ಕರೋನಾವೈರಸ್ ಬಿಕ್ಕಟ್ಟಿನ ನಡುವೆ ಬದಲಾಯ್ತು Debit-Credit ಕಾರ್ಡ್‌ಗಳ ನಿಯಮ

ಕೇಂದ್ರ ಸರ್ಕಾರ ಡೆಬಿಟ್ ಕಾರ್ಡ್‌ ಮತ್ತು ಕ್ರೆಡಿಟ್ ಕಾರ್ಡ್‌ಗಳಿಗೆ ಸಂಬಂಧಿಸಿದಂತೆ ಮಾರ್ಚ್ 16 ರಂದು ಐದು ಹೊಸ ನಿಯಮಗಳನ್ನು ಹೊರಡಿಸಿತ್ತು. ಆದಾಗ್ಯೂ ಸಾಕಷ್ಟು ಜನರಿಗೆ ಈ ನಿಯಮಗಳ ಬಗ್ಗೆ ಮಾಹಿತಿ ದೊರೆತಿಲ್ಲ.  

Last Updated : Apr 15, 2020, 09:51 AM IST
ಕರೋನಾವೈರಸ್ ಬಿಕ್ಕಟ್ಟಿನ ನಡುವೆ ಬದಲಾಯ್ತು  Debit-Credit ಕಾರ್ಡ್‌ಗಳ ನಿಯಮ title=

ನವದೆಹಲಿ: ಕೊರೊನಾವೈರಸ್ (Coronavirus) ಹರಡುವುದನ್ನು ತಡೆಯುವ ಸಲುವಾಗಿ ಸರ್ಕಾರ ಮೇ 3 ರವರೆಗೆ ಲಾಕ್‌ಡೌನ್ ಅನ್ನು ವಿಸ್ತರಿಸಿದೆ. ಮಾರ್ಚ್‌ನಲ್ಲಿ ಈ ವೈರಸ್‌ನಿಂದಾಗಿ ದೇಶದಲ್ಲಿ ಪ್ರಕರಣಗಳು ಹೆಚ್ಚಾಗಲು ಪ್ರಾರಂಭಿಸಿದಾಗ ಕೇಂದ್ರ ಸರ್ಕಾರ ಡೆಬಿಟ್ ಕಾರ್ಡ್‌ (Debit Card) ಮತ್ತು ಕ್ರೆಡಿಟ್ ಕಾರ್ಡ್‌ (Credit Card)ಗಳಿಗೆ ಸಂಬಂಧಿಸಿದಂತೆ ಮಾರ್ಚ್ 16 ರಂದು ಐದು ಹೊಸ ನಿಯಮಗಳನ್ನು ಹೊರಡಿಸಿತ್ತು. ಆದಾಗ್ಯೂ ಸಾಕಷ್ಟು ಜನರಿಗೆ ಈ ನಿಯಮಗಳ ಬಗ್ಗೆ ಮಾಹಿತಿ ದೊರೆತಿಲ್ಲ.

ಈ ಜನರ ಮೇಲೆ ಹೆಚ್ಚು ಪರಿಣಾಮ:
ಮಾರ್ಚ್ 16, 2020 ರಿಂದ ಹೊಸ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು ಪಡೆದಿರುವ ಗ್ರಾಹಕರ ಮೇಲೆ  ಈ ನಿಯಮಗಳು ಹೆಚ್ಚಿನ ಪರಿಣಾಮ ಬೀರುತ್ತವೆ. ವಿಶೇಷವಾಗಿ ಲಾಕ್‌ಡೌನ್ ಕಾರಣ ಆನ್‌ಲೈನ್ ವಹಿವಾಟು ನಡೆಸಲು ತೊಂದರೆ ಉಂಟಾಗುತ್ತದೆ.

ಕೇಂದ್ರ ಸರ್ಕಾರ ಹೊರಡಿಸಿರುವ ಹೊಸ ನಿಯಮಗಳು ಇವು:

1. ಮಾರ್ಚ್ 16 ರಿಂದ ನೀಡಲಾಗುವ ಎಲ್ಲಾ ಹೊಸ ಅಥವಾ ಹಳೆಯ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳು ಭಾರತದಾದ್ಯಂತದ ಎಟಿಎಂ ಮತ್ತು ಪಾಯಿಂಟ್ ಆಫ್ ಸೇಲ್ (ಪಿಒಎಸ್) ಟರ್ಮಿನಲ್‌ಗಳಲ್ಲಿ ಮಾತ್ರ ವಹಿವಾಟು ನಡೆಸಲು ಸಾಧ್ಯವಾಗುತ್ತದೆ.

2. ಆನ್‌ಲೈನ್ (Online) ಅಥವಾ ಸಂಪರ್ಕವಿಲ್ಲದ ವಹಿವಾಟಿಗೆ ಕಾರ್ಡ್‌ಹೋಲ್ಡರ್ ಸೇವೆಯನ್ನು ಪ್ರಾರಂಭಿಸಲು ಗ್ರಾಹಕರು ತಾವು ಕಾರ್ಡ್ ಪಡೆದ ಬ್ಯಾಂಕನ್ನು ಸಂಪರ್ಕಿಸಬೇಕಾಗುತ್ತದೆ.

3. ಕಾರ್ಡುದಾರರು Debit-Credit ಕಾರ್ಡ್‌ಗಳ ಅಂತರರಾಷ್ಟ್ರೀಯ ಬಳಕೆಗಾಗಿ ತಮ್ಮ ಬ್ಯಾಂಕ್ ಅನ್ನು ಸಂಪರ್ಕಿಸಬೇಕಾಗುತ್ತದೆ.

4. ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ನ ಆನ್‌ಲೈನ್ ಅಥವಾ ಅಂತರರಾಷ್ಟ್ರೀಯ ವಹಿವಾಟು ದೀರ್ಘಕಾಲದವರೆಗೆ ಇಲ್ಲದಿದ್ದರೆ ಸೇವೆಗಳನ್ನು ಸ್ಥಗಿತಗೊಳಿಸುವ ಹಕ್ಕನ್ನು ಬ್ಯಾಂಕ್‌ ಹೊಂದಿರುತ್ತದೆ.

5. ಯಾವುದೇ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಅನ್ನು ತನ್ನ ಆಯ್ಕೆಯ ಯಾವುದೇ ಸಮಯದಲ್ಲಿ ನಿಷ್ಕ್ರಿಯಗೊಳಿಸುವ ಹಕ್ಕನ್ನು ಬ್ಯಾಂಕ್ ಹೊಂದಿರುತ್ತದೆ. ಕಾರ್ಡಿನ ಅಪಾಯದ ವಹಿವಾಟಿನ ಆಧಾರದ ಮೇಲೆ ಇದನ್ನು ನಿರ್ಧರಿಸಲಾಗುತ್ತದೆ.

Trending News