School Reopening: 'ಶಾಲೆಗಳನ್ನು ತೆರೆಯದಿರುವುದರ ಅಪಾಯಗಳು ತೀರಾ ಗಂಭೀರವಾಗಿವೆ, ನಿರ್ಲಕ್ಷ ಸರಿಯಲ್ಲ'

School Reopening - ಶಿಕ್ಷಣ, ಮಹಿಳೆಯರು, ಮಕ್ಕಳು, ಯುವಕರು ಮತ್ತು ಕ್ರೀಡೆಗಳ ಸಂಸತ್ತಿನ ಸ್ಥಾಯಿ ಸಮಿತಿಯ ವರದಿಯು ಶಾಲೆಗಳನ್ನು  ತೆರೆಯದಿರುವುದರ ಅಪಾಯಗಳು ತುಂಬಾ ಗಂಭೀರವಾಗಿದ್ದು ಅವುಗಳನ್ನು ನಿರ್ಲಕ್ಷಿಸಲಾಗುವುದಿಲ್ಲ ಎಂದು ಹೇಳಿದೆ.

Written by - Nitin Tabib | Last Updated : Aug 9, 2021, 04:25 PM IST
  • ಶಾಲೆಗಳನ್ನು ತೆರೆಯದಿರುವುದರ ಅಪಾಯಗಳು ತೀರಾ ಗಂಭೀರವಾಗಿವೆ, ನಿರ್ಲಕ್ಷ ಸರಿಯಲ್ಲ
  • ಸಂಸತ್ತಿನ ಸ್ಥಾಯಿ ಸಮಿತಿಯ ವರದಿ.
  • ಶಾಲೆಗಳು ಮುಚ್ಚಿಕೊಂಡಿರುವುದರಿಂದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅಪಾರ ಹಾನಿಯುಂಟಾಗಿದೆ.
School Reopening: 'ಶಾಲೆಗಳನ್ನು ತೆರೆಯದಿರುವುದರ ಅಪಾಯಗಳು ತೀರಾ ಗಂಭೀರವಾಗಿವೆ, ನಿರ್ಲಕ್ಷ ಸರಿಯಲ್ಲ'  title=
School Reopening(File Photo)

ನವದೆಹಲಿ: School Reopening - ಕೊರೊನಾ ಮಹಾಮಾರಿಯ (Corona Pandemic) ಹಿನ್ನೆಲೆ ಶಾಲೆಗಳು (Primary School) ಮುಚ್ಚಿರುವುದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಭಾರಿ ಹಾನಿಯುಂಟಾಗಿದೆ ಎಂದು ಸಂಸದೀಯ ಸ್ಥಾಯಿ ಸಮಿತಿ (Parliamentary Standing Committee) ಹೇಳಿದೆ. ಅಪಾರ ಹಾನಿಗೊಳಗಾಗುತ್ತಿರುವ ವಿಷಯಗಳಲ್ಲಿ ವಿಶೇಷವಾಗಿ ಗಣಿತ, ವಿಜ್ಞಾನ ಹಾಗೂ ಭಾಷೆಗೆ ಸಂಬಂಧಿಸಿದ ನೈತಿಕ ಜ್ಞಾನ ವಿದ್ಯಾರ್ಥಿಗಳಲ್ಲಿ ಕ್ಷೀಣಿಸುತ್ತಿದೆ ಎನ್ನಲಾಗಿದೆ.  ಶಿಕ್ಷಣ, ಮಹಿಳೆಯರು, ಮಕ್ಕಳು, ಯುವಕರು ಮತ್ತು ಕ್ರೀಡೆಗಳ ಸಂಸತ್ತಿನ ಸ್ಥಾಯಿ ಸಮಿತಿಯ ವರದಿಯು ಶಾಲೆಗಳನ್ನು ತೆರೆಯದಿರುವದರ ಅಪಾಯಗಳು ತುಂಬಾ ಗಂಭೀರವಾಗಿದ್ದು ಅವುಗಳನ್ನು ನಿರ್ಲಕ್ಷಿಸಲಾಗುವುದಿಲ್ಲ ಎಂದು ಹೇಳಿದೆ. 

ಒಂದು ವರ್ಷಕ್ಕಿಂತ ಅಧಿಕ ಕಾಲ ಅಧ್ಯಯನದ ನಷ್ಟದಿಂದ ವಿದ್ಯಾರ್ಥಿಗಳ ಗಣಿತ, ವಿಜ್ಞಾನ ಮತ್ತು ಭಾಷೆಗೆ ಸಂಬಂಧಿಸಿದ ವಿಷಯಗಳಲ್ಲಿನ ಮೂಲಭೂತ ಜ್ಞಾನವು ದುರ್ಬಲಗೊಂದಿರಬೇಕು. ಈ ಶೈಕ್ಷಣಿಕ ನಷ್ಟವು ತುಂಬಾ ದೊಡ್ಡದಾಗಿದ್ದು, ಇದು ಮಕ್ಕಳ ಅರಿವಿನ ಸಾಮರ್ಥ್ಯವನ್ನು ದುರ್ಬಲಗೊಳಿಸಬಲ್ಲದು ಎಂದು ಸಮೀತಿ ಹೇಳಿದೆ.

