'Rahul Gandhi ಅವರ ಕಾಲರ್ ಹಿಡಿದು ನೂಕಿದ್ದು, ಈ ದೇಶದ ಪ್ರಜಾಪ್ರಭುತ್ವದ ಗ್ಯಾಂಗ್ ರೇಪ್'

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಜೊತೆಗೆ ಉತ್ತರ ಪ್ರದೇಶ ಪೊಲೀಸರು ನಡೆದುಕೊಂಡಿರುವ ರೀತಿಗೆ ದೇಶಾದ್ಯಂತ ಯಾರೂ ಬೆಂಬಲ ನೀಡಲು ಸಾಧ್ಯವಿಲ್ಲ. ರಾಹುಲ್, ಗಾಂಧೀಜಿ ಅವರ ಮೊಮ್ಮಗ ಹಾಗೂ ರಾಜೀವ ಗಾಂಧಿ ಅವರ ಪುತ್ರರಾಗಿದ್ದಾರೆ ಎಂಬುದನ್ನು ನಾವು ಮರೆಯಬಾರದು ಎಂದು ಸಂಜಯ್ ರಾವುತ್ ಹೇಳಿದ್ದಾರೆ.

Last Updated : Oct 2, 2020, 03:43 PM IST
  • ಉತ್ತರ ಪ್ರದೇಶದ ಹಾತ್ರಸ್ ನಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಗೆ ನೂಕುನುಗ್ಗಲು.
  • ಇದು ದೇಶದ ಪ್ರಜಾಪ್ರಭುತ್ವದ ಗ್ಯಾಂಗ್ ರೇಪ್ ಎಂದ ಶಿವಸೇನಾ ಮುಖಂಡ ಸಂಜಯ್ ರಾವುತ್.
  • ದೇಶದ ಯಾವುದೇ ವ್ಯಕ್ತಿ ಇದನ್ನು ಬೆಂಬಲಿಸಲು ಸಾಧ್ಯವಿಲ್ಲ ಎಂದ ರಾವುತ್.
'Rahul Gandhi ಅವರ ಕಾಲರ್ ಹಿಡಿದು ನೂಕಿದ್ದು, ಈ ದೇಶದ ಪ್ರಜಾಪ್ರಭುತ್ವದ ಗ್ಯಾಂಗ್ ರೇಪ್' title=

ನವದೆಹಲಿ: ಹತ್ರಾಸ್‌ನಲ್ಲಿ ದಲಿತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ (Hathras Gangrape) ಮತ್ತು ಕೊಲೆ ಮಾಡಿದ ನಂತರ ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ರಾಜಕೀಯಕ್ಕೆ ಇದೀಗ ಶಿವಸೇನೆ ಎಂಟ್ರಿ ನೀಡಿದೆ.  ಶಿವಸೇನೆ ಮುಖಂಡ ಸಂಜಯ್ ರೌತ್ ಅವರು ರಾಹುಲ್ ಗಾಂಧಿಯವರ ಕಾಲರ್ ಹಿಡಿಯಲಾಗಿರುವ ಘಟನೆಯ ತನಿಕೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ, ಇದು ಪ್ರಜಾಪ್ರಭುತ್ವಕ್ಕೆ ಮಾಡಿದ ಅವಮಾನ ಎಂದು ಅವರು ಹೇಳಿದ್ದಾರೆ.

ಇದನ್ನು ಓದಿ- ಹಥ್ರಾಸ್ ಗೆ ತೆರಳುತ್ತಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ನೆಲಕ್ಕೆ ತಳ್ಳಿದ ಪೊಲೀಸರು

ಈ ಕುರಿತು ಹೇಳಿಕೆ ನೀಡಿರುವ ಸಂಜಯ್ ರಾವುತ್, ರಾಹುಲ್ ಗಾಂಧಿ ಅವರ ಕಾಲರ್ ಹಿಡಿದು ಅವರನ್ನು ತಳ್ಳಿ , ಕೆಡುಹಿದ ರೀತಿ ಅಂದರೆ ದೇಶದ ಪ್ರಜಾಪ್ರಭುತ್ವದ ಗ್ಯಾಂಗ್ ರೇಪ್ ಎಂದು ಹೇಳಿದ್ದಾರೆ. ಈ ಗ್ಯಾಂಗ್ ರೇಪ್ ತನಿಖೆ ಕೂಡ ನಡೆಯಬೇಕು.  ರಾಹುಲ್ ಗಾಂಧಿ ಓರ್ವ ರಾಷ್ಟ್ರೀಯ ಮುಖಂಡರಾಗಿದ್ದಾರೆ ಎಂದು ಸಂಜಯ್ ರಾವುತ್ ಹೇಳಿದ್ದಾರೆ. ಕಾಂಗ್ರೆಸ್ ಜೊತೆಗೆ ಶಿವಸೇನೆ ಹಲವು ಭಿನ್ನಾಭಿಪ್ರಾಯಗಳನ್ನೂ ಹೊಂದಿದೆ, ಆದರೆ ಕಾಂಗ್ರೆಸ್ ನ ಮುಖಂಡರ ಜೊತೆಗೆ ಈ ರೀತಿಯ ವ್ಯವಹಾರ ಸಹಿಸಿಕೊಳ್ಳಲಾಗುವುದಿಲ್ಲ ಎಂದು ರಾವುತ್ ಹೇಳಿದ್ದಾರೆ.

