಾರಣದಿಂದಾಗಿ ಹೂಡಿಕೆದಾರರಲ್ಲಿ ಭೀತಿ ಹೆಚ್ಚುತ್ತಿದೆ. ಇದರಿಂದ ಜಾಗತಿಕ ಮಾರುಕಟ್ಟೆಗಳಲ್ಲಿ ಉಂಟಾಗಿರುವ ದೌರ್ಬಲ್ಯ ಮತ್ತು ಸುಸ್ತಿ ಷೇರು ಮಾರುಕಟ್ಟೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ.

ಸೆನ್ಸೆಕ್ಸ್ ನ ಎಲ್ಲಾ ಷೇರುಗಳು ಕುಸಿತ ದಾಖಲಿಸಿವೆ
ಇಂದಿನ ವಹಿವಾಟಿನಲ್ಲಿ, ಸೆನ್ಸೆಕ್ಸ್‌ನ ಎಲ್ಲಾ ಮೂವತ್ತು ಷೇರುಗಳು ಅವನತಿಯ ಕೆಂಪು ಮಾರ್ಕ್ ನಲ್ಲಿ ಕಾಣಿಸಿಕೊಂಡಿವೆ. ಮತ್ತೊಂದೆಡೆ ನಿಫ್ಟಿಯ ಒಟ್ಟು 50 ಷೇರುಗಳ ಪೈಕಿ 49 ಷೇರುಗಳು ರೆಡ್ ಮಾರ್ಕ್ ನಲ್ಲಿ ತನ್ನ ವಹಿವಾಟನ್ನು ನಡೆಸಿವೆ.

Trending News