ಇದನ್ನೂ ಓದಿ-EPF ಖಾತೆದಾರರು ತಕ್ಷಣ ಈ ಕೆಲಸ ಮಾಡಿ, ಇಲ್ಲವಾದರೆ 7 ಲಕ್ಷ ರೂ ಗಳ ನಷ್ಟವಾಗಬಹುದು

ಮಾನಸಿಕ ಆರೋಗ್ಯ ಹಾಗೂ ಸರ್ವತೋಮುಖ ಬೆಳವಣಿಗೆಗೆ  ಅಪಾಯ ಎದುರಾಗಿದೆ
ಶಾಲೆಗಳ ಮುಚ್ಚುವಿಕೆಯು ಮಕ್ಕಳ ಶಿಕ್ಷಣ, ಆಹಾರ, ಮಾನಸಿಕ ಆರೋಗ್ಯ ಮತ್ತು ಸರ್ವತೋಮುಖ ಬೆಳವಣಿಗೆಯನ್ನು ಅಪಾಯಕ್ಕೆ ತಳ್ಳಿದೆ ಮತ್ತು ಕೆಲವು ವಿದ್ಯಾರ್ಥಿಗಳು, ಅದರಲ್ಲೂ ವಿಶೇಷವಾಗಿ ಹುಡುಗಿಯರು ಇನ್ನು ಮುಂದೆ ಶಾಲೆಗೆ ಮರಳಲು ಸಾಧ್ಯವಾಗುವುದಿಲ್ಲ ಎಂಬ ಭಯವೂ ಇದೆ. ಶಿಕ್ಷಣದ ಡಿಜಿಟಲ್ ಸ್ವರೂಪವನ್ನು ಗಮನದಲ್ಲಿಟ್ಟುಕೊಂಡು ಪ್ರತಿ ಶಾಲೆಯನ್ನು ಅದಕ್ಕೆ ಸೂಕ್ತವಾಗಿಸಬೇಕು ಮತ್ತು ದೇಶಾದ್ಯಂತ ತನ್ನ ವ್ಯಾಪ್ತಿಯನ್ನು ವಿಸ್ತರಿಸಲು ಹೆಚ್ಚುವರಿ ಹಣವನ್ನು ಹಂಚಬೇಕು ಎಂದು ಸಮಿತಿ (Parliamentary Committee) ಶಿಫಾರಸ್ಸು ಮಾಡಿದೆ.

ಇದನ್ನೂ ಓದಿ-Gold Price Today : ಹತ್ತು ಸಾವಿರದಷ್ಟು ಅಗ್ಗವಾಯಿತು ಚಿನ್ನದ ಬೆಲೆ , ಇಂದಿನ ದರಕ್ಕಾಗಿ ಇಲ್ಲಿ ಚೆಕ್ ಮಾಡಿ

ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಿಬ್ಬಂದಿಗೆ ವ್ಯಾಕ್ಸಿನೇಷನ್ (Vaccination In India) ಅನ್ನು ಉತ್ತೇಜಿಸಿ, ಶಾಲೆಗಳು ಆದಷ್ಟು ಬೇಗ ಕಾರ್ಯನಿರ್ವಹಿಸುವಂತೆ ಮಾಡಬೇಕು. ಇದಲ್ಲದೆ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಕಡಿಮೆ ಮಾಡಲು ತರಗತಿಗಳನ್ನು ಪರ್ಯಾಯ ದಿನಗಳಲ್ಲಿ ಅಥವಾ ಎರಡು ಪಾಳಿಯಲ್ಲಿ ಆಯೋಜಿಸಬಹುದು. ಇದರ ಜೊತೆಗೆ ದೈಹಿಕ ದೂರ, ಮಾಸ್ಕ್ ಧರಿಸುವಿಕೆ ಮತ್ತು ಆಗಾಗ್ಗ ಕೈತೊಳೆಯುವಿಕೆಯಂತಹ ಕೋವಿಡ್ (Covid-19) ಪ್ರೋಟೋಕಾಲ್ ಅನ್ನು ಕಡ್ಡಾಯವಾಗಿವಾಗಿಸಬೇಕು. ಹಾಜರಾತಿ ಸಮಯದಲ್ಲಿ ನಿಯಮಿತ ಥರ್ಮಲ್ ಸ್ಕ್ರೀನಿಂಗ್ ನಡೆಸಿ ಯಾವುದೇ ಸೋಂಕಿತ ವಿದ್ಯಾರ್ಥಿ, ಶಿಕ್ಷಕ ಅಥವಾ ಉದ್ಯೋಗಿಯನ್ನು ತ್ವರಿತವಾಗಿ ಗುರಿತಿಸಿ ಅವರನ್ನು ಪ್ರತ್ಯೇಕಿಸುವ ಮೂಲಕ  ಯಾದೃಚ್ಛಿಕ RT-PCR ಪರೀಕ್ಷೆಗಳನ್ನು ನಡೆಸಬೇಕು ಎಂದು ಸಮಿತಿ ಹೇಳಿದೆ.

ಇದನ್ನೂ ಓದಿ-Viral Video: ಚಲಿಸುತ್ತಿದ್ದ ರೈಲಿನಿಂದ ಬೀಳುತ್ತಿದ್ದ ಮಹಿಳೆಯನ್ನು ರಕ್ಷಿಸಿದ ಆರ್‌ಪಿಎಫ್ ಸಿಬ್ಬಂದಿ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News