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಜೊತೆಗೆ ಉತ್ತರ ಪ್ರದೇಶ ಪೊಲೀಸರು ನಡೆದುಕೊಂಡಿರುವ ರೀತಿಗೆ ದೇಶಾದ್ಯಂತ ಯಾರೂ ಬೆಂಬಲ ನೀಡಲು ಸಾಧ್ಯವಿಲ್ಲ. ರಾಹುಲ್, ಗಾಂಧೀಜಿ ಅವರ ಮೊಮ್ಮಗ ಹಾಗೂ ರಾಜೀವ ಗಾಂಧಿ ಅವರ ಪುತ್ರರಾಗಿದ್ದಾರೆ ಎಂಬುದನ್ನು ನಾವು ಮರೆಯಬಾರದು ಎಂದು ಸಂಜಯ್ ರಾವುತ್ ಹೇಳಿದ್ದಾರೆ. ಈ ಜನರು ದೇಶಕ್ಕಾಗಿ ತಮ್ಮ ಬಲಿದಾನ ನೀಡಿದ್ದಾರೆ. ರಾಹುಲ್ ಗಾಂಧಿ ಅವರಿಗೆ ಹಾತ್ರಸ್ ನಲ್ಲಿ ಸಂತ್ರಸ್ತ ಯುವತಿಗೆ ಭೇಟಿಯಾಗುವ ಅವಕಾಶ ನೀಡಬೇಕಾಗಿತ್ತು ಎಂದು ಅವರು ಹೇಳಿದ್ದಾರೆ.

ಹಾತ್ರಸ್ ಜಿಲ್ಲೆಯ ಒಂದು ಗ್ರಾಮದಲ್ಲಿ 19 ವರ್ಷ ವಯಸ್ಸಿನ ದಲಿತ ಯುವತಿಯ ಗ್ಯಾಂಗ್ ರೇಪ್ ಬಳಿಕ ಅವರ ಬೆನ್ನು ಹಾಗೂ ಕುತ್ತಿಗೆಯ ಮೂಳೆಯನ್ನು ಮುರಿಯಲಾಗಿದೆ. ಅಷ್ಟೇ ಅಲ್ಲ ಅವಳ ನಾಲಿಗೆಯನ್ನು ಕೂಡ ಕತ್ತರಿಸಲಾಗಿದೆ. ಬಳಿಕ ಕುಟುಂಬಸ್ಥರು ಆಕೆಯನ್ನು ಅಲಿಗಡ್ ನ ಜವಾಹರಲಾಲ್ ನೆಹರು ಮೆಡಿಕಲ್ ಕಾಲೇಜಿನಲ್ಲಿ ದಾಖಲಿಸಿದ್ದರು. ಅವಳ ಪರಿಸ್ಥಿತಿ ಸುಧಾರಿಸಿದ ಬಳಿಕ ಅವಳನ್ನು ದೆಹಲಿಯ ಸಫ್ದರ್ ಜಂಗ್ ಆಸ್ಪತ್ರೆಗೆ ರೆಫರ್ ಮಾಡಲಾಗಿತ್ತು. ಮಂಗಳವಾರ ಆಸ್ಪತ್ರೆಯಲ್ಲೂ ಯುವತಿ ಕೊನೆಯುಸಿರೆಳೆದಿದ್ದಳು.

ಇದನ್ನು ಓದಿ- ಹಥ್ರಾಸ್ ಪ್ರತಿಭಟನೆ ವಿಚಾರವಾಗಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಿರುದ್ಧ ಎಫ್ಐಆರ್ ದಾಖಲು

ಈ ಘಟನೆಯ ಬಳಿಕ ದೇಶಾದ್ಯಂತ ವಿವಿಧ ಕಡೆಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಜೊತಗೆ ದೂರವಾಣಿ ಮೂಲಕ ಮಾತುಕತೆ ನಡೆಸಿ ಕಠಿಣ ಕ್ರಮ ಕೈಗೊಳ್ಳಲು ಆದೇಶ ನೀಡಿದ್ದಾರೆ.

ಇದೆ ವಿಷಯಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಕುಟುಂಬ ಸದಸ್ಯರ ಜೊತೆಗೆ ಭೇಟಿ ಮಾಡಲು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹಾಗೂ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಗುರುವಾರ ಬೆಳಗ್ಗೆ ತಂಡದೊಂದಿಗೆ ತಲುಪಿದ್ದರು. ಆದರೆ, DND ಬಳಿ ಅವರನ್ನು ಪೊಲೀಸರು ತಡೆಹಿಡಿದಿದ್ದಾರೆ.

ಈ ವೇಳೆ ಸಂಭವಿಸಿದ ನೂಕು ನುಗ್ಗಲಿನಲ್ಲಿ ರಾಹುಲ್ ಗಾಂಧಿ ನೆಲಕ್ಕೆ ಕುಸಿದಿದ್ದರು. ಬಳಿಕ ಪೊಲೀಸರು ರಾಹುಲ್ ಹಾಗೂ ಪ್ರಿಯಾಂಕಾ ಅವರನ್ನು ಬಂಧಿಸಿದ್ದರು ಹಾಗೂ ಗ್ರೇಟರ್ ನೊಯಿಡಾದಲ್ಲಿರುವ ಬುದ್ಧ ಇಂಟರ್ನ್ಯಾಷನಲ್ ಸರ್ಕಿಟ್ ನಲ್ಲಿ ಬಂದ್ ಮಾಡಿದರು. ಸುಮಾರು ಅರ್ಧಗಂಟೆ ಬಂಧನದಲ್ಲಿ ಇಟ್ಟ ಬಳಿದ ಅವರನ್ನು ಬಿಡುಗಡೆಗೊಳಿಸಲಾಗಿತ್ತು ಹಾಗೂ ನಂತರ ರಾಹುಲ್ -ಪ್ರಿಯಾಂಕಾ ದೆಹಲಿಯ ತಮ್ಮ ಮ್ಯಾನೇಜ್ ಮರಳಿದ್ದಾರೆ.

Trending News