ಬಿಹಾರದಲ್ಲಿ ಹಳಿ ತಪ್ಪಿದ ಸೀಮಾಂಚಲ್‌ ಎಕ್ಸ್‌ಪ್ರೆಸ್‌, 6 ಸಾವು

ದೆಹಲಿಯತ್ತ ಬರುತ್ತಿದ್ದ  ರೈಲಿನ 9 ಬೋಗಿಗಳು ಹಳಿ ತಪ್ಪಿದ್ದು, 3 ಬೋಗಿಗಳು ಸ್ಲೀಪರ್‌ ಕೋಚ್‌ ಆಗಿವೆ ಎಂದು ತಿಳಿದು ಬಂದಿದೆ. 

Last Updated : Feb 3, 2019, 08:39 AM IST
ಬಿಹಾರದಲ್ಲಿ ಹಳಿ ತಪ್ಪಿದ ಸೀಮಾಂಚಲ್‌ ಎಕ್ಸ್‌ಪ್ರೆಸ್‌, 6 ಸಾವು title=

ಪಾಟ್ನಾ: ಬಿಹಾರದಲ್ಲಿ ಸೀಮಾಂಚಲ ಎಕ್ಸ್‌ಪ್ರೆಸ್‌ ರೈಲು ಹಳಿ ತಪ್ಪಿ  ಕನಿಷ್ಠ 6 ಮಂದಿ ಸಾವನ್ನಪ್ಪಿರುವ ಧಾರುಣ ಘಟನೆ ಭಾನುವಾರ ನಸುಕಿನ ವೇಳೆ ನಡೆದಿದ್ದು ಘಟನೆಯಲ್ಲಿ ಹಲವರು ಗಾಯಗೊಂಡಿರುವುದಾಗಿ ವರದಿಯಾಗಿದೆ. ಘಟನಾ ಸ್ಥಳಕ್ಕೆ ವೈದ್ಯರು ದೌಡಾಯಿಸಿದ್ದು, ಗಾಯಾಳುಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. 

ಮೂಲಗಳ ಪ್ರಕಾರ ದೆಹಲಿಗೆ ತೆರಳುತ್ತಿದ್ದ ಸೀಮಾಂಚಲ ಎಕ್ಸ್‌ಪ್ರೆಸ್ ರೈಲು ಬಿಹಾರದ ಸಹದಾಯಿ ಬುಜರ್ಗ್‌ ಎಂಬಲ್ಲಿ ಬೆಳಗ್ಗೆ 3:58 ಗಂಟೆಗೆರೈಲಿನ 9 ಬೋಗಿಗಳು ಹಳಿ ತಪ್ಪಿದ್ದು, 3 ಬೋಗಿಗಳು ಸ್ಲೀಪರ್‌ ಕೋಚ್‌ ಆಗಿವೆ ಎಂದು ತಿಳಿದು ಬಂದಿದೆ. ಸ್ಥಳದಲ್ಲಿ ರಕ್ಷಣಾ ಕಾರ್ಯ ಭರದಿಂದ ನಡೆಸಲಾಗುತ್ತಿದೆ. 

ದುರಂತ ಸಂಭವಿಸಿದ ಸಂದರ್ಭದಲ್ಲಿ 12487 ಜೋಗಬಾನಿ-ಆನಂದ್ ವಿಹಾರ್ ಸೀಮಾಂಚಲ್ ಎಕ್ಸ್‌ಪ್ರೆಸ್ ಅತೀ ವೇಗದಲ್ಲಿ ಚಲಿಸುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ರೈಲ್ವೆ ಇಲಾಖೆಯು ಸಂತ್ರಸ್ತರಿಗಾಗಿ ಹಲವಾರು ಸಹಾಯವಾಣಿ ಸಂಖ್ಯೆಗಳು ನೀಡಿದೆ ಎಂದು ಕೇಂದ್ರ ರೈಲ್ವೆ ವಕ್ತಾರ ರಾಜೇಶ್ ಕುಮಾರ್ ಹೇಳಿದ್ದಾರೆ. ಸಹಾಯವಾಣಿ ಸಂಖ್ಯೆ, ಸೋನ್ಪುರದ 06158221645, ಹಾಜಿಪುರ್ನ 06224272230 ಮತ್ತು ಬಾರೂನಿಯ ಸಂಖ್ಯೆ 0627923222 ಸೇರಿವೆ. ಪಾಟ್ನಾ ಸಂಖ್ಯೆ 06122202290, 06122202291, 06122202292, 06122213234.
 

Trending News